ಬಿಡದಿ (ರಾಮನಗರ): ಕಾಂಗ್ರೆಸ್ ಶಾಸಕರ ಪಡೆಯು ಇಲ್ಲಿನ ಈಗಲ್ಟನ್ ರೆಸಾರ್ಟಿನಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದು, ತಡರಾತ್ರಿವರೆಗೂ ಶಾಸಕರ ಸಭೆ ನಡೆದಿತ್ತು.

ರಾತ್ರಿ 8.50ರ ಸುಮಾರಿಗೆ ಶಾಸಕರ ಒಂದು ತಂಡವು ಬಸ್ನಲ್ಲಿ ರೆಸಾರ್ಟಿಗೆ ಬಂದಿಳಿಯಿತು. ನಂತರದಲ್ಲಿ ಉಳಿದ ಶಾಸಕರು, ಸಚಿವರು ಖಾಸಗಿ ವಾಹನಗಳಲ್ಲಿ ರೆಸಾರ್ಟಿನತ್ತ ಧಾವಿಸಿದರು. ರಾತ್ರಿ 10 ಗಂಟೆ ವೇಳೆಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಗೃಹ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಬಂದರು. ನಂತರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸಹ ರೆಸಾರ್ಟಿಗೆ ಧಾವಿಸಿದರು.

ರಾತ್ರಿ ಶಾಸಕರೊಟ್ಟಿಗೆ ಊಟ ಮುಗಿಸಿದ ಬಳಿಕ ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಬಿಜೆಪಿ ಆಮಿಷಕ್ಕೆ ಒಳಗಾಗದಂತೆ ಎಚ್ಚರಿಕೆ ನೀಡಿದರು.

76 ಶಾಸಕರೂ ರೆಸಾರ್ಟಿಗೆ ಬರಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರೂ ಒಳಗೆ ಬಂದವರೆಷ್ಟು ಎಂಬ ಮಾಹಿತಿ ಖಚಿತವಾಗಿಲ್ಲ. ಶಾಸಕರಾದ ಪ್ರತಾಪ್ಗೌಡ ಪಾಟೀಲ, ಆನಂದ್ ಸಿಂಗ್, ಬಿ.ಕೆ. ಸಂಗಮೇಶ್ ಸಹಿತ ಬಹುತೇಕರು ರೆಸಾರ್ಟಿಗೆ ಬಂದಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಧಾವಿಸಿದ್ದರು. ‘ಬಿ.ಸಿ. ಪಾಟೀಲರ ಮಗಳ ಮದುವೆಗೆ ಹೋದ ಕಾರಣ ಬರುವುದು ತಡವಾಯಿತು. ಅದನ್ನೇ ಪಕ್ಷವಿರೋಧಿ ಎಂದು ಬಿಂಬಿಸಬೇಡಿ’ ಎಂದು ಪ್ರತಾಪ್ಗೌಡ ಪಾಟೀಲ ಹಾಗೂ ಅಮರೇಗೌಡ ಬಯ್ಯಾಪುರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಶಾಸಕರಿಗಾಗಿ ಈಗಲ್ಟನ್ ರೆಸಾರ್ಟಿನಲ್ಲಿ 40 ಹಾಗೂ ವಂಡರ್ ಲಾ ರೆಸಾರ್ಟಿನಲ್ಲಿ 20 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ರಾತ್ರಿ12ರ ಸುಮಾರಿಗೆ ಕೆಲವು ಶಾಸಕರುವಂಡರ್ ಲಾಗೆ ತೆರಳಿದರು.

ಕೈ ಮುಗಿದ ಡಿಕೆಶಿ

ರಾತ್ರಿ 10ರ ಸುಮಾರಿಗೆ ಕಾರಿನಲ್ಲಿ ರೆಸಾರ್ಟಿಗೆ ಬಂದ ಸಚಿವ ಡಿ.ಕೆ. ಶಿವಕುಮಾರ್ ಮಾಧ್ಯಮದವರಿಗೆ ಕೈ ಮುಗಿದು ಏನನ್ನೂ ಕೇಳಬೇಡಿ ಎನ್ನುತ್ತಲೇ ಒಳ ನಡೆದರು.

