ಮೆಲ್ಬರ್ನ್: ಭಾರತದ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾ ಓಪನ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಜಪಾನ್‌ನ ಬೆನ್ ಮೆಕ್‌ಲಾಚಲನ್ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ಎರಡು ವಾರಗಳ ಹಿಂದೆಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 72 ಆಟಗಾರರನ್ನು ವಿಶೇಷ ವಿಮಾನದ ಮೂಲಕ ಆಸ್ಟ್ರೇಲಿಯಾಕ್ಕೆ ಕರೆತರಲಾಗಿತ್ತು. ಇದರಲ್ಲಿ ಕೆಲವರಿಗೆ ಕೋವಿಡ್–19 ಇರುವುದು ದೃಢಪಟ್ಟಿತ್ತು. ಹೀಗಾಗಿ ಎಲ್ಲ ಆಟಗಾರರೂ ತಾವು ತಂಗಿರುವ ಹೊಟೇಲ್‌ನಲ್ಲೇ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿತ್ತು. ಈ 72 ಆಟಗಾರರಲ್ಲಿ ಬೋಪಣ್ಣ ಕೂಡ ಒಬ್ಬರಾಗಿದ್ದರು.

ಈ ಹಿಂದೆ ಬೋಪಣ್ಣ ಅವರಿಗೆ ಜೊತೆಗಾರನಾಗಿದ್ದ ಪೋರ್ಚುಗಲ್ ಆಟಗಾರ ಜೋವಾ ಸೌಸಾ ಅವರಿಗೆ ಕೋವಿಡ್ ದೃಢಪಟ್ಟಿದ್ದರಿಂದ ಅವರು ಆಸ್ಟ್ರೇಲಿಯಾಕ್ಕೆ ತೆರಳಿಲ್ಲ. ಹೀಗಾಗಿ ಕರ್ನಾಟಕದ ಬೋಪಣ್ಣ ಬೇರೆ ಆಟಗಾರನ ಹುಡುಕಾಟದಲ್ಲಿದ್ದರು.

‘ಜಪಾನ್‌ನ ಮೆಕ್‌ಲಾಚಲನ್ ಜೊತೆಯಾಗಿ ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಕಣಕ್ಕಿಳಿಯುವೆ‘ ಎಂದು ಬೋಪಣ್ಣ ಹೇಳಿದ್ದಾರೆ. ನ್ಯೂಜಿಲೆಂಡ್ ಮೂಲಕ ಮೆಕ್‌ಲಾಚಲನ್ ಜಪಾನ್ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ ಚೀನಾದ ಡುವಾನ್ ಯಿಂಗ್‌ಯಿಂಗ್ ಜೊತೆಯಾಗಿ ಆಡಲಿದ್ದಾರೆ.

ಆಸ್ಟ್ರೇಲಿಯಾ ಓಪನ್‌ಗೂ ಮೊದಲು ನಡೆಯಲಿರುವ ಎಟಿಪಿ ಟೂರ್ನಿಯೊಂದರಲ್ಲಿ ಬೋಪಣ್ಣ, ಡೆನ್ಮಾರ್ಕ್‌ನ ಫ್ರೆಡರಿಕ್ ನೀಲ್ಸನ್ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.