ನಿಮ್ಮ ಸ್ಕೂಲಿಗೆ ಸೇರಿಸಿ ಒಂದು ವರ್ಷಾನೇ ಆಗಿದೆ ಸಾರ್, ಇನ್ನೂ ನಮ್ಮ ಮಗ ಇಂಗ್ಲಿಷ್‌ನಲ್ಲಿ ಮಾತಾಡೋದೇ ಇಲ್ವಲ್ಲ?!'

`ನಮ್ಮ ಶಾಲೆನಲ್ಲಿ ಎಲ್ರೂ, ಯಾವಾಗ್ಲೂ ಇಂಗ್ಲಿಷ್‌ನಲ್ಲೇ ಮಾತಾಡ್ಬೇಕು ಅಂತ ರೂಲ್ ಇದೆ. ತಪ್ಪಿದ್ರೆ 10 ರೂಪಾಯಿ `ಫೈನ್'.

ರಾಜಕಾರಣಿಯೊಬ್ಬ ಲಂಡನ್ ಪ್ರವಾಸ ಮುಗಿಸಿ ಬಂದು ಹೇಳಿದ್ನಂತೆ `ಇಂಗ್ಲೆಂಡ್‌ನಲ್ಲಿ ಈಗ ತಾನೇ ಹುಟ್ಟಿದ ಮಕ್ಕಳಿಂದ ಹಿಡಿದು ಎಲ್ಲ ಚಿಕ್ಕ ಚಿಕ್ಕ ಮಕ್ಳೂ ಇಂಗ್ಲಿಷ್ ಎಷ್ಟ್ ಚೆನ್ನಾಗಿ ಮಾತಾಡ್ತಾರೆ ಗೊತ್ತಾ. ನಮ್ಮ ಭಾರತದಲ್ಲೂ ಇದೇ ಥರ ಆಗ್ಬೇಕು!'

ಇಂತಹ ವಾತಾವರಣ ಇರುವ ಇಂದಿನ ಸಂದರ್ಭದಲ್ಲಿ ಆಘಾತ ತರುವ ಇನ್ನೊಂದು ಸಂಗತಿ, ವಾರ್ಷಿಕ ವಿದ್ಯಾಭ್ಯಾಸ ಸ್ಥಿತಿಗತಿಯ ವರದಿ - Annual status of education report (ASER) 2011ರಲ್ಲಿದೆ. ರಾಜ್ಯದ 781 ಶಾಲೆಗಳು, ರಾಷ್ಟ್ರದ 14,283 ಶಾಲೆಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದವು. ಕರ್ನಾಟಕದಲ್ಲಿ ಶೇಕಡಾ 40.3ರಷ್ಟು 3 ಮತ್ತು 4ನೇ ತರಗತಿಯ ಮಕ್ಕಳು 1ನೇ ತರಗತಿಯ ಪುಸ್ತಕಗಳನ್ನೂ ಓದಲಾರರು! ಶೇ 52.5 ರಷ್ಟು ಮಕ್ಕಳು ಸುಲಭವಾದ ಕಳೆಯುವ ಲೆಕ್ಕಗಳನ್ನು ಸಹ ಮಾಡಲಾರರು. ಈ ಎಲ್ಲ ಮಕ್ಕಳಿಗೆ ವರ್ಣಮಾಲೆ ಬರುತ್ತದೆ, 1ರಿಂದ 9ಕ್ಕಿಂತ ಹೆಚ್ಚಿನ ಅಂಕಿಗಳನ್ನು ಕಲಿತಿದ್ದಾರೆ. ಆದರೂ ಈ ಪರಿಸ್ಥಿತಿ ಇದೆ. ಅಂದರೆ ಕಲಿಕೆಯಲ್ಲಿ ಮಕ್ಕಳು ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಈ ವರದಿಯ ಸಾರಾಂಶ.

