ಮಿಯಾಮಿ: ಆರಂಭಿಕ ನಿರಾಸೆ ಮರೆತು ಕೆಚ್ಚೆದೆಯಿಂದ ಹೋರಾಡಿದ ಮಾಲ್ಡೋವಾದ ರಾಡು ಆಲ್ಬಟ್, ಎಟಿಪಿ ಡೆಲ್ರೇ ಬೀಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಆಲ್ಬಟ್ 3–6, 6–0, 6–0ರಲ್ಲಿ ಅಮೆರಿಕದ ಡೊನಾಲ್ಡ್ ಮೆಕೆಂಜಿ ಅವರನ್ನು ಪರಾಭವಗೊಳಿಸಿದರು.

ಮೊದಲ ಸೆಟ್ನಲ್ಲಿ ಸೋತ ಆಲ್ಬಟ್, ನಂತರ ಮೋಡಿ ಮಾಡಿದರು. ಎರಡು ಮತ್ತು ಮೂರನೇ ಸೆಟ್ಗಳಲ್ಲಿ ಪ್ರಾಬಲ್ಯ ಮೆರೆದ ಅವರು ತಮ್ಮ ಸರ್ವ್ ಉಳಿಸಿಕೊಳ್ಳುವ ಜೊತೆಗೆ ಎದುರಾಳಿಯ ಎಲ್ಲಾ ಸರ್ವ್ಗಳನ್ನೂ ಮುರಿದು ಏಕಪಕ್ಷೀಯವಾಗಿ ಗೆಲುವಿನ ತೋರಣ ಕಟ್ಟಿದರು.

ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಬ್ರಿಟನ್ನ ಡೇನಿಯಲ್ ಇವಾನ್ಸ್ 3–6, 6–2, 6–3ರಲ್ಲಿ ಅಮೆರಿಕದ ಜಾನ್ ಇಸ್ನರ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.