ನವದೆಹಲಿ: ಹಿಂದೂಗಳು ಉಗ್ರರು ಎನ್ನುವವರಿಗೆಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರತ್ಯುತ್ತರ ನೀಡುತ್ತಾಳೆ. ಅದಕ್ಕಾಗಿಯೇ ಆಕೆಯನ್ನು ಸ್ಪರ್ಧೆಗೆ ಇಳಿಸಿದ್ದೇವೆ ಎಂದುಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಈ ಹೇಳಿಕೆ ನೀಡುವ ಮೂಲಕಮಾಳೆಗಾವ್ ಸ್ಪೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಿದ ಬಿಜೆಪಿ ನಿರ್ಧಾರವನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ.

ಪ್ರಜ್ಞಾ ಸಿಂಗ್ ಅವರನ್ನುಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ಈ ತೀರ್ಮಾನ ನಮ್ಮೆಲ್ಲರ ಒಮ್ಮತದ ನಿರ್ಧಾರವಾಗಿದೆ. ಈಕೆ ಕಾಂಗ್ರೆಸ್ಗೆ ಸರಿಯಾದ ಪ್ರತಿಸ್ಪರ್ಧಿ ಎಂದು ಮೋದಿ ವಿಶ್ಲೇಷಿಸಿದ್ದಾರೆ. ಕಾಂಗ್ರೆಸ್ನ ದಿಗ್ವಿಜಯಸಿಂಗ್ ವಿರುದ್ಧ ಸ್ಪರ್ಧಿಸಿರುವ ಸಾಧ್ವಿಗೆ ಮತ ನೀಡಬೇಕೆಂದು ನರೇಂದ್ರಮೋದಿ ತಿಳಿಸಿದರು.ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಉಗ್ರರ ಜೊತೆ ಸಂಪರ್ಕ ಕಲ್ಪಿಸುವ ಎಲ್ಲಾ ವ್ಯಕ್ತಿಗಳಿಗೂ ಸಾಧ್ವಿ ಪ್ರಜ್ಞಾ ಠಾಕೂರ್ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಮೋದಿ ಹೇಳಿದರು.

ದೇಶಾದ್ಯಂತ ಆದಾಯತೆರಿಗೆ ಇಲಾಖೆ ಪ್ರಮುಖ ರಾಜಕಾರಣಿಗಳ ಮನೆ ಮೇಲೆ ದಾಳಿ ನಡೆಸಿರುವುದು ಕಾನೂನು ಪ್ರಕಾರವಾಗಿದೆ. ದಾಳಿಯ ಹಿಂದೆ ಯಾರದ್ದೇ ಕೈವಾಡ ಇಲ್ಲ ಎಂದು ಹೇಳಿದರು.ಐಟಿ ದಾಳಿ ನಡೆದಿದೆ ಎಂದರೆ ಅದು ಭ್ರಷ್ಟಾಚಾರವನ್ನು ಸಾಬೀತುಪಡಿಸಿದಂತೆ. ಸಮಾಜದ ದುರ್ಬಲ ವರ್ಗದ ಮಹಿಳೆಯರು ಹಾಗೂ ಮಕ್ಕಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿ ಆ ಮೂಲಕ ಹಣ ನುಂಗಿ ಹಾಕಿದ್ದವರ ಬಳಿಯೂ ಅಕ್ರಮ ಹಣ ತುಂಬಿರುತ್ತದೆ. ಅಂತಹವರ ವಿರುದ್ಧ ಆದಾಯತೆರಿಗೆ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ಯಾರದ್ದೆ ಅಪ್ಪಣೆ ಬೇಕಿಲ್ಲ ಎಂದರು.

ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಛೋಕ್ಸಿ ಎಲ್ಲರೂ ಈಗ ವಿದೇಶದಲ್ಲಿ ಅಡಗಿ ಕುಳಿತಿದ್ದಾರೆ. ಅವರಿಗೆಲ್ಲಾ ಗೊತ್ತಿದೆ ಪ್ರಸ್ತುತ ಸರ್ಕಾರದಲ್ಲಿ ಹಣ ಪಾವತಿಸಲೇಬೇಕು. ಆರೋಪಿಗಳು ಈ ವ್ಯವಸ್ಥೆಯ ಲಾಭ ಪಡೆದುಕೊಳ್ಳತೊಡಗಿದ್ದಾರೆ. 2019ರಲ್ಲಿ ಅವರೆಲ್ಲರನ್ನೂ ಜೈಲಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದೇವೆ. 2019ರ ನಂತರ ಜೈಲಿಗೆ ಹಾಕುತ್ತೇವೆ. ಬಿಜೆಪಿ ಅತ್ಯಧಿಕ ಸಂಖ್ಯೆಯ ಸ್ಥಾನಗಳಲ್ಲಿ ಜಯಗಳಿಸುತ್ತದೆ. ಈ ಸಂಖ್ಯೆ 2014ಕ್ಕಿಂತಲೂ ಹೆಚ್ಚು ಇರುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.