ಮಾಂಟ್ರಿಯಲ್, ಕೆನಡಾ (ಎಎಫ್ಪಿ): ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಟೊರಾಂಟೊ ಡಬ್ಲ್ಯುಟಿಎ ಟೆನಿಸ್ ಟೂರ್ನಿಯಲ್ಲಿ ನಿರಾಸೆ ಕಂಡರು. ಮಂಗಳವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ 7–6, 3–6, 4–6 ಸೆಟ್ಗಳಿಂದ ಅವರು ಮಣಿದರು.

ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಬಾರ್ಟಿ, ವಿಂಬಲ್ಡನ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಮುಗ್ಗರಿಸಿದ್ದರು.

ಭಾರೀ ಪೈಪೋಟಿ ಕಂಡುಬಂದ ಮೊದಲ ಮೊದಲ ಸೆಟ್ನಲ್ಲಿ ಬಾರ್ಟಿ ಪಾರಮ್ಯ ಮೆರೆದರು. ಆದರೆ ಎರಡು ಮತ್ತು ಮೂರನೇ ಸೆಟ್ಗಳಲ್ಲಿ ಅದೇ ರೀತಿಯ ಲಯ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಈ ಸೋಲಿನಿಂದ ಬಾರ್ಟಿ ಅವರು ಅಗ್ರ ಕ್ರಮಾಂಕವನ್ನು ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ. ಜಪಾನ್ನ ನವೊಮಿ ಒಸಾಕಾ ಹಾಗೂ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ ಮೊದಲ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಕಿರ್ಗಿಯೊಸ್ ಪರಾಭವ: ವಾಷಿಂಗ್ಟನ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಮಾಂಟ್ರಿಯಲ್ ಮಾಸ್ಟರ್ಸ್ ಟೂರ್ನಿಯ ಪ್ರಥಮ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಮಂಗಳವಾರ ಬ್ರಿಟನ್ನ ಕೈಲ್ ಎಡ್ಮಂಡ್ ಎದುರು 3–6, 4–6ರಿಂದ ಅವರುಸೋಲಿನ ಕಹಿ ಉಂಡರು.

ಕಿರ್ಗಿಯೊಸ್ ಜೊತೆಗೆ ಆಸ್ಟ್ರೇಲಿಯಾದ ಇಬ್ಬರು ಆಟಗಾರರಾದ ಅಲೆಕ್ಸ್ ಡಿ ಮಿನೌರ್ ಹಾಗೂ ಜೋರ್ಡಾನ್ ಥಾಂಪ್ಸನ್ ಕೂಡ ಸೋಲು ಕಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.