ಪ್ಯಾರಿಸ್: ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ, ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ ಅವರು ಬೇಬಿ ಬಂಪ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮರಿಯಾ ಶರಪೋವಾ ಮತ್ತು ಅಲೆಕ್ಸಾಂಡರ್ ಗಿಲ್ಕೆಸ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಶರಪೋವಾ, ‘ಅಮೂಲ್ಯ ಆರಂಭಗಳು! ಇಬ್ಬರ ಹುಟ್ಟುಹಬ್ಬದ ಕೇಕ್ ತಿನ್ನುವುದು ಯಾವಾಗಲೂ ನನಗೆ ವಿಶೇಷವಾಗಿರುತ್ತದೆ’ ಎಂಬ ಅಡಿಬರಹದೊಂದಿಗೆ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

2001ರಲ್ಲಿ ಟೆನಿಸ್ಗೆ ಪದಾರ್ಪಣೆ ಮಾಡಿದ್ದ ಅವರು ಐದು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ರಷ್ಯಾದ ಶರಪೋವಾ 2004ರಲ್ಲಿಯೇ ವಿಂಬಲ್ಡನ್ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದ್ದರು. 2005ರಲ್ಲಿ ಅಗ್ರಶ್ರೇಯಾಂಕಿತೆ ಕೂಡ ಗಳಿಸಿದ್ದರು. 2012ರ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಆದರೆ, 2016ರಲ್ಲಿ ನಿಷೇಧಿತ ಮದ್ದು ಮೆಲ್ಡೊನಿಯಂ ಸೇವನೆ ಆರೋಪದಲ್ಲಿ ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ್ದರು. 2017ರಲ್ಲಿ ಕಣಕ್ಕೆ ಮರಳಿದ್ದ ಅವರು ಸಫಲರಾಗಿರಲಿಲ್ಲ.

2020ರ ಫೆಬ್ರುವರಿ 27ರಂದು ಮರಿಯಾ ಶರಪೋವಾ ಅವರು ವೃತ್ತಿಪರ ಟೆನಿಸ್ಗೆ ವಿದಾಯ ಘೋಷಿಸಿದ್ದರು. ಶರಪೋವಾ ಅವರ ಪತಿ ಅಲೆಕ್ಸಾಂಡರ್ ಗಿಲ್ಕೆಸ್ ಉದ್ಯಮಿಯಾಗಿದ್ದಾರೆ.

ಓದಿ...ಸಿಗದ ಉದ್ಯೋಗ, ಟೀ ಸ್ಟಾಲ್ ತೆರೆದು ಬದುಕು ಕಟ್ಟಿಕೊಂಡ ಅರ್ಥಶಾಸ್ತ್ರ ಪದವೀಧರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.