ನ್ಯೂಯಾರ್ಕ್: ಮಾಜಿ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ತಮ್ಮ ಕುತ್ತಿಗೆ ಭಾಗದಲ್ಲಿದ್ದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿಕೊಂಡಿದ್ದಾರೆ.

ತಾವು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸೆರೆನಾ ಸಂದೇಶ ಬರೆದಿದ್ದಾರೆ.

‘ದ್ರಾಕ್ಷಿ ಹಣ್ಣಿನ ಗಾತ್ರದ ಗಂಟು ಇತ್ತು. ಕಳೆದ ಮೇನಲ್ಲಿ ನನ್ನ ಕುತ್ತಿಗೆ ಮೇಲೆ ಈ ಗೆಡ್ಡೆ ಇದ್ದಿದ್ದು ಅನುಭವಕ್ಕೆ ಬಂತು. ಎಂಆರ್ಐ ಪರೀಕ್ಷೆ ನಡೆಸಲಾಯಿತು. ನಂತರ ಅದು ಬೆಳೆಯತೊಡಗಿದ್ದನ್ನು ಗಮನಿಸಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆಸಬೇಕಾಯಿತು’ ಎಂದು ಬರೆದಿದ್ದಾರೆ.

ಬಯಾಪ್ಸಿ ಸೇರಿ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದೆ. ಕ್ಯಾನ್ಸರ್ ಲಕ್ಷಣಗಳಿಲ್ಲ ಎಂದೂ ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.