ಪ್ಯಾರಿಸ್: ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಭಾನುವಾರ ಹಿಂದೆ ಸರಿದಿದ್ದಾರೆ.ಮೊಣಕಾಲಿನ ನೋವಿಗೆ ಚಿಕಿತ್ಸೆ ಪಡೆದಿದ್ದ ಅವರು ವಿಂಬಲ್ಡನ್ ಟೂರ್ನಿಗಿಂತ ಮೊದಲು ವಿಶ್ರಾಂತಿಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

20 ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಫೆಡರರ್ ಶನಿವಾರ ರಾತ್ರಿ ನಡೆದ ಮೂರೂವರೆ ತಾಸುಗಳ ಸುದೀರ್ಘ ಹಣಾಹಣಿಯಲ್ಲಿ ಜರ್ಮನಿಯ ಡೊಮಿನಿಕ್ ಕೋಫರ್ ಎದುರು 7–6, 6–7, 7–6, 7–5ರಲ್ಲಿ ಗೆದ್ದು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

‘ಎರಡು ಬಾರಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿಒಂದು ವರ್ಷ ಪುನಶ್ಚೇತನ ಯೋಜನೆಯಲ್ಲಿದ್ದ ಕಾರಣ ದೇಹ ಹೇಳುವಂತೆ ಕೇಳಬೇಕಾದ ಪರಿಸ್ಥಿತಿ ಇದೆ. ಸಮಸ್ಯೆಯಿಂದ ಹೊರಬರಲು ತರಾತುರಿ ಮಾಡಿದರೆ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಮೂರು ಸುತ್ತುಗಳಲ್ಲಿ ಆಡಲು ಸಾಧ್ಯವಾದದ್ದರಿಂದ ಹೃದಯ ತುಂಬಿ ಬಂದಿದೆ’ ಎಂದು ಫೆಡರರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.