ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವಿಜ್ಞಾನ, ಎಂಜಿನಿಯರಿಂಗ್, ಔಷಧಿ ಮತ್ತು ವೈದ್ಯಕೀಯ ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ‘ವಿಜ್ಞಾನ ಸಂಶೋಧನಾ ಫೆಲೋಶಿಪ್’ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಅಭಿರುಚಿಯನ್ನು ಉತ್ತೇಜಿಸುವ ಸಲುವಾಗಿ ಈ ಫೆಲೋಶಿಪ್ ನೀಡುತ್ತಿದೆ.

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಔಷಧಿ ವಿಷಯಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಫೆಲೋಶಿಪ್ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಹಿರಿಯ ವಿಜ್ಞಾನಿಗಳು ವಿದ್ಯಾರ್ಥಿಗಳೊಂದಿಗೆ ಚರ್ಚೆ, ಸಂವಹನ ನಡೆಸಲಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ನಡೆಯುತ್ತಿರುವ ‘ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಅಲಹಾಬಾದ್, ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಬೆಂಗಳೂರು ಮತ್ತು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಗಳು ಈ ಸಂಶೋಧನಾ ಫೆಲೋಶಿಪ್ ನಡೆಸಿಕೊಡಲಿವೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಸಂಬಂಧಿತ ಕ್ಷೇತ್ರಗಳ ಶಿಕ್ಷಕರು ಸಹ ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು: ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭಾರತೀಯ ಪ್ರಜೆಗಳಾಗಿರಬೇಕು. ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ಸ್ನಾತಕೋತ್ತರ (ಆಯ್ದ ವಿಷಯಗಳಿಗೆ ಮಾತ್ರ) ಪದವಿ ಓದುತ್ತಿರುವವರು ಮಾತ್ರ ಅರ್ಜಿ ಸಲ್ಲಿಸಬಹದು. ಇಂಟಿಗ್ರೆಟೆಡ್ ಪಿಎಚ್.ಡಿ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 65 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. (ಭಾಷಾ ವಿಷಯಗಳನ್ನು ಹೊರತುಪಡಿಸಿ) ಪಿಎಚ್.ಡಿ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನರ್ಹರು. ಹಿಂದೆ ಎರಡು ಭಾರಿ ಈ ಫೆಲೋಶಿಪ್ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.

ವಿದ್ಯಾರ್ಥಿಗಳು ಈ ಕೆಳಕಂಡ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರಬೇಕು.
4BS / BSc / BVSc / BPharm (II and III years only). BE / BTech / BCA (II and III years only).
4MS / MSc / MVSc / MPharm (I year only). ME / MTech / MCA (I year only)
(5-year integrated) MS / MSc /MTech / MBBS (II, III, IV years only)
4(dual degree) BTech + MTech (II/III/IV years only). (dual degree) BE + MSc (II, III, IV years only). (dual degree) BS + MS (II, III, IV years only)
4Integrated Ph.D (I, II years only)
ಫೆಲೋಶಿಪ್‌ನ ಇತರೆ ಮಾಹಿತಿ: ಈ ಫೆಲೋಶಿಪ್ ಅವಧಿ ಎರಡು ತಿಂಗಳು ಮಾತ್ರ. ವಿಜ್ಞಾನ ಅಕಾಡೆಮಿಯ ಪರಿಣಿತರ ತಂಡ ವಿದ್ಯಾರ್ಥಿಗಳ ಆಯ್ಕೆ ಮಾಡಲಿದೆ.

ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ರೈಲ್ವೆ ಪ್ರಯಾಣ ದರ, ಎರಡು ತಿಂಗಳ ಫೆಲೋಶಿಪ್ ಭತ್ಯೆ ಹಾಗೂ ವಾಸ್ತವ್ಯದ ವೆಚ್ಚವನ್ನು ನೀಡಲಾಗುವುದು. ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು.

ಕಿರು ಪ್ರಬಂಧ ರಚನೆ: ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು 150 ರಿಂದ 250 ಪದಗಳ ಮಿತಿಯಲ್ಲಿ ಕಿರು ಪ್ರಬಂಧವನ್ನು ಬರೆಯಬೇಕು. ಯಾಕೆ ಈ ಫೆಲೋಶಿಪ್‌ಗೆ ಸೇರುತ್ತಿದ್ದೆನೆ? ನನ್ನ ಮುಂದಿನ ಗುರಿಗಳು ಮತ್ತು ಸಾಧನೆ ಹಾಗೂ ಈ ಫೆಲೋಶಿಪ್ ಮೂಲಕ ನಾನು ಏನನ್ನು ಕಲಿಯಲು ಮತ್ತು ಸಾಧಿಸಲು ಬಯಸುತ್ತೇನೆ ಎಂಬುದನ್ನು ಸಂಕ್ಷಿಪ್ತವಾಗಿ ಬರೆಯಬೇಕು.

ಅರ್ಜಿ ಸಲ್ಲಿಸುವ ವಿಧಾನ: ವಿದ್ಯಾರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. www.ias.ac.in; www.insaindia.org; www.nasi.org.in ಈ ವೆಬ್ ಸೈಟ್‌ಗಳಿಗೆ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರಿಂಟೌಟ್ ಅನ್ನು ತೆಗೆದಿರಿಸಿಕೊಂಡು ಅದಕ್ಕೆ ಅಗತ್ಯ ದಾಖಲೆ ಪತ್ರಗಳನ್ನು ಲಗತ್ತಿಸಿ ಕಳುಹಿಸಬೇಕು. ಪ್ರಿಂಟೌಟ್ ಅರ್ಜಿಗೆ ಸಹಿ ಮಾಡಿ ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಿಬೇಕು.

ಅರ್ಜಿಯೊಂದಿಗೆ ತಮ್ಮ ವಿಭಾಗದ ಮುಖ್ಯಸ್ಥರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಅರ್ಜಿಯನ್ನು The Coordinator, Science Education Panel, Indian Academy of Sciences, Bangalore 560 080 ಈ ವಿಳಾಸಕ್ಕೆ ಕಳುಹಿಸಬೇಕು. ಪ್ರಿಂಟೌಟ್ ಅರ್ಜಿ ಕಳುಹಿಸುವ ಕೊನೆಯ ದಿನಾಂಕ 7–12–2014.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿರುತ್ತದೆ. ಬಯೋಡೆಟಾ ಅಥವಾ ಇತರ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಖುದ್ದಾಗಿ ಈ ವಿಳಾಸವನ್ನು ಸಂಪರ್ಕಿಸಬಹುದು The Coordinator, Science Education Panel, Indian Academy of Sciences, CV Raman Avenue, near Mekhri Circle, Sadashivanagar, Bangalore 560 080.
ದೂರವಾಣಿ ಸಂಖ್ಯೆಗಳು: (080) 2266 1202, 2266 1221, 2266 1207
ಇ–ಮೇಲ್ ವಿಳಾಸ:  jointsrf@ias.ernet.in,
ವೆಬ್‌ವಿಳಾಸ: website: www.ias.ac.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.