ನವದೆಹಲಿ: ಚಂದ್ರಯಾನ–1ರ ಯಶಸ್ಸಿನ ದಶಕದ ಬಳಿಕ ಚಂದ್ರಯಾನ–2 ಉಡ್ಡಯನಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿಸಲಾಗುತ್ತಿರುವ ಭಾರತದ ಮೊದಲ ಬಾಹ್ಯಾಕಾಶ ಯೋಜನೆ ಇದಾಗಿದೆ.

ಚಂದ್ರಯಾನ–1 ಯೋಜನೆಯಿಂದ ಚಂದ್ರನಲ್ಲಿ ನೀರಿನ ಕಣಗಳಿವೆ ಎಂದು ದೃಢಪಟ್ಟಿತ್ತು.ಈ ಬಾಹ್ಯಾಕಾಶ ಕಾರ್ಯಕ್ರಮದ ಮೂಲಕ ಭಾರತದ ಮಹತ್ವಾಕಾಂಕ್ಷಿ ಚಂದ್ರನ ಅಧ್ಯಯನ ಅಧ್ಯಾಯ ಆರಂಭವಾಗಿತ್ತು. ಅಂದಹಾಗೆ ಭಾರತದ ಬಹುನಿರೀಕ್ಷಿತ ಚಂದ್ರಯಾನ–2 ಬಾಹ್ಯಾಕಾಶ ಕಾರ್ಯಕ್ರಮದ ಬಗ್ಗೆ 10 ವರ್ಷಗಳ ಹಿಂದೆಯೇ ಭಾರತದ ಮಾಜಿ ರಾಷ್ಟ್ರಪತಿ, ಬಾಹ್ಯಾಕಾಶ ವಿಜ್ಞಾನಿ, ಕ್ಷಿಪಣಿ ಮಾನವ ಎಪಿಜೆ ಅಬ್ದುಲ್ ಕಲಾಂ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ನಾಸಾ ವಿಜ್ಞಾನಿಗಳಿಗೆ ಸಲಹೆ ನೀಡಿದ್ದರು.

2008ರಲ್ಲಿ ಚಂದ್ರಯಾನ-1 ಮೂಲಕ ಭಾರತ ಮೂನ್ ಇಂಪ್ಯಾಕ್ಟ್ ಪ್ರೋಬ್(ಎಂಐಪಿ) ಎಂಬ ಉಪಕರಣವನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿತ್ತು. ಇದು ಚಂದ್ರನಲ್ಲಿ ನೀರಿನ ಕಣಗಳಿವೆ ಎಂಬ ಮಾಹಿತಿಯನ್ನು ದೃಢೀಕರಿಸಿತ್ತು.ಈ ಯೋಜನೆ ಅವಧಿಯಲ್ಲಿ ಸುಮಾರು 25 ಸೌರಜ್ವಾಲೆಗಳನ್ನು ಪತ್ತೆಹಚ್ಚಲಾಗಿತ್ತು. ಟೈಟಾನಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಅಲ್ಯುಮಿನಿಯಂ ಮತ್ತು ಕಬ್ಬಿಣದ ಅಂಶಗಳನ್ನು ಗುರುತಿಸಿದ್ದು ಮಾತ್ರವಲ್ಲದೆಸಾಕಷ್ಟು ಅಚ್ಚರಿಯ ದತ್ತಾಂಶಗಳನ್ನು ಸಂಗ್ರಹಿಸಿಲಾಗಿದೆ ಎಂದು ಇಸ್ರೊ ತಿಳಿಸಿತ್ತು.

ಚಂದ್ರಯಾನ-1ರ ಯಶಸ್ವಿ ಯೋಜನೆಯಿಂದ ಸ್ಫೂರ್ತಿಗೊಂಡ ಇಸ್ರೊ ಇನ್ನೊಂದು ಚಂದ್ರಯಾನ ಕೈಗೊಳ್ಳಲು ಉತ್ಸುಕವಾಗಿತ್ತು. ಚಂದ್ರಯಾನ -1 ಆರ್ಬಿಟರ್ ಮಿಷನ್ ಆಗಿತ್ತುಆದರೆ ಚಂದ್ರಯಾನ 2 ಮೂಲಕ ಭಾರತ ಚಂದ್ರನ ಅಂಗಳಕ್ಕೆ ಇಳಿದಿದೆ.ಅಂದರೆ ಕಕ್ಷೆಗಾಮಿಯಿಂದ ಕಳಚಿಕೊಳ್ಳುವ ಲ್ಯಾಂಡರ್, ಚಂದ್ರನ ದಕ್ಷಿಣ ಧ್ರುವದಲ್ಲಿ ಕೋಟ್ಯಂತರ ವರ್ಷ ಹಳೆಯ ಬಂಡೆಗಳ ಮೇಲೆ ಸುರಕ್ಷಿತವಾಗಿ ಇಳಿಯಲಿದೆ.ಈ ಮೂಲಕ ಭಾರತವು ಚಂದ್ರನ ಮೇಲ್ಮೈ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸುತ್ತಿರುವ ನಾಲ್ಕನೇ ದೇಶ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಸಾಧನೆ ಮಾಡಿದ್ದವು.