ಮೇಲಿನ ಈ ಎಲ್ಲ ಅಂಶಗಳು ಫೆಬ್ರುವರಿ 21ರ ಜಾಗತಿಕ ಮಾತೃಭಾಷಾ ದಿನಾಚರಣೆಯ ಈ ಹೊತ್ತಿನಲ್ಲಿ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು ಎಂಬ ಒತ್ತಾಸೆಯ ಬಗ್ಗೆ ಯೋಚಿಸುವಂತೆ ಮಾಡುತ್ತವೆ. ಬಾಲ್ಯದಲ್ಲಿ ಭಾಷೆಯು ಮಗುವಿನ ವ್ಯಕ್ತಿತ್ವ- ಸಾಮರ್ಥ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಪೋಷಕರು ಗಮನಿಸಬೇಕು. ನಾವೆಲ್ಲರೂ `ಕನ್ನಡ' `ಇಂಗ್ಲಿಷ್' ಭಾಷೆಗಳನ್ನು ಒಂದು `ವಿಷಯ'ವಾಗಿ ನೋಡುತ್ತೇವೆ. ಬಾಲ್ಯದಲ್ಲಿ ಮಾತು ಮತ್ತು ಕ್ರಿಯೆ ಅನ್ಯೋನ್ಯ. ಅಂದರೆ `ಬೆಕ್ಕು' `ಓಡು', `ನೀಲಿ' ಇವೆಲ್ಲವೂ ಮಗು ಅವುಗಳನ್ನು ನೋಡಿ, ಅನುಭವಿಸಿ ಈ ಪದಗಳನ್ನು ಅದರೊಡನೆ ಹೊಂದಿಸಿರದಿದ್ದರೆ ಅರ್ಥಹೀನ ಎನಿಸುತ್ತವೆ. ಅಷ್ಟೇ ಅಲ್ಲ ಈ ಪದಗಳನ್ನು ಒಮ್ಮೆ ಹಾಗೆ ಹೊಂದಿಸಿದ ಮೇಲೆ ಬೆಕ್ಕು ಎಂದರೆ `ಕ್ಯಾಟ್' ಎಂದು ಕಲಿಯಬಹುದೇ ಹೊರತು, `ಬೆಕ್ಕು' ಎಂದಾಕ್ಷಣ ತಲೆಯಲ್ಲಿ ಮೂಡುವ ನಾಲ್ಕು ಕಾಲಿನ ಪ್ರಾಣಿಯ ಚಿತ್ರ `ಕ್ಯಾಟ್' ಎಂದಾಕ್ಷಣ ಮೂಡುವುದಿಲ್ಲ. ಬದಲಾಗಿ `ಕ್ಯಾಟ್' ಎಂದಾಕ್ಷಣ `ಬೆಕ್ಕು' ಎಂಬ ಭಾಷಾಂತರ ತಲೆಯಲ್ಲಿ ಮೂಡಿ, ನಂತರ ಅದು ಪ್ರಾಣಿಯ ಚಿತ್ರಕ್ಕೆ ವರ್ಗಾವಣೆಯಾಗುತ್ತದೆ!

ಮನೋವೈಜ್ಞಾನಿಕವಾಗಿ ಈ ಭಾಷೆ ಅರ್ಥಪೂರ್ಣ ಸನ್ನೆ- ಚಿಹ್ನೆಗಳನ್ನು ನಮ್ಮ ಮೆದುಳು- ಮನಸ್ಸುಗಳಲ್ಲಿ ಹುಟ್ಟಿಸುತ್ತದೆ. ಕಲಿಕೆಯ ಪ್ರಕ್ರಿಯೆಗಳನ್ನು ರೂಪಿಸುತ್ತದೆ. ಸಾಮಾಜಿಕವಾಗಿ ಒಂದೇ ಸಂಸ್ಕೃತಿಯ ಬಹುಜನರೊಡನೆ ಈ ಭಾಷೆ ನಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಶೈಕ್ಷಣಿಕವಾಗಿ ಬೇಗನೇ ಕಲಿಯುವುದು ವ್ಯಕ್ತಿತ್ವ- ಸಂಸ್ಕೃತಿಗೆ ಪೂರಕವಾದ ಭಾಷೆಯಲ್ಲಿ ಸುಲಭ ಎನಿಸುತ್ತದೆ. ವೆುದುಳು- ಮನಸ್ಸುಗಳಲ್ಲಿನ ಗೊಂದಲಗಳನ್ನು ತಡೆಯುತ್ತದೆ.

ಭಾಷೆ ಮತ್ತು ಸಂಸ್ಕೃತಿ
ಕೆನಡಾ ವಿಶ್ವವಿದ್ಯಾಲಯದ ಅಧ್ಯಯನವೊಂದು ಜಗತ್ತಿನ 6,000 ಭಾಷೆಗಳಲ್ಲಿ ಶೇಕಡಾ 50ರಷ್ಟು, ಅಂದರೆ 3,000 ಭಾಷೆಗಳು 2100ರ ವೇಳೆಗೆ ಇಲ್ಲದಂತಾಗುತ್ತವೆ ಎಂದು ಹೇಳುತ್ತದೆ. ಅಂದರೆ ಈ ಭಾಷೆಗಳ ಜೊತೆಗೆ ಸಂಸ್ಕೃತಿಗಳೂ ನಶಿಸಿಹೋಗುತ್ತವೆ ಎಂದರ್ಥ. ಭಾರತದಲ್ಲಿ 1652 ಮಾತೃಭಾಷೆಗಳಿದ್ದು ಪ್ರತಿ ಭಾಷೆಗೂ ಅದರದ್ದೇ ಆದ ಸಂಸ್ಕೃತಿ ಇದೆ. ಅಂದರೆ ಮಾತೃಭಾಷಾ ಶಿಕ್ಷಣದ ಗೊಂದಲ ಕೇವಲ ಲಕ್ಷಾಂತರ ಕನ್ನಡಿಗರಿಗೆ ಮಾತ್ರ ಸಮಸ್ಯೆಯಾಗಿಲ್ಲ.

`ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಕಡ್ಡಾಯ ಆಗಬೇಕು' ಎಂಬ ಕೂಗು ಮತ್ತೆ ಮತ್ತೆ ಕೇಳಿಬರುತ್ತಿದೆ. ಮಾತೃಭಾಷೆಯಲ್ಲಿ ಶಿಕ್ಷಣ ನಡೆಯಬೇಕೋ ಅಥವಾ ಅಂತರ ರಾಷ್ಟ್ರೀಯ ಮಾನ್ಯತೆ ಪಡೆದ `ಇಂಗ್ಲಿಷ್'ನಂತಹ ಭಾಷೆಯಲ್ಲಿ ಶಿಕ್ಷಣ ನೀಡಬೇಕೋ ಎಂಬುದು ಅಂತರ ರಾಷ್ಟ್ರೀಯ ಮಟ್ಟದಲ್ಲೂ ಬಹು ಚರ್ಚೆಗೆ ಗ್ರಾಸವಾದ ವಿಷಯ. 1972ರಷ್ಟು ಹಿಂದೆಯೇ ಈ ಬಗೆಗಿನ ಯುನೆಸ್ಕೊದ ಸಂಶೋಧನೆಗಳು ಮಾತೃಭಾಷಾ ಶಿಕ್ಷಣದ ಬಗ್ಗೆ ಜಗತ್ತಿನ ರಾಷ್ಟ್ರಗಳ ಸರ್ಕಾರಗಳಿಗೆ ಮಾಹಿತಿಯನ್ನು ನೀಡಿದ್ದವು. ಸಮಿತಿಯ ಶಿಫಾರಸುಗಳು ಪ್ರಕಟವಾದ ತಕ್ಷಣ ಅದಕ್ಕೆ ಬಲವಾದ ವಿರೋಧಗಳು ಬಂದವು. ವಿಲಿಯಂ ಬುಲ್, ರಾಬರ್ಟ್ ಲೀ ಪೇಜ್, ಜೂಲಿಯನ್ ಡಾಕಿನ್, ಬ್ರಿಯಾನ ಟಿಫಿನ್ ಮುಂತಾದ ಶಿಕ್ಷಣ ತಜ್ಞರು ಇದನ್ನು ಕಟುವಾಗಿ ಟೀಕಿಸಿದರು. ಬುಲ್ `ಮಗುವಿಗೆ ಮನೋವೈಜ್ಞಾನಿಕವಾಗಿ ಸುಲಭ ಎಂದ ಮಾತ್ರಕ್ಕೆ ಮಾತೃಭಾಷಾ ಶಿಕ್ಷಣ ಆ ಮಗು ಹಿರಿಯನಾದಾಗ ಸಾಮಾಜಿಕ- ಆರ್ಥಿಕ- ರಾಜಕೀಯ ದೃಷ್ಟಿಯಿಂದ ಉಪಯೋಗ ಆಗಬೇಕೆಂದಿಲ್ಲ. ಹಾಗೆಯೇ ಮಗು- ಹಿರಿಯ ಇಬ್ಬರಿಗೂ ಅತ್ಯುತ್ತಮ ಎನಿಸಬಹುದಾದ ಮಾತೃಭಾಷಾ ಶಿಕ್ಷಣ ಸಮಾಜದಲ್ಲಿ ಉತ್ತಮವಾಗಲೀ, ಸಾಧ್ಯವಾಗಲೀ ಆಗಬೇಕೆಂದಿಲ್ಲ' ಎಂದುಬಿಟ್ಟ.

ರಾಲ್ಫ್ ಫ್ಯಾಸೋಲ್ಡ್ ಈ ಶಿಫಾರಸಿನ ಬಗ್ಗೆ ಮೂರು ಮುಖ್ಯ ಪ್ರಶ್ನೆಗಳನ್ನು ಮುಂದಿಟ್ಟ. ಇದು ಸಾಧ್ಯವೇ? ಇದು ಕೆಲಸ ಮಾಡಬಹುದೇ? ಅದಕ್ಕಾಗಿ ನಾವು ತೆರಬೇಕಾದ ಬೆಲೆಗೆ ನಿಜವಾಗಿಯೂ ಈ ಶಿಕ್ಷಣ ಅರ್ಹವೇ?

ಹಾಗೆಯೇ ಜಗತ್ತಿನ ಹಲವು ಮಾತೃಭಾಷೆಗಳು `ಕಲಿಸುವ ಮಾಧ್ಯಮ'ದ ಅರ್ಹತೆಯನ್ನು ತಲುಪಿಲ್ಲ ಎಂಬುದೂ ಇಲ್ಲಿನ ಚರ್ಚೆಯ ಪ್ರಮುಖ ಅಂಶ. ಮಾತೃಭಾಷಾ ಶಿಕ್ಷಣದ ನಂತರ ಮತ್ತೊಂದು ಭಾಷೆಯಲ್ಲಿ ಕಲಿಯಬೇಕಾದಾಗ ಮಾತೃಭಾಷೆಯಿಂದ ಆ ಭಾಷಾ ಕಲಿಕೆಗೆ ಅಡ್ಡಿ ಉಂಟಾಗಬಹುದೆಂಬ ಸಂಶಯವೂ ಇಲ್ಲಿತ್ತು.

