ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಅತಿಥೇಯ ಭಾರತ ತಂಡವು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ತುದಿಗಾಲಲ್ಲಿ ನಿಂತಿದ್ದು, ಭಾರತ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಭಾರತಕ್ಕಿದು ನಾಲ್ಕನೇ ಫೈನಲ್...

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟಾರೆಯಾಗಿ ನಾಲ್ಕನೇ ಬಾರಿಗೆ ಭಾರತ ಫೈನಲ್ಗೆ ಪ್ರವೇಶಿಸಿದೆ. 1983 ಹಾಗೂ 2011ನೇ ಸಾಲಿನಲ್ಲಿ ಪ್ರಶಸ್ತಿ ಗೆದ್ದರೆ 2003ರಲ್ಲಿ ರನ್ನರ್-ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. ಈಗ ನಾಲ್ಕನೇ ಬಾರಿಗೆ ಫೈನಲ್ಗೆ ಲಗ್ಗೆಯಿಟ್ಟಿದೆ.
.IND vs NZ: ಸಚಿನ್, ಪಾಂಟಿಂಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ.50 ಶತಕ ಗಳಿಸುವುದು ರೋಹಿತ್ ಪಾಲಿಗೆ ದೊಡ್ಡ ವಿಷಯವೇನಲ್ಲ: ಅಖ್ತರ್.
20 ವರ್ಷಗಳ ಬಳಿಕ ಭಾರತ-ಆಸ್ಟ್ರೇಲಿಯಾ ಫೈನಲ್...

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 20 ವರ್ಷಗಳ ಬಳಿಕ ಮತ್ತೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸುತ್ತಿವೆ. 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿತ್ತು. ಅಂದು ಭಾರತ ತಂಡವನ್ನು ಸೌರವ್ ಗಂಗೂಲಿ ಮುನ್ನಡೆಸಿದ್ದರು.

ಕಪಿಲ್, ಧೋನಿ ಸಾಲಿಗೆ ರೋಹಿತ್ ?

1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿತ್ತು. 28 ವರ್ಷಗಳ ಬಳಿಕ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಕಪ್ತಾನಗಿರಿಯಲ್ಲಿ ಭಾರತ ಮತ್ತೆ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿತ್ತು. ಈಗ ಭಾರತದ ನೆಲದಲ್ಲಿ ನಡೆಯುತ್ತಿರುವ ವಿಶ್ವಕಪ್ ಗೆದ್ದರೆ ಕಪಿಲ್ ಹಾಗೂ ಧೋನಿ ಸಾಲಿಗೆ ರೋಹಿತ್ ಶರ್ಮಾ ಸೇರ್ಪಡೆಗೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ಐದು ಬಾರಿ ಚಾಂಪಿಯನ್...

ಏಕದಿನ ವಿಶ್ವಕಪ್ನ ಅತ್ಯಂತ ಯಶಸ್ವಿ ತಂಡ ಎನಿಸಿರುವ ಆಸ್ಟ್ರೇಲಿಯಾ, ಐದು ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಒಟ್ಟಾರೆಯಾಗಿ ಎಂಟನೇ ಬಾರಿಗೆ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಪೈಕಿ 1975 ಹಾಗೂ 1996ರಲ್ಲಿ ರನ್ನರ್-ಅಪ್ ಎನಿಸಿಕೊಂಡಿತ್ತು.

ಭಾರತ ಅಜೇಯ ಓಟ...

ಈ ಬಾರಿಯ ವಿಶ್ವಕಪ್ನಲ್ಲಿ ಈವರೆಗೆ ಆಡಿರುವ ಎಲ್ಲ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಫೈನಲ್ಗೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಲೀಗ್ ಹಂತದಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಗೆಲುವು ದಾಖಲಿಸಿತು ಎಂಬುದು ಗಮನಾರ್ಹ.
.Virat Kohli: ಏಕದಿನದಲ್ಲಿ 50ನೇ ಶತಕ; ಒಂದೇ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆ.ಶತಕಗಳ ಅರ್ಧ ಶತಕ: ಕೊಹ್ಲಿಯ 50 ಶತಕಗಳ ಸಂಪೂರ್ಣ ವಿವರ ಇಲ್ಲಿದೆ....
ಏಕದಿನ ವಿಶ್ವಕಪ್ ವಿಜೇತ ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

1975:

ಚಾಂಪಿಯನ್: ವೆಸ್ಟ್ಇಂಡೀಸ್

ರನ್ನರ್-ಅಪ್: ಆಸ್ಟ್ರೇಲಿಯಾ

1979:

ಚಾಂಪಿಯನ್: ವೆಸ್ಟ್ಇಂಡೀಸ್

ರನ್ನರ್-ಅಪ್: ಇಂಗ್ಲೆಂಡ್

1983:

ಚಾಂಪಿಯನ್: ಭಾರತ

ರನ್ನರ್-ಅಪ್: ವೆಸ್ಟ್ಇಂಡೀಸ್

1987:

ಚಾಂಪಿಯನ್: ಆಸ್ಟ್ರೇಲಿಯಾ

ರನ್ನರ್-ಅಪ್: ಇಂಗ್ಲೆಂಡ್

1992:

ಚಾಂಪಿಯನ್: ಪಾಕಿಸ್ತಾನ

ರನ್ನರ್-ಅಪ್: ಇಂಗ್ಲೆಂಡ್

1996:

ಚಾಂಪಿಯನ್: ಶ್ರೀಲಂಕಾ

ರನ್ನರ್-ಅಪ್: ಆಸ್ಟ್ರೇಲಿಯಾ

1999:

ಚಾಂಪಿಯನ್: ಆಸ್ಟ್ರೇಲಿಯಾ

ರನ್ನರ್-ಅಪ್: ಪಾಕಿಸ್ತಾನ

2003:

ಚಾಂಪಿಯನ್: ಆಸ್ಟ್ರೇಲಿಯಾ

ರನ್ನರ್-ಅಪ್: ಭಾರತ

2007:

ಚಾಂಪಿಯನ್: ಆಸ್ಟ್ರೇಲಿಯಾ

ರನ್ನರ್-ಅಪ್: ಶ್ರೀಲಂಕಾ

2011:

ಚಾಂಪಿಯನ್: ಭಾರತ

ರನ್ನರ್-ಅಪ್: ಶ್ರೀಲಂಕಾ

2015:

ಚಾಂಪಿಯನ್: ಆಸ್ಟ್ರೇಲಿಯಾ

ರನ್ನರ್-ಅಪ್: ನ್ಯೂಜಿಲೆಂಡ್

2019:

ಚಾಂಪಿಯನ್: ಇಂಗ್ಲೆಂಡ್

ರನ್ನರ್-ಅಪ್: ನ್ಯೂಜಿಲೆಂಡ್

ಒಟ್ಟು:

ಆಸ್ಟ್ರೇಲಿಯಾ: 5

ವೆಸ್ಟ್ಇಂಡೀಸ್: 2

ಭಾರತ: 2

ಪಾಕಿಸ್ತಾನ: 1

ಶ್ರೀಲಂಕಾ: 1

ಇಂಗ್ಲೆಂಡ್: 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.