ಕೋಲ್ಕತ್ತ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ಕೋಲ್ಕತ್ತದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮೂರು ವಿಕೆಟ್ಗಳಿಂದ ಮಣಿಸಿದ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶ ಮಾಡಿತು

ಇದರೊಂದಿಗೆ ಆಸ್ಟ್ರೇಲಿಯಾ ಎಂಟನೆ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶ ಮಾಡಿದಂತಾಯಿತು.

ದಕ್ಷಿಣ ಆಫ್ರಿಕಾ ನೀಡಿದ್ದ 212 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾ 47.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ ವಿಜಯದ ಕೇಕೆ ಹಾಕಿತು.

ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತ ಆಟವಾಡಿದ ಮಿಚಲ್ ಸ್ಟಾರ್ಕ್ ಹಾಗೂ ಫ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾವನ್ನು ಗೆಲುವಿನ ದಡ ಮುಟ್ಟಿಸಿದರು.

ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ (62) ಅವರನ್ನು ಬಿಟ್ಟರೇ ಉಳಿದವರು ರನ್ ಗಳಿಸು ತೀರಾ ಪ್ರಯಾಸಪಟ್ಟರು.

ಡೇವಿಡ್ ವಾರ್ನರ್ 29, ಮಿಚಲ್ ಮಾರ್ಷ್ 0, ಸ್ಟೀವ್ ಸ್ಮಿತ್ 30, ಮಾರ್ನುಸ್ 18, ಗ್ಲೇನ್ ಮ್ಯಾಕ್ಸವೆಲ್ 1, ಜೋಶ್ ಇಂಗ್ಲಿಶ್ 28 ರನ್ ಬಾರಿಸಿದರು.

ಈ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ ಚೋಕರ್ಸ್ ಹಣೆಪಟ್ಟಿ ಹೊತ್ತಿರುವ ದಕ್ಷಿಣ ಆಫ್ರಿಕಾ ಮತ್ತೆ ಅದೇ ಹಣೆಪಟ್ಟಿಯನ್ನು ಹೊತ್ತುಕೊಂಡು ಟೂರ್ನಿಯಿಂದ ನಿರ್ಗಮಿಸಿತು.

ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಸಮಯೋಚಿತ ಶತಕದ (101) ಹೊರತಾಗಿಯೂ ಬ್ಯಾಟಿಂಗ್ ಕುಸಿತ ಕಂಡಿರುವ ದಕ್ಷಿಣ ಆಫ್ರಿಕಾ, 49.4 ಓವರ್ಗಳಲ್ಲಿ 212 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ.

ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ಅತಿಥೇಯ ಭಾರತ ತಂಡವು ಈಗಾಗಲೇ ಫೈನಲ್ಗೆ ಲಗ್ಗೆ ಇಟ್ಟಿದೆ.
.ಮುಂಬೈ ಪಿಚ್ ಬಗ್ಗೆ ತಗಾದೆ: 'ಶಟ್ ಅಪ್' ಎಂದ ಗವಾಸ್ಕರ್.ನೀವು ನಿಜವಾಗಿಯೂ 'ದೇವರ ಮಗು': ವಿರಾಟ್ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಹೊಗಳಿಕೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ನಿರ್ಧಾರಕ್ಕೆ ಆರಂಭದಲ್ಲೇ ಹಿನ್ನಡೆಯಾಯಿತು. ತಂಡವು 24 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಕ್ವಿಂಟನ್ ಡಿ ಕಾಕ್ (3), ತೆಂಬಾ ಬವುಮಾ (0), ರಸಿ ವ್ಯಾನ್ ಡೆರ್ ಡಸೆ (6), ಏಡನ್ ಮರ್ಕರಮ್ (10) ನಿರಾಸೆ ಮೂಡಿಸಿದರು.

ಈ ಮಧ್ಯೆ ಡೇವಿಡ್ ಮಿಲ್ಲರ್ ಜೊತೆ ಸೇರಿದ ಹೆನ್ರಿಚ್ ಕ್ಲಾಸನ್, ಐದನೇ ವಿಕೆಟ್ಗೆ 95 ರನ್ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಮೂರು ರನ್ ಅಂತರದಲ್ಲಿ ಕ್ಲಾಸನ್ ಅರ್ಧಶತಕ ವಂಚಿತರಾದರು.

ಮತ್ತೊಂದೆಡೆ ಕೆಳ ಕ್ರಮಾಂಕದ ಬ್ಯಾಟರ್ಗಳ ನೆರವಿನೊಂದಿಗೆ ದಿಟ್ಟ ಆಟ ಪ್ರದರ್ಶಿಸಿದ ಮಿಲ್ಲರ್, ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಮಿಲ್ಲರ್, ಅಮೋಘ ಶತಕ ಗಳಿಸಿದರು.

116 ಎಸೆತಗಳನ್ನು ಎದುರಿಸಿದ ಮಿಲ್ಲರ್ ಎಂಟು ಬೌಂಡರಿ ಹಾಗೂ ಐದು ಸಿಕ್ಸರ್ಗಳ ನೆರವಿನಿಂದ 101 ರನ್ ಗಳಿಸಿದರು. ಇನ್ನುಳಿದಂತೆ ಗೆರಾಲ್ಡ್ ಕಾಟ್ಜಿ (19), ಕಗಿಸೊ ರಬಾಡ (10), ಕೇಶವ್ ಮಹಾರಾಜ್ (4), ಮಾರ್ಕೊ ಜಾನ್ಸೆನ್ (0) ಹಾಗೂ ತಬ್ರೇಜ್ ಶಮ್ಸಿ (1*) ರನ್ ಗಳಿಸಿದರು.

ಆಸ್ಟ್ರೇಲಿಯಾದ ಪರ ಮಿಚೆಲ್ ಸ್ಟಾರ್ಕ್, ನಾಯಕ ಪ್ಯಾಟ್ ಕಮಿನ್ಸ್ ತಲಾ ಮೂರು ಮತ್ತು ಜೋಶ್ ಹ್ಯಾಜಲ್ವುಡ್ ಹಾಗೂ ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ಗಳನ್ನು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.