ಯುನೆಸ್ಕೊ ಸಮಿತಿ ಈ ಎಲ್ಲ ಅಡ್ಡಿ- ಆತಂಕ- ವಿರೋಧಗಳನ್ನು ನಿರೀಕ್ಷಿಸಿಯೇ ಇತ್ತು. ಭಾಷೆ ಬೆಳವಣಿಗೆಯ ಸಮಸ್ಯೆ, ಪಠ್ಯಪುಸ್ತಕ- ಕಲಿಕಾ ಸಾಮಗ್ರಿಗಳ ಕೊರತೆ, ತರಬೇತಿ ಹೊಂದಿದ ಶಿಕ್ಷಣದ ಕೊರತೆ ಈ ಎಲ್ಲದರ ಸಮಸ್ಯೆಗಳನ್ನೂ ಒಂದೊಂದಾಗಿ ಎದುರಿಸಬೇಕು; ಮೊದಲು ಮಾತೃಭಾಷಾ ಶಿಕ್ಷಣ, ನಂತರ ಅದರ ಮುಖಾಂತರ ಎರಡನೇ ಭಾಷೆಯ ಕಲಿಕೆ ಉಪಯುಕ್ತ ಎಂದು ಪ್ರತಿಪಾದಿಸಿತು.

ಯುನೆಸ್ಕೊ ಸಮಿತಿಯ ಈ ಪ್ರತಿಪಾದನೆಗೆ ಇರುವ ಆಧಾರವಾದರೂ ಏನು? ಅದು ಹೀಗಿದೆ: ಸಾಮಾಜಿಕ ಮತ್ತು ಜೈವಿಕ ಸಂಶೋಧನೆಗಳು ಮಾತೃಭಾಷಾ ಶಿಕ್ಷಣದ ಉಪಯುಕ್ತತೆಯನ್ನು ಬಲವಾಗಿಯೇ ಸಾಬೀತುಪಡಿಸಿವೆ. ಮಕ್ಕಳು ಮಾತೃಭಾಷೆಯಲ್ಲಿ ಕಲಿತಾಗ ಆತ್ಮವಿಶ್ವಾಸದಿಂದ ಕಲಿಯುತ್ತಾರೆ. ಬೇರೆಲ್ಲ ವಿಷಯಗಳು ಮತ್ತು ಇನ್ನೊಂದು ಭಾಷೆಯನ್ನು ಕೂಡ ಸುಲಭವಾಗಿ ಕಲಿಯಬಹುದು. ಮಕ್ಕಳು ತಾವು ಶಾಲೆಯಲ್ಲಿ ಕಲಿತದ್ದನ್ನು ಸುಲಭವಾಗಿ ಕುಟುಂಬದಲ್ಲಿ ಚರ್ಚೆ ಮಾಡಬಲ್ಲವರಾಗುತ್ತಾರೆ. `ಕಲಿತದ್ದರಿಂದ ಕಲಿಯದೇ ಇದ್ದದ್ದನ್ನು' ಅರ್ಥೈಸುವುದು ಸರಳವಾಗುತ್ತದೆ. ಸಾಮಾಜಿಕವಾಗಿ ನೋಡಿದಾಗ ಸಾರ್ವತ್ರಿಕ ಮಾತೃಭಾಷಾ ಮಾಧ್ಯಮದಲ್ಲಿ ನೀಡುವ ಶಿಕ್ಷಣವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುತ್ತದೆ. ಹೆಚ್ಚಿನ ಜನರಿಗೆ ಶಿಕ್ಷಣಾವಕಾಶವನ್ನು ಒದಗಿಸುತ್ತದೆ. ಮಾಹಿತಿಯ ವಿಕೇಂದ್ರೀಕರಣ ಮತ್ತು ರಾಜಕೀಯ ಅವಕಾಶಗಳನ್ನು ಸಾಧ್ಯವಾಗಿಸುತ್ತದೆ.

