ಮೊನಾಕೊ: ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು, 2024ರ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಇನ್ನೊಂದು ಸಲ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಮಾಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯಿಂದ ಹಿಂದೆ ಸರಿದಿರುವ 22 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್, ಮುಂಬರುವ ಫ್ರೆಂಚ್ ಓಪನ್ ಟೂರ್ನಿಯಲ್ಲೂ ಸ್ಪರ್ಧಿಸುವುದು ಅನುಮಾನ ಎನಿಸಿದೆ.

37 ವರ್ಷದ ನಡಾಲ್, 2024ನೇ ಆವೃತ್ತಿಯ ಬಳಿಕ ಟೆನಿಸ್ ರಂಗಕ್ಕೆ ವಿದಾಯ ಘೋಷಿಸುವ ಸಾಧ್ಯತೆಯಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವ ನಂ.1 ಆಟಗಾರ ಜೊಕೊವಿಚ್, 'ಓರ್ವ ಟೆನಿಸ್ ಅಭಿಮಾನಿಯಾಗಿ ರಫೆಲ್ ನಿವೃತ್ತಿಯಾಗುವ ಮೊದಲು ಕನಿಷ್ಠ ಒಂದು ಟೂರ್ನಿಯನ್ನು ಆಡಬೇಕೆಂದು ಬಯಸುತ್ತೇನೆ' ಎಂದು ಹೇಳಿದ್ದಾರೆ.

'ಆವೆ ಮಣ್ಣಿನ ಕೋರ್ಟ್‌ನಲ್ಲಿ ನಡಾಲ್ ಸಾಧನೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಅದು ಅವರ ಗುರಿ ಕೂಡ ಆಗಿದೆ. ಈ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಟೆನಿಸ್ ಹಾಗೂ ರೋಲ್ಯಾಂಡ್ ಗ್ಯಾರೋಸ್ ಪರವಾಗಿ ಅವರು ಮಗದೊಮ್ಮೆ ಕಣಕ್ಕಳಿಯುವುದಾಗಿ ನಿರೀಕ್ಷಿಸುತ್ತೇನೆ. ಅವರ ವಿರುದ್ಧ ಇನ್ನೊಂದು ಸಲ ಮುಖಾಮುಖಿಯಾಗಲು ಸಾಧ್ಯವಾದರೆ ನಿಜಕ್ಕೂ ಅತ್ಯುತ್ತಮ' ಎಂದು ಜೊಕೊವಿಚ್ ಹೇಳಿದ್ದಾರೆ.

36 ವರ್ಷದ ಜೊಕೊವಿಚ್, ಅತಿ ಹೆಚ್ಚು 24 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.