ದೋಹಾ: ಭಾರತದ ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರು ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಗಳಿಸಿದರು.

ಬುಧವಾರ ನಡೆದ ಮಹಿಳಾ ಡಬಲ್ಸ್ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಕರ್ನಾಟಕದ ಅರ್ಚನಾ ಹಾಗೂ ಮಣಿಕಾ8-11, 6-11, 7-11ರಿಂದ ಚೀನಾದ ಲಿ ಯು ಜುನ್ ಮತ್ತು ಚೆಂಗ್ ಐ ಚಿಂಗ್ ಎದುರು ಸೋಲನುಭವಿಸಿದರು.

ಆರನೇ ಕ್ರಮಾಂಕದ ಭಾರತದ ಆಟಗಾರ್ತಿಯರು ಮೊದಲ ಗೇಮ್‌ನಲ್ಲಿ ಎದುರಾಳಿಗಳಿಗೆ ಸ್ವಲ್ಪ ಪ್ರತಿರೋಧ ತೋರಿದರು. ಆದರೆ ಎರಡನೇ ಮತ್ತು ಮೂರನೇ ಗೇಮ್‌ನಲ್ಲಿ ಅರ್ಚನಾ ಮತ್ತು ಮಣಿಕಾ ಅವರ ಆಟದ ಶೈಲಿಯನ್ನು ಅರಿತುಕೊಂಡಂತೆ ಆಡಿದ ಜುನ್ ಮತ್ತು ಚೆಂಗ್ ಪಾರಮ್ಯ ಮೆರೆದರು.

ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಮಣಿಕಾ ಮತ್ತು ಜಿ.ಸತ್ಯನ್ ನಿರಾಸೆ ಅನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಯಿತು.

ಪುರುಷರ ವಿಭಾಗದಲ್ಲಿ ಸತ್ಯನ್11-5, 8-11, 7-11, 4-11ರಿಂದ ಸ್ವೀಡನ್‌ನ ಕ್ರಿಸ್ಟಿಯನ್ ಕಾರ್ಲ್‌ಸನ್ ಎದುರು ಎಡವಿದರು.

ಮೊದಲ ಗೇಮ್ ಗೆದ್ದು ಭರವಸೆ ಮೂಡಿಸಿದ್ದ ಸತ್ಯನ್, ನಂತರದ ಮೂರು ಗೇಮ್‌ಗಳನ್ನು ಸುಲಭವಾಗಿ ಕೈಚೆಲ್ಲಿದರು.

ವಿಶ್ವ ಕ್ರಮಾಂಕದಲ್ಲಿ 17ನೇ ಸ್ಥಾನದಲ್ಲಿರುವ ಜರ್ಮನಿಯ ಯಿಂಗ್ ಹಾನ್11-5, 11-2, 11-4ರಿಂದ ಮಣಿಕಾ ಅವರಿಗೆ ಸೋಲುಣಿಸಿದರು. ಮಣಿಕಾ 48ನೇ ಕ್ರಮಾಂಕದ ಆಟಗಾರ್ತಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.