ಹೆಚ್ಚಿದ ಉದ್ಯೋಗಾವಕಾಶ
ಇಂದಿನ ಶಿಕ್ಷಣ ಕ್ರಮದಲ್ಲಿ `ಮಾಧ್ಯಮ' `ವಿಷಯ'ದ ಬಗೆಗಿನ ಗೊಂದಲ ಸಾಕಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಒಂದು ಭಾಷೆಯನ್ನು ಕಲಿಸುವುದಕ್ಕೂ, ಆ ಭಾಷೆಯನ್ನೇ ಎಲ್ಲದರ `ಮಾಧ್ಯಮ'ವಾಗಿ ಉಪಯೋಗಿಸುವುದಕ್ಕೂ ಗಣನೀಯ ಅಂತರವಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರದ ಬಗೆಗೆ ಯಾರಿಗೂ ಅವು ಏಕೆ ಬೇಕೆಂಬ ಅರಿವಿಲ್ಲ. ಇಂಗ್ಲಿಷ್-ಹಿಂದಿ, ಸಂಸ್ಕೃತವನ್ನು `ಭಾಷೆ'ಗಳಾಗಿ ಓದಿದರೂ ಮಕ್ಕಳಿಗೆ ಅವುಗಳನ್ನು ಮಾತನಾಡುವ ಕೌಶಲವಿಲ್ಲ. ಈ ಭಾಷೆಗಳನ್ನು `ಸ್ಪರ್ಧಾತ್ಮಕ' ಎಂಬುದಕ್ಕಿಂತ `ಪೂರಕ'ವಾಗಿ ಕಲಿಸಬೇಕು ಎಂಬ ಅರಿವು ನಮಗಿಲ್ಲ. ಸಾಮಾಜಿಕವಾಗಿ `ಇಂಗ್ಲಿಷ್'ನಲ್ಲಿ ತಪ್ಪು ಮಾತನಾಡಿದರೂ ಪರವಾಗಿಲ್ಲ, ಆದರೆ ಕನ್ನಡದಲ್ಲಿ ಮಾತನಾಡುವುದು ಕಡಿಮೆ ವಿದ್ಯಾಭ್ಯಾಸದ, ದಡ್ಡತನದ, ಅನಾಗರಿಕತೆಯ ಲಕ್ಷಣ ಎಂಬ ಭಾವನೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾದ, ಆದರೆ ಇಂಗ್ಲಿಷ್ ಮಾತನಾಡಬಲ್ಲ ವ್ಯಕ್ತಿಗೆ, ರ‌್ಯಾಂಕ್ ಪಡೆದ ಮಾತೃಭಾಷಾ ಶಿಕ್ಷಣ ಹೊಂದಿದ ವ್ಯಕ್ತಿಗಿಂತ ಉದ್ಯೋಗಾವಕಾಶಗಳು ಹೆಚ್ಚು.

ಇಂಗ್ಲಿಷ್ ಮಾಧ್ಯಮದಲ್ಲಾದರೂ ಶಿಕ್ಷಣದ ಪರಿಸ್ಥಿತಿ ಏನು? ಇಂಗ್ಲಿಷ್ ಮಾಧ್ಯಮದ ಎಲ್ಲರಿಗೂ ಸರಿಯಾಗಿ ಇಂಗ್ಲಿಷ್ ಕಲಿಸಲಾಗುತ್ತಿದೆಯೇ? ಸರಿಯಾದ ತರಬೇತಿಯಿಲ್ಲದ, ಸುಲಲಿತವಾಗಿ ಇಂಗ್ಲಿಷ್ ಮಾತನಾಡದ ಶಿಕ್ಷಕರು, ಗೊಂದಲಮಯ ಕಲಿಕಾ ಸಾಮಗ್ರಿ, ಇಂಗ್ಲಿಷ್ ಶಿಕ್ಷಕರನ್ನು ಸಿದ್ಧಗೊಳಿಸಲು ಕೆಲವೇ ಶಾಲಾ ಸಂಸ್ಥೆಗಳು ಕಂಗ್ಲಿಷ್ ಬಲ್ಲ ವಿದ್ಯಾರ್ಥಿಗಳನ್ನಷ್ಟೇ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ 12 ವರ್ಷಗಳ ಕಾಲ ಇಂಗ್ಲಿಷ್ ಕಲಿತ ವಿದ್ಯಾರ್ಥಿಗಳು ಸಹ `ಹೌ ಆರ್ ಯು' ಎಂದಾಕ್ಷಣ `ವಿ ಆರ್ ಇನ್ ದಿ ವೆಲ್' ಎಂದರೆ ಆಶ್ಚರ್ಯವೇನಿಲ್ಲ.

ಮನೆಯಲ್ಲಿ ಇಂಗ್ಲಿಷ್ ಮಾತನಾಡದ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯುವುದರಿಂದ ಆಗುವ ತೊಂದರೆಗಳು ಹೀಗಿವೆ:

ಅವರು ಬಾಯಿಪಾಠದಿಂದ ಮಾತ್ರ ಅರ್ಥ ಮಾಡಿಕೊಳ್ಳುವುದರಿಂದ ಗ್ರಹಿಕೆಯ ಸಮಸ್ಯೆಯನ್ನು ಎದುರಿಸುತ್ತಾರೆ.

