ಜಿನಿವಾ:ಕೊರೊನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ಹುಟ್ಟಿಕೊಂಡಿದೆ ಎಂಬ ಅಮೆರಿಕ ಅಧ್ಯಕ್ಷರ ‘ಊಹಾತ್ಮಕ’ ಆರೋಪವನ್ನು ಬೆಂಬಲಿಸುವಂಥ ಸಾಕ್ಷ್ಯಗಳನ್ನು ಅ ದೇಶ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ.

‘ವೈರಸ್ನ ಮೂಲಕ್ಕೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರದಿಂದ ನಮಗೆ ಯಾವುದೇ ದತ್ತಾಂಶ ಅಥವಾ ನಿರ್ದಿಷ್ಟ ಪುರಾವೆಗಳು ಲಭ್ಯವಾಗಿಲ್ಲ. ಆದ್ದರಿಂದ ಅಮೆರಿಕ ಆರೋಪವು ನಮ್ಮ ದೃಷ್ಟಿಕೋನದಲ್ಲಿ ‘ಊಹಾತ್ಮಕ’ವಾಗಿ ಉಳಿದಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ನಿರ್ದೇಶಕ ಮೈಕೆಲ್ ರಯಾನ್ ತಿಳಿಸಿದ್ದಾರೆ.

ಚೀನಾದ ಉಹಾನ್ ನಗರದಲ್ಲಿರುವ ವನ್ಯಜೀವಿ ಮಾಂಸ ಮಾರುಕಟ್ಟೆಯಲ್ಲಿ ಪ್ರಾಣಿಗಳಿಂದ ಮನುಷ್ಯನಿಗೆ ಈ ವೈರಸ್ ಹರಡಿರಬಹುದು ಎಂದು ಈ ವರೆಗೆ ವಿಜ್ಞಾನಿಗಳು ನಂಬಿದ್ದಾರೆ.

ಈ ಮಧ್ಯೆ ಅಮೆರಿಕದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ ‘ನ್ಯಾಷನಲ್ ಜಿಯಾಗ್ರಫಿಕ್’ಗೆ ನೀಡಿದ ಸಂದರ್ಶನದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯವನ್ನು ತಾವೂ ಅನುಮೋದಿಸಿದ್ದಾರೆ.

‘ಬಾವಲಿಜನ್ಯ ವೈರಸ್ಗಳ ವಿಕಸನ ಮತ್ತು ಸದ್ಯ ನಮ್ಮ ಕಣ್ಣಮುಂದಿರುವ ಘಟನಾವಳಿಗಳು, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಗಮನಿಸಿದರೆ ಈ ವೈರಸ್ ಕೃತಕವಲ್ಲದ್ದು, ಉದ್ದೇಶಪೂರ್ವಕವಲ್ಲದ್ದು" ಎಂದು ಹೇಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಆಂಥೋನಿ ಫೌಸಿ.

‘ಈ ವೈರಸ್ ಹಂತ ಹಂತವಾಗಿ ವಿಕಸನ ಹೊಂದಿದೆ. ಇದನ್ನು ಗಮನಿಸಿದರೆ, ವೈರಸ್ ಪ್ರಾಕೃತಿವಾಗಿ ವಿಕಸನಹೊಂದಿ, ಒಂದು ಹಂತದಲ್ಲಿ ಜೀವಿಗಳ ದೇಹ ಹೊಕ್ಕಿದೆ,’ ಎಂದು ಹೇಳಬಹುದು ಎಂದಿದ್ದಾರೆ ಫೌಸಿ.

ಚೀನಾ ರೋಗವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಈ ವರೆಗೆ ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೈರಸ್ನ ಉಗಮ ಸ್ಥಾನ ವುಹಾನ್ ಪ್ರಯೋಗಾಲಯ ಎಂದೂ, ಅದಕ್ಕೆ ಸಂಬಂಧಿಸಿದಂತೆ ಪುರವಾವೆಗಳಿವೆ ಎಂದೂ ವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.