ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಸದ್ಯ ದೇಶ ತೊರೆದಿರುವ ನಿತ್ಯಾನಂದ ಇತ್ತೀಚೆಗೆ ದೇಶ ಕಟ್ಟುವುದಾಗಿ ಹೇಳಿ ಸುದ್ದಿಯಾಗಿದ್ದರು. ಈಗ ಅಜ್ಞಾತ ಸ್ಥಳದಿಂದ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಅದರಲ್ಲಿ ‘ನಾನೇ ಪರಮಶಿವ, ನನ್ನನ್ನು ಯಾರೂ ಏನೂ ಮಾಡಲಾರರು’ ಎಂದು ಹೇಳಿಕೊಂಡಿದ್ದಾರೆ.

‘ಸತ್ಯ ಮತ್ತು ವಾಸ್ತವವನ್ನು ತಿಳಿಸುವ ಮಾಡುವ ಮೂಲಕ ನಾನು ನನ್ನ ಶಕ್ತಿಯನ್ನು ತೋರುತ್ತೇನೆ. ಈಗ ನನ್ನನ್ನು ಯಾರಿಗೂ ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ಸತ್ಯ ದರ್ಶನ ಮಾಡಿಸುತ್ತೇನೆ. ನಾನೇ ಪರಮ ಶಿವ. ಗೊತ್ತಾಯಿತೇ? ಸತ್ಯ ಹೇಳಿದ ಕಾರಣಕ್ಕೆ ನನ್ನನ್ನು ಯಾವುದೇ ಮೂರ್ಖ ನ್ಯಾಯಾಲಯಗಳು ಕಾನೂನು ಕ್ರಮಕ್ಕೆ ಒಳಪಡಿಸಲು ಸಾಧ್ಯವಿಲ್ಲ’ ಎಂದು ನಿತ್ಯಾನಂದ ತನ್ನ ಭಕ್ತರಿಗೆ ಹೇಳಿಕೊಂಡಿದ್ದಾರೆ.

ಇದಿಷ್ಟೇ ಅಲ್ಲ, ತನ್ನ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ವಿಡಿಯೊ ಮಾಡಿರುವ ನಿತ್ಯಾನಂದ ‘ನೀವಿಲ್ಲಿ ಸೇರುವ ಮೂಲಕ ನನ್ನೆಡೆಗೆ ನಿಷ್ಠೆಯನ್ನು ತೋರಿದ್ದಿರಿ. ನಿಮಗೆಲ್ಲ ಸಾವೇ ಇಲ್ಲ ಎಂದು ವಚನ ನೀಡುತ್ತೇನೆ’ ಎಂದಿದ್ದಾರೆ.

ಈ ವಿಡಿಯೊ ಎಂದು, ಯಾವಾಗ, ಎಲ್ಲಿ ಸೃಷ್ಟಿಯಾಯಿತು ಎಂಬ ಮಾಹಿತಿ ಇಲ್ಲ. ಅಜ್ಞಾತ ಸ್ಥಳದಲ್ಲಿ ಚಿತ್ರೀಕರಿಸಿದ ಈ ವಿಡಿಯೊ ಸದ್ಯ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ.

ಇನ್ನಷ್ಟು...

ದೇಶ ಕಟ್ಟುವುದು ವೆಬ್ಸೈಟ್ ಮಾಡಿದಂತಲ್ಲ: ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಗೇಲಿ

Explainer | ಹೊಸ ದೇಶದ ಸೃಷ್ಟಿ ಹೇಗೆ? ಏನೆಲ್ಲಾ ನಿಯಮಗಳಿವೆ?

ನಿತ್ಯಾನಂದ ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್?

ದೇಶ ತೊರೆದ ಸ್ವಯಂ ಘೋಷಿತ ದೇವಮಾನವನಿತ್ಯಾನಂದ ಈಗ 'ಕೈಲಾಸ'ದಲ್ಲಿ ವಾಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.