ಯಾವುದೇ ಪರಿಕಲ್ಪನೆಗಳನ್ನು ಗ್ರಹಿಸಲು ಸಾಧ್ಯವಾಗದೇ ಇರಬಹುದು.

ಪ್ರಾಥಮಿಕ ಹಂತದಲ್ಲಿ ತಪ್ಪು ಇಂಗ್ಲಿಷ್ ಶಿಕ್ಷಣವನ್ನು ನೀಡಿದರೆ, ಮುಂದಿನ ಹಂತಗಳಲ್ಲಿ ಮಗು ಇಂಗ್ಲಿಷ್‌ನ್ನು ತಪ್ಪಾಗಿಯೇ ರೂಢಿಸಿಕೊಳ್ಳುತ್ತದೆ.

ಇಂಗ್ಲಿಷ್‌ಗೆ ತಕರಾರಿಲ್ಲ
ಇಂಗ್ಲಿಷ್ ತರಬೇತಿಯು ಇಂಗ್ಲಿಷ್ ಕಲಿಸುವ ಶಿಕ್ಷಕರಿಗೇ ಸರಿಯಾಗಿ ದೊರೆಯುವ ಸಾಧ್ಯತೆ ಇಲ್ಲದಿರುವಾಗ, ಇನ್ನು ವಿಜ್ಞಾನ- ಸಮಾಜ ಪಾಠ ಮಾಡುವ ಶಿಕ್ಷಕರಿಗೆ ಉತ್ತಮ ಇಂಗ್ಲಿಷ್‌ನಲ್ಲಿ ಆ ವಿಷಯಗಳನ್ನು ಕಲಿಸುವ ಸಾಮರ್ಥ್ಯದ ತರಬೇತಿ ಹೇಗೆ ಸಾಧ್ಯ? ಮಾತೃಭಾಷಾ ಶಿಕ್ಷಣಕ್ಕೆ ಪರವಾದ ಶಿಕ್ಷಣ ತಜ್ಞರ ಈ ಎಲ್ಲ ವಾದಗಳೂ ಇಂಗ್ಲಿಷ್ ಭಾಷೆಯ ವಿರೋಧವಾಗೇನೂ ಇಲ್ಲ. ಹಾಗೆಯೇ ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ಇದು ಅನ್ವಯವೇ ಹೊರತು ಹಿರಿಯ ಪ್ರಾಥಮಿಕ- ಉನ್ನತ ಶಿಕ್ಷಣದಲ್ಲಿನ ಇಂಗ್ಲಿಷ್ ಬಳಕೆಯ ಬಗ್ಗೆ ಯಾರ ತಕರಾರೂ ಸಾಧ್ಯವಿಲ್ಲ. ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಬಳಸುವುದು ಶಿಕ್ಷಣದಲ್ಲಿ ಸ್ವಾಗತಾರ್ಹವೇ. ಆದರೆ ಅದನ್ನೇ ಮಾತೃಭಾಷೆಯಂತೆ ಕಲಿಸುವ ಯತ್ನವು ಮಗುವಿನ ಭಾವನಾತ್ಮಕ- ಬೌದ್ಧಿಕ ಆರೋಗ್ಯದ ಮೇಲೆ ದಾಳಿ ಮಾಡುತ್ತದೆ.

ಮಾತೃಭಾಷೆಯಲ್ಲಿ ಶಿಕ್ಷಣ ನಡೆದರೂ ಅಥವಾ ಭಾರತೀಯ ಭಾಷೆಗಳಲ್ಲಿ ಮನೆ ಮಾತು ಒಂದಾಗಿದ್ದು, ಶಿಕ್ಷಣ ಮಾಧ್ಯಮದ ಭಾಷೆ ಮತ್ತೊಂದಾದರೂ ಮಗು ಎರಡೂ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಲು ಸಾಧ್ಯವಿದೆ. ಮರಾಠಿ ಮನೆ ಮಾತಾದ ಬೇಂದ್ರೆ, ತಮಿಳು ಮನೆಮಾತಾದ ಮಾಸ್ತಿ ಕನ್ನಡದಲ್ಲಿ ಜ್ಞಾನಪೀಠ ಪಡೆದರಷ್ಟೆ! ಆದರೆ ಈ ಎಲ್ಲ ಭಾಷೆಗಳೂ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ್ದು, ಭಾರತೀಯ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು ಎಂಬುದನ್ನು ಗಮನಿಸಬೇಕು.

ಪಕ್ಕದ ನೇಪಾಳದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಗಗಳು ನಡೆದಿವೆ. ಇಂಗ್ಲಿಷ್ ಬೇಡ, ಕೇವಲ ಕನ್ನಡವಷ್ಟೇ ಎಲ್ಲ ಕಡೆ ಎನ್ನುವುದು ಈಗ ಕನಸಿನ ಮಾತು. ಎಂಥ ಉಗ್ರ ಕನ್ನಡಾಭಿಮಾನಿಯೂ ತನ್ನ ಮಕ್ಕಳ, ಮೊಮ್ಮಕ್ಕಳ ಪ್ರಶ್ನೆ ಬಂದಾಗ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಳ್ಳುವುದು ಸರ್ವೇ ಸಾಮಾನ್ಯ. ಹಾಗಾಗಿ ನೇಪಾಳದಲ್ಲಿ ನಡೆಯುತ್ತಿರುವ ಪ್ರಯೋಗಗಳು ಇಲ್ಲಿಯೂ ನಡೆಯಬೇಕಾಗಿದೆ.