2009ರಲ್ಲಿ ‘Chandrayaan: Promises and Concerns’ ಎಂಬ ರಾಷ್ಟ್ರೀಯ ವಿಜ್ಞಾನ ಸೆಮಿನಾರ್ ಉದ್ಘಾಟಿಸಿ ಮಾತನಾಡಿದ ಕಲಾಂ, ಭಾರತದ ವಿಜ್ಞಾನಿಗಳು ಚಂದ್ರನ ಮೇಲ್ಮೈನಲ್ಲಿ ನೀರಿನ ಕಣಗಳಿವೆಯೇ? ಎಂಬುದರ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ ಎಂದಿದ್ದರು.ಚಂದ್ರನಲ್ಲಿರುವ ನೀರಿನ ಕಣಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಇಸ್ರೊ ಮತ್ತು ನಾಸಾ ಚಂದ್ರಯಾನ-2 ಮಿಷನ್ನಲ್ಲಿ ಸರ್ಫೇಸ್ ರೊಬೊಟಿಕ್ ಪೆನೆಟ್ರೇಟರ್ (surface robotic penetrator) ನ್ನು ಅಳವಡಿಸಬೇಕುಎಂದು ಸಲಹೆ ನೀಡಿದ್ದರು.

ಕ್ಯಾಲಿಫೋರ್ನಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಗೆ ನಾನು ಇತ್ತೀಚೆಗೆ ಭೇಟಿ ನೀಡಿದ್ದಾಗ ಚಂದ್ರಯಾನ-2 ನಲ್ಲಿ moon surface robotic penetratorನ್ನು ಅಳವಡಿಸುವ ಬಗ್ಗೆ ಕಾರ್ಯ ಪ್ರವೃತ್ತರಾಗಿ ಎಂದು ಇಸ್ರೊ ಮತ್ತು ನಾಸಾ ವಿಜ್ಞಾನಿಗಳಿಗೆ ಹೇಳಿದ್ದೆ ಎಂದು ಸಂದರ್ಶನವೊಂದರಲ್ಲಿಯೂ ಕಲಾಂ ಹೇಳಿದ್ದರು.

2050ರ ಹೊತ್ತಿಗೆ 1 ಕೆಜಿ ತೂಕದ ಬಾಹ್ಯಾಕಾಶ ನೌಕೆಯನ್ನು ನಿರ್ಮಿಸುವಂತೆ ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಲಹೆ ನೀಡಿದ್ದರು ಕಲಾಂ.ಈ ರೀತಿ ಕಡಿಮೆ ತೂಕದ ಬಾಹ್ಯಾಕಾಶ ನೌಕೆ ನಿರ್ಮಿಸುವುದರಿಂದ 20,000 ಅಮೆರಿಕನ್ ಡಾಲರ್ ಖರ್ಚನ್ನು 2,000 ಅಮೆರಿಕನ್ ಡಾಲರ್ಗೆ ಇಳಿಸಬಹುದು ಎಂದು ಕಲಾಂ ಹೇಳಿದ್ದರು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

2003ರಲ್ಲಿ ಚಂದ್ರಯಾನ-1 ಮಿಷನ್ ಬಗ್ಗೆ ಪ್ರಸ್ತಾಪ ಮುಂದಿಟ್ಟಾಗ ಚಂದ್ರಯಾನ ಮೂಲಕ ಚಂದ್ರನ ಕುರಿತ ಅಧ್ಯಯನವು ವಿಶೇಷವಾಗಿ ದೇಶದ ಯುವ ವಿಜ್ಞಾನಿಗಳನ್ನು ಮತ್ತು ಮಕ್ಕಳನ್ನು ಅಚ್ಚರಿಗೊಳಿಸಲಿದೆ. ಮುಂದಿನ ಗ್ರಹಗಳ ಬಗ್ಗೆ ಅಧ್ಯಯನಕ್ಕಾಗಿ ಈ ಚಂದ್ರಯಾನವು ಹೊಸ ಆರಂಭ ನೀಡಲಿದೆ ಎಂದು ಕಲಾಂ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ:

*ಚಂದ್ರಯಾನ–2: ಯಶಸ್ವಿಯಾಗಿ ನಭಕ್ಕೆ ನೆಗೆದ ‘ಬಾಹುಬಲಿ’
* ಚಂದ್ರನೂರಿಗೆ ಮತ್ತೊಂದು ಯಾತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.