ನವದೆಹಲಿ: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಬಸ್ ಎ320 ವಿಮಾನದಲ್ಲಿ ಗಾಂಧಿ ಚಿತ್ರ ರಚಿಸಿಏರ್ ಇಂಡಿಯಾ ವಿಮಾನ ಸಂಸ್ಥೆಮಹಾತ್ಮ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಿದೆ.

ಏರ್‌ಬಸ್ 320 ವಿಮಾನದ ಹಿಂಭಾಗದಲ್ಲಿ 11x5 ಅಡಿ ಗಾತ್ರದ ಬಾಪು ಚಿತ್ರ ರಚಿಸಲಾಗಿದೆ.
ವಿಮಾನದ ಹಿಂಬದಿಯ ಟೇಲ್ ಫಿನ್ (ಬಾಲ)ದಲ್ಲಿ ಈ ರೀತಿ ಚಿತ್ರ ಬಿಡಿಸಿದ್ದು ಇದೇ ಮೊದಲು. ಈ ಪೇಟಿಂಗ್ ಗಾಂಧೀಜಿಯವರ ಸಂದೇಶವನ್ನು ನೆನಪಿಸುತ್ತದೆ ಎಂದು ಏರ್ ಇಂಡಿಯಾ ಸಿಎಂಡಿ ಅಶ್ವನಿ ಲೊಹಾನಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಎಲ್ಲ ಮಾದರಿಯ ವಿಮಾನಗಳಲ್ಲಿ ಅಂದರೆ ಅಂತರರಾಷ್ಟ್ರೀಯ ವಿಮಾನಗಳಾದ 787,77, 747ನಲ್ಲಿಯೂ ಅದೇ ರೀತಿ ಚಿತ್ರ ಬಿಡಿಸುವ ಚಿಂತನೆ ಕಂಪನಿಯದ್ದು ಎಂದು ಲೊಹಾನಿ ಹೇಳಿದ್ದಾರೆ.

ವ್ಯವಸ್ಥಾಪಕರಿಂದ ಅನುಮತಿ ಪಡೆದು ಕಂಪನಿಯಲ್ಲಿರುವ ಕಲಾವಿದರೇ ಈ ಚಿತ್ರ ರಚಿಸಿದ್ದಾರೆ.
ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸುವುದಕ್ಕಾಗಿ ಏರ್ ಇಂಡಿಯಾ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದೆ. ನಮ್ಮ ಕೆಲಸದ ಸ್ಥಳ, ನಮ್ಮ ವಿಮಾನ ಮತ್ತು ನಮ್ಮ ಕಾಲನಿಯಲ್ಲಿ, ನಮ್ಮ ಚಿಂತನೆ ಮತ್ತು ನಮ್ಮ ನಡತೆಯನ್ನು ಸ್ವಚ್ಛವಾಗಿರಿಸಲು ನಾನು ಪ್ರಯ ತ್ನಿಸುತ್ತೇವೆ. ಇದೇ ಸಂದೇಶವನ್ನು ನಾವು ನಮ್ಮ ಕಂಪನಿಯ ಎಲ್ಲ ವಿಭಾಗಗಳಿಗೂ ಕಳಿಸಿದ್ದೇವೆ ಎಂದು ಲೊಹಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.