ಇಂಗ್ಲಿಷ್ ಜ್ಞಾನದಿಂದ ನಮ್ಮ ಉನ್ನತ ಶಿಕ್ಷಣಾವಕಾಶಗಳು, ಹೊರ ಜಗತ್ತಿನೊಡಗಿನ ಸಂವಹನ ಹೆಚ್ಚುತ್ತದೆ ನಿಜ. ಆದರೆ ವಿಜ್ಞಾನ, ಸಮಾಜಶಾಸ್ತ್ರ, ಭೂಗೋಳ, ಇತಿಹಾಸ, ಗಣಿತಗಳನ್ನು ಮಾತೃಭಾಷೆಯಲ್ಲಿ ಕಲಿಯುವುದು ಆ ವಿಷಯಗಳ ಸುಲಭ ಗ್ರಹಿಕೆಗೆ ದಾರಿ ಮಾಡಿಕೊಡುತ್ತದೆ. ಎಚ್ಚರಿಕೆಯಿಂದ ರೂಪಿಸುವ `ಮಾಧ್ಯಮ ಮಾರ್ಪಾಡು ಅವಧಿ' (ಪ್ರಾಯಶಃ ಮಾಧ್ಯಮಿಕ ಶಾಲಾ ಹಂತದಲ್ಲಿ) ವಿದ್ಯಾರ್ಥಿ ಆಂಗ್ಲ ಮತ್ತು ಕನ್ನಡ ಎರಡರಲ್ಲೂ ವಿಷಯಗಳನ್ನು ಕಲಿಯಲು-ಗ್ರಹಿಸಲು ಸಾಧ್ಯ ಮಾಡುತ್ತದೆ. ಅದೇ ರೀತಿ ಇಂದಿನ ಇಂಗ್ಲಿಷ್ ಮಾಧ್ಯಮದ ಕಲಿಕೆಯ ವಿಧಾನವೂ ಬದಲಾಗಬೇಕಿದೆ. ಕೇವಲ ಇಂಗ್ಲಿಷ್ ವ್ಯಾಕರಣ- ಸಾಹಿತ್ಯದ ಬಗೆಗೆ ಮಾತ್ರ ಕೇಂದ್ರೀಕೃತವಾಗದೆ ಬೇರೆ ಬೇರೆ ವಿಷಯಗಳ (ರಾಜಕೀಯ- ಸಾಮಾಜಿಕ ವಿಜ್ಞಾನ) ಪ್ರಾಯೋಗಿಕ ಬಳಕೆಯ ಇಂಗ್ಲಿಷ್ ಕಲಿಕೆ, ಸರಿಯಾಗಿ ತರಬೇತಿ ಹೊಂದಿದ ಶಿಕ್ಷಕರು, ಭಾಷಾ ವೈಶಿಷ್ಟ್ಯ, ತುಲನಾತ್ಮಕ ಅಭ್ಯಾಸ, ವೈವಿಧ್ಯಮಯ ಕಲಿಕಾ ಸಾಮಗ್ರಿ, ವಿದ್ಯಾರ್ಥಿಯ ಮನೆಯಲ್ಲೂ ನಡೆಸಬಹುದಾದ `ನಿರ್ದಿಷ್ಟ ಇಂಗ್ಲಿಷ್ ಮಾತನಾಡುವ ಅವಧಿ' ಇವು ಕನ್ನಡ ಮಾಧ್ಯಮದಲ್ಲಿ ಕಲಿತರೂ ಇಂಗ್ಲಿಷ್‌ನ್ನು ಸುಲಲಿತವಾಗಿ ಆತ್ಮವಿಶ್ವಾಸದಿಂದ ಮಾತನಾಡುವ, ಹಾಗೆಯೇ ಕಂಗ್ಲಿಷ್‌ನಲ್ಲಿ ಗೊಣಗುಟ್ಟದೆ ಅಚ್ಚ ಕನ್ನಡದಲ್ಲಿ ಚಂದವಾಗಿ ಯೋಚಿಸುವ, ಮಾತನಾಡುವ, `ಕನ್ನಡಿಗ'ರನ್ನು ಹೊರತರಬಲ್ಲವು! ಯಾರಿಗೂ ಆಯ್ಕೆಯೇ ಇರದಂತೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದು ಕೇವಲ ರಾಜ್ಯೋತ್ಸವದ ಘೋಷಣೆಯಾಗದೆ ಸರ್ಕಾರ ಜಾರಿಗೆ ತರುವ ಆದೇಶವಾಗಬೇಕು.

