ಬೆಂಗಳೂರು: ಕರ್ನಾಟಕದ ಪ್ರತಿಮಾ ಎನ್.ರಾವ್ ಮತ್ತು ಕೆ.ಪಿ.ಶಿಲ್ಪಾ ಅವರು ಅಖಿಲ ಭಾರತ ಎಐಟಿಎ ರ್ಯಾಂಕಿಂಗ್ ಗಾಲಿ ಕುರ್ಚಿ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದಿದ್ದಾರೆ.

ಕಬ್ಬನ್ ಪಾರ್ಕ್ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಅಂಗಳದಲ್ಲಿ ಶನಿವಾರ ನಡೆದ ಫೈನಲ್ನಲ್ಲಿ ಬೆಂಗಳೂರಿನ ಪ್ರತಿಮಾ ಮತ್ತು ಶಿಲ್ಪಾ 6–0, 6–1 ನೇರ ಸೆಟ್ಗಳಿಂದ ಕರ್ನಾಟಕದವರೇ ಆದ ಅಮ್ಮು ಮೋಹನ್ ಮತ್ತು ನಳಿನ ಕುಮಾರಿ ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಪ್ರತಿಮಾ ಮತ್ತು ಶಿಲ್ಪಾ ಎರಡು ಸೆಟ್ಗಳಲ್ಲೂ ಮಿಂಚಿನ ಆಟ ಆಡಿ ಏಕಪಕ್ಷೀಯವಾಗಿ ಪಂದ್ಯ ಜಯಿಸಿದರು.

ಫೈನಲ್ಗೆ ಕಾರ್ತಿಕ್: ಪುರುಷರ ಸಿಂಗಲ್ಸ್ನಲ್ಲಿ ಕೆ.ಕಾರ್ತಿಕ್, ಫೈನಲ್ ಪ್ರವೇಶಿಸಿದರು.

ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಕಾರ್ತಿಕ್ 6–3, 6–0ರಲ್ಲಿ ಡಿ.ಮರಿಯಪ್ಪನ್ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಬಾಲಚಂದ್ರ 6–3, 6–2ರಲ್ಲಿ ಕರ್ನಾಟಕದ ಶಿವಪ್ರಸಾದ್ ಎದುರು ಗೆದ್ದರು.

ಡಬಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಕರ್ನಾಟಕದ ಶೇಖರ್ ವೀರಸ್ವಾಮಿ ಮತ್ತು ಬಾಲಚಂದ್ರ ಸುಬ್ರಮಣಿಯನ್ 6–1, 6–2ರಲ್ಲಿ ಶಿವಪ್ರಸಾದ್ ಮತ್ತು ಮಧುಸೂಧನ್ ಅವರನ್ನು ಸೋಲಿಸಿದರು.

ಡಿ.ಮರಿಯಪ್ಪನ್ ಮತ್ತು ಕೆ.ಕಾರ್ತಿಕ್ 6–0, 6–1ರಲ್ಲಿ ಅನಿಲ್ ಡಿ ಅಲಮೇಡಾ ಮತ್ತು ಸದಾಶಿವಂ ವಿರುದ್ಧ ವಿಜಯಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.