ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 71ನೇ ಗಣರಾಜ್ಯೋತ್ಸವದ ನೆನಪಿಗಾಗಿ ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಸುಮಾರು 30 ಸಾವಿರ ಬೀಜ ಸಹಿತ ಪರಿಸರಸ್ನೇಹಿ ರಾಷ್ಟ್ರಧ್ವಜಗಳನ್ನು ವಿತರಿಸಿದೆ.

ಈ ರಾಷ್ಟ್ರಧ್ವಜಗಳ ವಿಶೇಷವೆಂದರೆ, ಇವುಗಳನ್ನು ಕೈಯಿಂದ ತಯಾರಿಸಲಾಗಿದೆ. ಭಾನುವಾರ ಗಣರಾಜ್ಯೋತ್ಸವದಂದು ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸುವ ಎಲ್ಲಾ ಗ್ರಾಹಕರಿಗೂ ವಿತರಿಸಿದೆ.

ರಾಷ್ಟ್ರದ ಪ್ರಮುಖ ವಿಮಾನ ನಿಲ್ದಾಣಗಳಾದ ಶ್ರೀನಗರ, ದೆಹಲಿ, ಮುಂಬಯಿ, ಕೊಲ್ಕತ್ತ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿ ಬೆಳಿಗ್ಗೆ ಆಗಮಿಸುವ ಪ್ರಯಾಣಿಕರಿಗೆ ಇವುಗಳನ್ನು ವಿತರಿಸಲಾಯಿತು ಎಂದು ಸಂಸ್ಥೆಯ ವಕ್ತಾರ ಧನಂಜಯ್ ಕುಮಾರ್ ಈ ಎಎನ್ಐ ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ.

ಏರ್ ಇಂಡಿಯಾ ಸಂಸ್ಥೆಯ ಇತಿಹಾಸದಲ್ಲಿಯೇಮೊದಲಬಾರಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಂದು ನಾವು ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದೇವೆ. ಇದು ನಮ್ಮ ರಾಷ್ಟ್ರಕ್ಕೆ ನಾವು ಸಲ್ಲಿಸುವ ಗೌರವವಾಗಿದೆ. ನಮ್ಮ ಜನರಿಗೆ ಇದು ನೆನಪಿನಲ್ಲಿ ಉಳಿಯಬೇಕೆಂದು ಈ ಕೆಲಸ ಮಾಡಿದ್ದೇವೆ. ಇದಲ್ಲದೆ, ಶ್ರೀನಗರದಲ್ಲಿ ಪ್ರಥಮ ಬಾರಿ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದೇವೆ. ಈ ಕುರಿತ ಬೃಹತ್ ಗಾತ್ರದ ಹೋರ್ಡಿಂಗ್‌ಗಳನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹಾಕಲಾಗಿದೆ ಎಂದರು.

ಈ ಧ್ವಜಗಳನ್ನು ಮಧ್ಯಪ್ರದೇಶದ ಸಹರಿಯ ಬುಡಕಟ್ಟು ಜನಾಂಗದ ಕಲಾವಿದರು ತಯಾರಿಸಿದ್ದಾರೆ. ಕಾಗದ, ಹತ್ತಿ ಚೂರು, ಬಟ್ಟೆ ತುಂಡುಗಳಿಂದ ತಯಾರಿಸಲಾಗಿದೆ. ಇವುಗಳಲ್ಲಿ ಚೆಂಡು ಮಲ್ಲಿಗೆ ಹಾಗೂ ಮೆಂತ್ಯ ಬೀಜಗಳನ್ನು ತುಂಬಿಸಲಾಗಿದೆ. ಇವುಗಳು ನೆಲಕ್ಕೆ ಬಿದ್ದರೆ, ಈ ಬೀಜಗಳು ಗಿಡಗಳಾಗಿ ಹಸಿರು ಪಸರಿಸಲಿದೆ ಎಂದರು.ಏರ್ ಇಂಡಿಯಾ ಸಂಸ್ಥೆಯ ಈ ಕಾರ್ಯಕ್ಕೆ ಪ್ರಯಾಣಿಕರು ಖುಷಿಯಾಗಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.