ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಅವರು ಶಸ್ತ್ರಚಿಕಿತ್ಸೆ ನಂತರ ಗಂಭೀರಗೊಂಡಿದ್ದಾರೆ, ಅವರು ಮೃತಪಟ್ಟಿದ್ದಾರೆ ಎಂಬ ಊಹಾಪೋಹಗಳು ಜಗತ್ತನ್ನು ಆವರಿಸಿರುವ ನಡುವೆಯೇ ದಕ್ಷಿಣ ಕೊರಿಯಾ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:ಕಿಮ್ಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದ ವೈದ್ಯನ ಬಗ್ಗೆ ಇಲ್ಲಿದೆ ಮಾಹಿತಿ

‘ಕಿಮ್ ಜಾಂಗ್ ಉನ್ ಬದುಕಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ನಮ್ಮ ಸರ್ಕಾರದ ನಿಲುವು ದೃಢ,’ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇಯ್ ಇನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೂನ್ ಚುಂಗ್ ಇನ್ ಅವರು ಹೇಳಿದ್ದಾರೆ ಎಂದು ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮ ಸಿಎನ್‌ಎನ್ ವರದಿ ಮಾಡಿದೆ.

ಇದನ್ನೂ ಓದಿ:ಕಿಮ್ ಜಾಂಗ್ ಉನ್ ಶಸ್ತ್ರಚಿಕಿತ್ಸೆ ನಡೆದ ಆಸ್ಪತ್ರೆಯ ಆಯ್ಕೆ ಹಿಂದಿದೆ ಕಾರಣ!

‘ಕಿಮ್ ಜಾಂಗ್ ಉನ್ ಅವರು ಚನ್ನಾಗಿದ್ದಾರೆ. ಅವರು ಏ.13ರಿಂದ ವೋನ್‌ಸಾನ್‌ನಲ್ಲಿ ಇದ್ದಾರೆ. ಅಲ್ಲಿ ಯಾವುದೇ ಅನುಮಾನಾಸ್ಪದ ಚಲನವಲನಗಳು ಕಂಡು ಬಂದಿಲ್ಲ,’ ಎಂದು ಮೂನ್ ಚುಂಗ್ ತಿಳಿಸಿದ್ದಾರೆ.

ಇದನ್ನೂ ಓದಿ:ಶಸ್ತ್ರಚಿಕಿತ್ಸೆ ನಂತರ ಅಪಾಯದಲ್ಲಿ ಕಿಮ್ ಜಾಂಗ್ ಉನ್?

ಕಿಮ್ ಜಾಂಗ್ ಉನ್ ಅವರು ಹೃದಯ ರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅಪಾಯದಲ್ಲಿದ್ದಾರೆ. ಸದ್ಯ ಅವರು ಹ್ಯಾಂಗ್‌ಸ್ಯಾನ್ ಪ್ರಾಂತ್ಯದಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಕಿಮ್ ರೈಲು ವೋನ್‌ಸಾನ್‌ನಲ್ಲಿ

ಉತ್ತರ ಕೊರಿಯಾದ ಬೆಳವಣಿಗೆಗಳ ಕುರಿತು ವರದಿ ಮಾಡುವ ವೆಬ್‌ಸೈಟ್‌ವೊಂದು ವೋನ್‌ಸಾನ್ ಪ್ರದೇಶದ ಉಪಗ್ರಹ ಚಿತ್ರಗಳನ್ನು ಅಧ್ಯಯನ ಮಾಡಿದ್ದು, ಅಲ್ಲಿನ ರೈಲು ನಿಲ್ದಾಣದಲ್ಲಿ ರೈಲೊಂದು ನಿಲುಗಡೆಯಾಗಿರುವುದನ್ನು ಪತ್ತೆ ಮಾಡಿದೆ. ಅಲ್ಲದೆ, ಅದು ಕಿಮ್ ಜಾಂಗ್ ಉನ್ ಅವರು ತಮ್ಮ ಪ್ರಯಾಣಕ್ಕೆ ಬಳಸುವ ಐಷಾರಾಮ ರೈಲು ಎಂದು ಅಭಿಪ್ರಾಯಪಟ್ಟಿದೆ.

ವೋನ್‌ಸಾನ್‌ನ ರೈಲು ನಿಲ್ದಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.