ನವದೆಹಲಿ : ಭಾರತದ ಟೆನಿಸ್ ಆಟಗಾರ ಸಾಕೇತ್ ಮೈನೇನಿ ಅವರು ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲಿ 85 ಸ್ಥಾನಗಳ ಏರಿಕೆ ಕಂಡಿದ್ದಾರೆ.

ಇತ್ತೀಚೆಗೆ ನಡೆದ ಫರ್ಗಾನಾ ಚಾಲೆಂಜರ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಸಾಕೇತ್ ಅವರು ಈಗ 362ನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ 137ನೇ ಸ್ಥಾನದಲ್ಲಿದ್ದ ಗಾಯದ ಸಮಸ್ಯೆಯಿಂದಾಗಿ ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಿರಲಿಲ್ಲ. ಹೀಗಾಗಿ ರ್ಯಾಂಕಿಂಗ್ನಲ್ಲಿ ಕುಸಿತ ಕಂಡಿದ್ದರು.

‘ಫರ್ಗಾನಾ ಟೂರ್ನಿಯಲ್ಲಿ ನಾನು ಉತ್ತಮವಾಗಿ ಆಡಿದೆ. ಉತ್ತಮ ಪೈಪೋಟಿ ಇದ್ದ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮತ್ತೆ ನನ್ನ ಆಟದ ಲಯಕ್ಕೆ ಮರಳಿದ್ದೇನೆ. ಇನ್ನೂ ಹೆಚ್ಚಿನ ಸಾಮರ್ಥ್ಯ ತೋರಬೇಕಿದೆ’ ಎಂದು ಸಾಕೇತ್ ಹೇಳಿದ್ದಾರೆ.

ಒಂದು ಸ್ಥಾನ ಕುಸಿತ ಕಂಡಿರುವ ಯೂಕಿ ಭಾಂಬ್ರಿ ಅವರು 85ನೇ ಸ್ಥಾನದಲ್ಲಿದ್ದಾರೆ. ರಾಮಕುಮಾರ್ ರಾಮನಾಥನ್ ಅವರು 125ನೇ ಸ್ಥಾನದಲ್ಲೇ ಮುಂದುವರಿದಿದ್ದು 13 ಸ್ಥಾನಗಳ ಕುಸಿತ ಕಂಡಿರುವ ಪ್ರಜ್ಞೇಶ್ ಗುಣೇಶ್ವರನ್ 165ನೇ ಸ್ಥಾನದಲ್ಲಿದ್ದಾರೆ. ಎರಡು ಸ್ಥಾನ ಇಳಿಕೆಯಾಗಿರುವ ಸುಮಿತ್ ನಗಾಲ್ 239ನೇ ಸ್ಥಾನದಲ್ಲಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ತಲಾ ಎರಡು ಹಾಗೂ ಏಳುಸ್ಥಾನಗಳ ಇಳಿಕೆಯೊಂದಿಗೆ ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಅವರು ಕ್ರಮವಾಗಿ 24 ಹಾಗೂ 67ನೇ ಸ್ಥಾನಗಳಲ್ಲಿದ್ದಾರೆ. ಎಂಟು ಸ್ಥಾನ ಕುಸಿತ ಕಂಡಿರುವ ಅಂಕಿತಾ ರೈನಾ 231ನೇ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.