ಬೆಂಗಳೂರು: ಮಹಿಳೆಯರ ವಿಶ್ವ ಟೆನಿಸ್ ಟೂರ್ ಟೂರ್ನಿಯು ಭಾನುವಾರ ಅರ್ಹತಾ ಸುತ್ತಿನ ಪಂದ್ಯಗಳೊಂದಿಗೆ ಇಲ್ಲಿ ಆರಂಭವಾಗಲಿದೆ. ಟೂರ್ನಿಯ ಆಯೋಜನೆಗೆ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯು(ಕೆಎಸ್ಎಲ್ಟಿಎ) ಸಜ್ಜುಗೊಂಡಿದೆ.

₹ 11.25 ಲಕ್ಷ ಬಹುಮಾನ ಮೊತ್ತದ ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಗಳು ಮಂಗಳವಾರದಿಂದ ನಡೆಯಲಿವೆ.

ಅಖಿಲ ಭಾರತ ಟೆನಿಸ್ ಸಂಸ್ಥೆಯು (ಎಐಟಿಎ) ಕೃತಿ ತೋಮರ್, ಅದಿತಿ ಅರೆ ಮತ್ತು ಪ್ರಿಯಾಂಶಿ ಭಂಡಾರಿ ಅವರಿಗೆ ಟೂರ್ನಿಯ ಕ್ವಾಲಿಫೈಯರ್ ಪಂದ್ಯಗಳಿಗೆ ವೈಲ್ಡ್ಕಾರ್ಡ್ ಪ್ರವೇಶ ನೀಡಿದರೆ, ಕೆಎಸ್ಎಲ್ಟಿಎನಿಂದ ಪ್ರಗತಿ ಪ್ರಸಾದ್ ನಾರಾಯಣ್, ಹೃದಯೇಶಿ ಪೈ ಮತ್ತು ಪಿ. ಮೇಘನಾ (ಎಲ್ಲರೂ ಕರ್ನಾಟಕ) ಅವರು ವೈಲ್ಡ್ಕಾರ್ಡ್ ಪಡೆದಿದ್ದಾರೆ.

ಕ್ವಾಲಿಫೈಯರ್ಸ್ನಲ್ಲಿ 32 ಆಟಗಾರ್ತಿಯರು ಇದ್ದು, ಇವರಲ್ಲಿ ಎಂಟು ಮಂದಿ ಮುಖ್ಯ ಸುತ್ತಿಗೆ ಆಯ್ಕೆಯಾಗಲಿದ್ದಾರೆ.

ಟೂರ್ನಿಯಲ್ಲಿ ಪ್ರಶಸ್ತಿ ವಿಜೇತರು 10 ಡಬ್ಲ್ಯುಟಿಎ ಪಾಯಿಂಟ್ಸ್, ರನ್ನರ್ಅಪ್ ಆರು ಪಾಯಿಂಟ್ಸ್, ಸೆಮಿಫೈನಲ್ ತಲುಪಿದವರು ನಾಲ್ಕು ಪಾಯಿಂಟ್ಸ್ ಮತ್ತು ಕ್ವಾರ್ಟರ್ಫೈನಲ್ ಪ್ರವೇಶಿಸಿದವರು ಎರಡು ಪಾಯಿಂಟ್ಸ್ ಗಳಿಸಲಿದ್ದಾರೆ.

ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಬಹುತೇಕ ಆಟಗಾರ್ತಿಯರು ಈಗಾಗಲೇ ಉದ್ಯಾನ ನಗರಿಗೆ ಬಂದಿಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.