ಬೀಜಿಂಗ್ : ಅರ್ಧಶತಕಕ್ಕೂ ಹೆಚ್ಚು ಸ್ವಯಂ ತಪ್ಪುಗಳನ್ನು ಎಸಗಿದರೂ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ, ಚೀನಾ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ನಲ್ಲಿ ಜಯ ಗಳಿಸಿದರು. ಶನಿವಾರ ನಡೆದ ಪಂದ್ಯದಲ್ಲಿ ಅವರು ನೆದರ್ಲೆಂಡ್ಸ್ನ ಕಿಕಿ ಬಾರ್ಟನ್ಸ್ ವಿರುದ್ಧ 6–3, 3–6, 7–6 (9/7) ಸೆಟ್ಗಳ ಗೆಲುವು ಸಾಧಿಸಿದರು.

ಬಾರ್ಟಿ ಒಟ್ಟು 52 ತಪ್ಪುಗಳನ್ನು ಎಸಗಿದ್ದರು. ಮೊದಲ ಸೆಟ್ ಸುಲಭವಾಗಿ ಗೆದ್ದರೂ ಎರಡನೇ ಸೆಟ್ನಲ್ಲಿ ನಿರಾಸೆ ಕಂಡರು. ಮೂರನೇ ಸೆಟ್ ರೋಮಾಂಚಕಾರಿ ಹಣಾಗಣಿಗೆ ಸಾಕ್ಷಿಯಾಯಿತು. ಇಬ್ಬರೂ ಆಟಗಾರ್ತಿಯರು ಜಿದ್ದಾಜಿದ್ದಿಯ ಪೈಪೋಟಿ ನಡೆಸಿದರು. ಮ್ಯಾಚ್ ಪಾಯಿಂಟ್ ಉಳಿಸಿಕೊಂಡ ಬಾರ್ಟಿ ಗೆಲುವಿನ ನಗೆ ಬೀರಿದರು.

ಡೊಮಿನಿಕ್ ಥೀಮ್ ಫೈನಲ್ಗೆ: ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ, ಆಸ್ಟ್ರಿಯಾದ ಆಟಗಾರ ಡೊಮಿಮಿಕ್ ಥೀಮ್ ರಷ್ಯಾದ ಕರೇನ್ ಖಚನೊವ್ ಎದುರು 2–6, 7–6 (7/5), 7–5ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.