ಭಾಷೆ ಬಳಕೆ ಹೇಗೆ?
ಮ್ಮ ಮಗು ಕನ್ನಡ/ ಇಂಗ್ಲಿಷ್ ಮಾಧ್ಯಮ ಯಾವುದರಲ್ಲೇ ಶಾಲಾ ಶಿಕ್ಷಣ ಪಡೆಯುತ್ತಿದ್ದರೂ ಹೇಗೆ ಅದು ಇಂಗ್ಲಿಷ್- ಕನ್ನಡ ಎರಡನ್ನೂ ಸುಲಲಿತವಾಗಿ ಮಾತನಾಡುವಂತೆ ನೀವು ಮಾಡಬಹುದು? ಜೊತೆಗೆ ಶಿಕ್ಷಣದ ಅಂಶಗಳನ್ನು ಮಗು ಸರಿಯಾಗಿ ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ?- ಈ ನಿಟ್ಟಿನಲ್ಲಿ ಕೆಳಗಿನ ಅಂಶಗಳು ನಿಮಗೆ ಸಹಾಯ ಮಾಡಬಲ್ಲವು:

ಭಾಷೆಗಳನ್ನು ಮನೆಯಲ್ಲಿ ಮಾತನಾಡಲು ಉಪಯೋಗಿಸುವುದು. ಭಾಷೆಗಳ ಮಿಶ್ರಣದ ಬದಲು, ಪ್ರತಿ ದಿನ `ಇಂಗ್ಲಿಷ್ ಮಾತನಾಡುವ ಅವಧಿ' ಎಂಬ ಒಂದು ಗಂಟೆಯಲ್ಲಿ ಎಲ್ಲರೂ ಇಂಗ್ಲಿಷ್ ಮಾತನಾಡಲು ಪ್ರಯತ್ನಿಸಿ, ಮಿಕ್ಕೆಲ್ಲ ಸಮಯ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು.

ಕಥೆ ಪುಸ್ತಕಗಳನ್ನು ತಂದೆ-ತಾಯಿ ಮಕ್ಕಳು ಒಟ್ಟಿಗೇ ಓದುವುದು ಯಾವುದೇ ಭಾಷೆಯನ್ನು ಕಲಿಯುವ ಸುಲಭ ವಿಧಾನ.

ಕನ್ನಡದ ಮೂಲಕ ವಿಜ್ಞಾನ- ಸಮಾಜ ಪರಿಚಯ, ಗಣಿತಗಳ ಪರಿಕಲ್ಪನೆಯನ್ನು ಅರ್ಥ ಮಾಡಿಸಿ ನಂತರ ಇಂಗ್ಲಿಷ್‌ಗೆ ಅದನ್ನು ವರ್ಗಾಯಿಸಿ.

ತನ್ನ ಅನಿಸಿಕೆ- ಭಾವನೆಗಳನ್ನು ಮಗುವಿಗೆ ವಾಕ್ಯಗಳ ಮೂಲಕ ವ್ಯಕ್ತಪಡಿಸಲು ಪ್ರೋತ್ಸಾಹಿಸಿ. ವ್ಯಾಕರಣ ತಪ್ಪಾದರೆ ಚಿಂತೆ ಬೇಡ. ಕ್ರಮೇಣ ವ್ಯಾಕರಣದ ಬಗ್ಗೆ ಗಮನ ಸೆಳೆಯುತ್ತಾ, ಮಗು ಸರಿಯಾಗಿ ಮಾತನಾಡುವುದನ್ನು ಪ್ರೋತ್ಸಾಹಿಸಿ.

ಶಾಲೆಯ ಅನುಭವಗಳ ಬಗ್ಗೆ ಕನ್ನಡದಲ್ಲಿ ಒಮ್ಮೆ ವಿವರಿಸಿದ ನಂತರ ಅದನ್ನೇ ಇಂಗ್ಲಿಷ್‌ನಲ್ಲಿ ವಿವರಿಸಿ.

ಭಾಷೆ ಕುರಿತಾದ ಆಟಗಳನ್ನು ರೂಪಿಸಿಕೊಂಡು ಭಾಷೆಯ ಹಲವು ಸೂತ್ರಗಳನ್ನು ಕಲಿಸಲು ಸಾಧ್ಯವಿದೆ. ಪದಗಳ ಪೆಟ್ಟಿಗೆ Building words, rhyming words- ಪ್ರಾಸ ಪದಗಳು, ಅಂತ್ಯಾಕ್ಷರಿ, ಪದಗಳಿಂದ ಹಾಡುಗಳು, ಪದಬಂಧ ಇವೆಲ್ಲವೂ ಮಕ್ಕಳ ಭಾಷೆ- ಸಂವಹನವನ್ನು ಬಲಗೊಳಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.