ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಎಂಐ– 17 ಹೆಲಿಕಾಪ್ಟರ್ ಮಂಗಳವಾರ ಕೇದಾರನಾಥದ ಹೆಲಿಪ್ಯಾಡ್‌ನಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿದೆ.

‘ಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಹಾಗೂ ಮೂವರು ಕಾರ್ಮಿಕರಿದ್ದರು. ಬೆಳಿಗ್ಗೆ 8.20ರ ವೇಳೆಗೆ ಹೆಲಿಪ್ಯಾಡ್‌ನಲ್ಲಿ ಕೆಳಗಿಳಿಯುವ ಮುನ್ನ 20 ಮೀಟರ್ ದೂರದಲ್ಲೇ ಕೇಬಲ್‌ಗೆ ತಾಗಿ, ಕೆಳಗೆ ಬಿದ್ದಿದೆ’ ಎಂದು ರುದ್ರಪ್ರಯಾಗ್ ಜಿಲ್ಲಾಧಿಕಾರಿ ಮಂಗೇಶ್ ಗಿಲ್‌ದಿಯಾಲ್ ತಿಳಿಸಿದರು.

‘ಕಾಪ್ಟರ್‌ನಲ್ಲಿದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಒಬ್ಬರ ಕಾಲಿಗೆ ಸಣ್ಣಪ್ರಮಾಣದ ಗಾಯವಾಗಿದೆ. ಕೇದಾರನಾಥದಲ್ಲಿ ನಡೆಯುತ್ತಿರುವ ಕಾಮಗಾರಿಗಾಗಿ ದೊಡ್ಡ ಯಂತ್ರವನ್ನು ಗುಪ್ತಕಾಶಿಯಿಂದ ಸಾಗಿಸುತ್ತಿದ್ದರು’ ಎಂದರು.

ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.