ಕೊರೊನಾ ವೈರಸ್ ಸೋಂಕು ನೂರಾರು ದೇಶಗಳ ಮೇಲೆ ದುಷ್ಪರಿಣಾಮ ಬೀರಿದ್ದು, ಈವರೆಗೆ ಜಗತ್ತಿನಾದ್ಯಂತ 12 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. 60,000ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ.

ಈ ಎಲ್ಲದರ ಪರಿಣಾಮವಾಗಿ ಕೊರೊನಾ ಸೋಂಕನ್ನು ಜಾಗತಿಕ ಪಿಡುಗೆಂದೇ ಪರಿಗಣಿಸಲಾಗಿದೆ.

ಚೀನಾದ ವುಹಾನ್ ನಗರದಲ್ಲಿ ಪ್ರಾರಂಭವಾದ ಕೊರೊನಾ ಸೋಂಕು ಅಮೆರಿಕಾ, ಯುರೋಪ್, ಏಷಿಯಾ ಸೇರಿದಂತೆ ಜಗತ್ತಿನ ನೂರಾರು ರಾಷ್ಟ್ರಗಳಲ್ಲಿ ತನ್ನ ರುದ್ರನರ್ತನ ಮುಂದುವರೆಸಿದೆ.

ಯುರೋಪ್ ರಾಷ್ಟ್ರಗಳಾದ ಇಟಲಿ, ಸ್ಪೇನ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿದೆ.

ಈ ಬಿಕ್ಕಟ್ಟಿನ ಮಧ್ಯಯೇ ಜಗತ್ತಿನ ಕೆಲರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ವರದಿಗಳ ಪ್ರಕಾರ, ಸಣ್ಣ ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಇಲ್ಲಿಯವರೆಗೂ ಕೊರೊನಾ ಸೋಂಕು ಹೊಂದಿರುವ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಸೊಲೊಮನ್ ದ್ವೀಪಗಳು, ವನುವಾಟು, ಸಮೋವಾ, ಕಿರಿಬಾಟಿ, ಮೈಕ್ರೋನೇಶಿಯಾ, ಟೋಂಗಾ, ಮಾರ್ಷಲ್ ದ್ವೀಪಗಳು, ತುವಾಲು ಮತ್ತು ನವುರು ದೇಶಗಳಲ್ಲಿ ಕೋವಿಡ್-19 ಪಿಡುಗು ಪತ್ತೆಯಾಗಿಲ್ಲ. ಈ ದೇಶಗಳು ಹೊರಜಗತ್ತಿನೊಂದಿಗೆ ಹೆಚ್ಚು ಸಂಪರ್ಕ ಹೊಂದಿಲ್ಲವೆಂಬ ಕಾರಣಕ್ಕೆ ಸೋಂಕು ಹರಡಿಲ್ಲವೆಂದು ಹೇಳಲಾಗುತ್ತಿದೆ.

ವಿಶೇಷವೆಂದರೆ, ಉತ್ತರ ಕೊರಿಯಾ ಮತ್ತು ಯೆಮೆನ್, ತುರ್ಕಮೆನಿಸ್ತಾನ್ ಮತ್ತು ತಝಕಿಸ್ತಾನ್ ದೇಶಗಳಲ್ಲಿ ಕೋವಡ್-19 ಪತ್ತೆಯಾಗದಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.