ದೆಹಲಿ ವಿಶ್ವವಿದ್ಯಾಲಯದಿಂದ 1977ರಲ್ಲಿ ಕಾನೂನು ಪದವಿ ಪಡೆದ ಅರುಣ್ ಜೇಟ್ಲಿ ಅವರು ಸುಪ್ರೀಂ ಕೋರ್ಟ್ ಮತ್ತು ಕೆಲವು ಹೈಕೋರ್ಟ್ಗಳಲ್ಲಿ ವಕೀಲನಾಗಿ ವೃತ್ತಿ ಆರಂಭಿಸಿದರು.

1990ಲ್ಲಿ ಸುಪ್ರೀಂ ಕೋರ್ಟ್ನ ಹಿರಿಯ ವಕೀಲನಾಗಿ ಬಡ್ತಿ. ಅದೇ ವರ್ಷ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕವಾದರು. ಈ ಅವಧಿಯಲ್ಲಿ ಬೊಫೋರ್ಸ್ ಫಿರಂಗಿ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಣೆ ಮಾಡಿದ್ದು ಜೇಟ್ಲಿ ಅವರ ಹೆಗ್ಗಳಿಕೆಗಳಲ್ಲಿ ಒಂದು.

ಇದನ್ನೂ ಓದಿ:ಮೋದಿ ಹಿಂದಿನ ಶಕ್ತಿಯಾಗಿದ್ದ ಜೇಟ್ಲಿ

ಕಾನೂನು ಸಚಿವರಾಗಿ ಕೆಲವು ಗಮನಾರ್ಹ ಕಾನೂನುಗಳನ್ನು ಜಾರಿಗೆ ತಂದದ್ದೂ ಸಹ ಜೇಟ್ಲಿ ಅವರ ಕೊಡುಗೆಗಳಲ್ಲಿ ಮುಖ್ಯವಾದವು. ಜೇಟ್ಲಿ ಅವರು ವಕೀಲರ ಕಲ್ಯಾಣ ನಿಧಿ ಮತ್ತು ಹೂಡಿಕೆದಾರರ ರಕ್ಷಣಾ ನಿಧಿ ರಚಿಸಿದರು. ಅಲ್ಲದೆ ತ್ವರಿತಗತಿಯ ನ್ಯಾಯಾಲಯಗಳ ಸ್ಥಾಪನೆ, ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದದ್ದು ಇವರ ಸಾಧನೆಗಳಲ್ಲಿ ಪಟ್ಟಿಯಲ್ಲಿವೆ.

ಇವರ ಅವಧಿಯಲ್ಲೇ ಛತ್ತೀಸಗಡ, ಜಾರ್ಖಂಡ್ ಮತ್ತು ಉತ್ತರಾಖಂಡ ಹೈಕೋರ್ಟ್ಗಳು ಕಾರ್ಯಾರಂಭ ಮಾಡಿದವು.

ಹೆಸರಾಂತ ವಕೀಲರಾಗಿದ್ದ ಜೇಟ್ಲಿ ಅವರು ವಿವಿಧ ವ್ಯಾಜ್ಯಗಳಲ್ಲಿ ಬಿರ್ಲಾ ಕುಟುಂಬ, ಪೆಪ್ಸಿಕೊ, ಕೋಕಾಕೋಲಾ ಕಂಪನಿಗಳ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು.ರಾಜಕಾರಣಿಗಳಾದ ಶರದ್ ಯಾದವ್, ಮಾಧವರಾವ್ ಸಿಂಧಿಯಾ ಮತ್ತು ಎಲ್.ಕೆ.ಅಡ್ವಾಣಿ ಪರವೂ ಜೇಟ್ಲಿ ವಕಾಲತ್ತು ವಹಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕದೊಂದಿಗೆ ಜೇಟ್ಲಿ ನಂಟು

ವಿದ್ಯಾರ್ಥಿ ಸಂಘದಿಂದ ಹಣಕಾಸು ಸಚಿವಾಲಯದವರೆಗೆ

* 1974ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆ

* 1975ರಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಪ್ರತಿಭಟನೆ ವೇಳೆ ಬಂಧನ. ತಿಹಾರ್ ಜೈಲಿನಲ್ಲಿ 19 ತಿಂಗಳ ಸೆರೆವಾಸ

* 1977ರಲ್ಲಿ ಎಬಿವಿಪಿಯ ದೆಹಲಿ ಘಟಕದ ಅಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಕಾರ್ಯರ್ದರ್ಶಿಯಾಗಿ ನೇಮಕ

* 1980ರಲ್ಲಿ ಬಿಜೆಪಿ ಸೇರ್ಪಡೆ. ದೆಹಲಿ ಯುವ ಮೋರ್ಚಾದ ಅಧ್ಯಕ್ಷರಾಗಿ ಮತ್ತು ದೆಹಲಿ ಘಟಕದ ಕಾರ್ಯದರ್ಶಿಯಾಗಿ ನೇಮಕ

* 1991ರಲ್ಲಿ ಬಿಜೆಪಿ ರಾಷ್ಟ್ರಕಾರ್ಯಕಾರಿಣಿ ಸದಸ್ಯರಾಗಿ ನೇಮಕ

* 1999ರಲ್ಲಿ ಬಿಜೆಪಿ ವಕ್ತಾರರಾಗಿ ಆಯ್ಕೆ

ಇದನ್ನೂ ಓದಿ:ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ

* 1999ರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ, ಕಾನೂನು ಸಚಿವರಾಗಿ ಕಾರ್ಯನಿರ್ವಹಣೆ

* 2000ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ. ಸಂಪುಟ ದರ್ಜೆಯ ಸಚಿವರಾಗಿ ಆಯ್ಕೆ

* 2002ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ. 2003ರವರೆಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಕಾರ್ಯನಿರ್ವಹಣೆ

* 2003ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಮತ್ತೆ ಕೇಂದ್ರ ಸಂಪುಟ ಸೇರ್ಪಡೆ

* 2006 ಮತ್ತು 2012ರಲ್ಲಿ ರಾಜ್ಯಸಭೆಗೆ ಎರಡು ಬಾರಿ ಆಯ್ಕೆ

* 2009–2012ರವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಣೆ. ಮಹಿಳಾ ಮೀಸಲು ಮಸೂದೆ ಮತ್ತು ಜನಲೋಕಪಾಲ್ ಮಸೂದೆಗಳ ಮೇಲೆ ವಿಪಕ್ಷಗಳ ಚರ್ಚೆಯನ್ನು ಮುನ್ನೆಡೆಸಿದ ಹೆಗ್ಗಳಿಕೆ

* 2014ರ ಮೇ 26ರಂದು ಹಣಕಾಸು ಸಚಿವರಾಗಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸೇರ್ಪಡೆ. ಅಲ್ಪಾವಧಿಗೆ ಹೆಚ್ಚುವರಿಯಾಗಿ ಎರಡು ಬಾರಿ ರಕ್ಷಣಾ ಸಚಿವಾಲಯದ ಹೊಣೆ

ಇದನ್ನೂ ಓದಿ:ಆಪದ್ಬಾಂಧವ, ಸುಧಾರಕ ಹಣಕಾಸು ಸಚಿವ ಅರುಣ್ ಜೇಟ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.