ಮುಂಬೈ: ಸಚಿನ್ ನರ್ವಾಲ್ ಅವರ ರೈಡಿಂಗ್ ಮತ್ತು ಸುರ್ಜಿತ್ ಸಿಂಗ್ ಅವರ ಕ್ಯಾಚಿಂಗ್ ಬಲದಿಂದ ಬೆಂಗಳೂರು ಬುಲ್ಸ್ ತಂಡ, ಪ್ರೊ ಕಬಡ್ಡಿ ಲೀಗ್ ಪಂದ್ಯ ದಲ್ಲಿ ಸೋಮವಾರ ಪಟ್ನಾ ಪೈರೇಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 35–33 ರಿಂದ ಪಟ್ನಾ ವಿರುದ್ಧ ಗೆದ್ದಿತು. ತಂಡವು ರೈಡಿಂಗ್‌ನಿಂದ 15 ಮತ್ತು ಟ್ಯಾಕಲ್‌ನಿಂದ 16 ಪಾಯಿಂಟ್ಸ್ ಸಂಗ್ರಹಿಸಿತು. ಪಂದ್ಯದ ಮೊದಲಾರ್ಧದಲ್ಲಿ ಪಟ್ನಾ ತಂಡವು 20–12ರಿಂದ ಮುನ್ನಡೆ ಸಾಧಿಸಿತ್ತು. ಆದರೆ, ವಿರಾಮದ ಬಳಿಕ ಚುರುಕಾದ ಆಟ ಪ್ರದರ್ಶಿಸಿದ ಬೆಂಗಳೂರು ತಂಡ ಮುನ್ನಡೆ ಸಾಧಿಸಿತು.

ರೇಡರ್ ಸಚಿನ್ ನರ್ವಾಲ್, ಡಿಫೆಂಡರ್ ಸುರ್ಜಿತ್ ಸಿಂಗ್ ಕ್ರಮವಾಗಿ 9 ಮತ್ತು 8 ಅಂಕ ಗಳಿಸಿದರು. ಇವರಿಗೆ ಸಹ ಆಟಗಾರರಾದ ರಣ ಸಿಂಗ್, ಸುಶೀಲ್ ತಲಾ 4 ಅಂಕ ಗಳಿಸಿ ಬೆಂಬಲ ನೀಡಿದರು.

ಟೂರ್ನಿಯಲ್ಲಿ ಬೆಂಗಳೂರು ತಂಡವು ಒಟ್ಟು ಹನ್ನೆರಡು ಪಂದ್ಯಗಳನ್ನು ಆಡಿ ಐದರಲ್ಲಿ ಜಯಿಸಿದೆ. 31 ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಒಟ್ಟು 11 ಪಂದ್ಯಗಳನ್ನು ಆಡಿರುವ ಪಟ್ನಾ ಪೈರೇಟ್ಸ್ ತಂಡ, ಐದರಲ್ಲಿ ಗೆದ್ದು ಎಂಟನೇ ಸ್ಥಾನದಲ್ಲಿದೆ.

ದಬಾಂಗ್ ಡೆಲ್ಲಿಗೆ ಗೆಲುವು:

ಮತ್ತೊಂದು ಪಂದ್ಯದಲ್ಲಿ ಆತಿಥೇಯ ಯು ಮುಂಬಾ ತಂಡವು 34–40 ರಿಂದ ದಬಾಂಗ್ ಡೆಲ್ಲಿ ವಿರುದ್ಧ ಪರಾಭವಗೊಂಡಿತು. ದಬಾಂಗ್ ಪರ ರೈಡರ್ ಅಶು ಮಲ್ಲಿಕ್ 13 ಅಂಕದೊಂದಿಗೆ ‘ಸೂಪರ್ ಟೆನ್’ ಸಾಧನೆ ಮಾಡಿದರು. ಆಲ್‌ರೌಂಡ್ ಆಟಗಾರ ಅಮೀರ್ ಮೊಹಮ್ಮದ್ ಜಫರ್ ದಾನೇಶ್ (11) ಮತ್ತು ರೈಡರ್ ಗುಮಾನ್ ಸಿಂಗ್ (9) ಮುಂಬೈ ಪರ ಹೆಚ್ಚು ಅಂಕ ತಂದುಕೊಟ್ಟರು.

ಇಂದಿನ ಪಂದ್ಯ

ತೆಲುಗು ಟೈಟನ್ಸ್–ಬೆಂಗಾಲ್ ವಾರಿಯರ್ಸ್ (ರಾತ್ರಿ 8)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.