ಒಂದೇ ಬಸ್

ಶಾಸಕರು ವಿಧಾನಸೌಧದಿಂದ ಎರಡು ಬಸ್ನಲ್ಲಿ ಹೊರಟಿದ್ದರಾದರೂ ರೆಸಾರ್ಟಿಗೆ ಒಂದು ಬಸ್ ಮಾತ್ರ ಬಂದಿತು. ಮಾರ್ಗ ಮಧ್ಯೆ ಇನ್ನೊಂದು ಬಸ್ನಲ್ಲಿನ ಶಾಸಕರು ಖಾಸಗಿ ಕಾರುಗಳಿಗೆ ಸ್ಥಳಾಂತರಗೊಂಡಿದ್ದರು.

ರೆಸಾರ್ಟಿಗೆ ಪೊಲೀಸರು ಬಿಗಿಭದ್ರತೆ ಒದಗಿಸಿದ್ದು. ಮಾಧ್ಯಮವೂ ಸೇರಿದಂತೆ ಅನ್ಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಮೊದಲೇ ಕೊಠಡಿ ಕಾಯ್ದಿರಿಸಿದವರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಸ್ಥಳೀಯ ಜೆಡಿಎಸ್ ಶಾಸಕ ಎ.ಮಂಜುನಾಥ್ ಸಹ ರೆಸಾರ್ಟ್ಗೆ ಭೇಟಿ ನೀಡಿದ್ದರು.

ಸುರೇಶ್ಗೆ ಸಾರಥ್ಯ

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರಿಗೆ ಶಾಸಕರನ್ನು ನೋಡಿಕೊಳ್ಳುವ ಹೊಣೆಯನ್ನು ಕಾಂಗ್ರೆಸ್ ನೀಡಿದೆ. ಅವರೊಟ್ಟಿಗೆ ವಿಧಾನ ಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ರೆಸಾರ್ಟಿನ ಒಳಗೆ ಇದ್ದು, ಪ್ರತಿ ಶಾಸಕರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದಾರೆ.

ಕಾರಿನಲ್ಲಿ ಹೊದಿಕೆ!
ಮಾಲೂರು ಎಂಎಲ್ಎ ನಂಜೇಗೌಡ ರಾತ್ರಿ 9.50ರ ಸುಮಾರಿಗೆ ಕಾರಿನಲ್ಲಿ ಈಗಲ್ಟನ್ ರೆಸಾರ್ಟಿಗೆ ಧಾವಿಸಿದ್ದು, ಬೆಡ್ಶೀಟ್ ಸಹಿತ ಅಗತ್ಯ ಹೊದಿಕೆಗಳನ್ನು ಜೊತೆಗೆ ಹೊತ್ತು ತಂದಿದ್ದರು. ಕೆಲವು ಶಾಸಕರು ಮಾರ್ಗ ಮಧ್ಯೆ ಬಟ್ಟೆ–ಬರೆ ಖರೀದಿಸಿಕೊಂಡು ರೆಸಾರ್ಟಿಗೆ ಬಂದರು!

ಶಾಸಕಾಂಗ ಸಭೆಯನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ‘ನಮಗೆ ಆಪರೇಷನ್ ಕಮಲದ ಭಯ ಇಲ್ಲ. ಆದರೂ ನಮ್ಮ ಶಾಸಕರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬೇಕಲ್ವಾ? ಅವರ ದಾಳಿ ತಪ್ಪಿಸಿಕೊಳ್ಳಬೇಕಲ್ವಾ? ನಮ್ಮ ಪಕ್ಷದ ಎಲ್ಲ ಸಂಸದರು, ಮಂತ್ರಿಗಳು ಮತ್ತು ಶಾಸಕರು ಅಗತ್ಯವಿರುವಷ್ಟು ದಿನಸ ಒಟ್ಟಿಗೆ ಇರುತ್ತೇವೆ’ ಎಂದು ಪುನರುಚ್ಚರಿಸಿದರು.

ಬೇಕಾಗಿರುವ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ಸಂಬಂಧಿಕರಿಗೆ ಕರೆ ಮಾಡಿ ತರಿಸಿಕೊಳ್ಳುವಂತೆ ಕಾಂಗ್ರೆಸ್ ವರಿಷ್ಠರು ಶಾಸಕರಿಗೆ ಸೂಚಿಸಿದ್ದಾರೆ.

ಇನ್ನಷ್ಟು ಸುದ್ದಿ

ಮೈತ್ರಿಗೆ ಕಿಚ್ಚು ಹಚ್ಚಿದ ಬಿಜೆಪಿ: ಜೆಡಿಎಸ್, ಕಾಂಗ್ರೆಸ್ನಲ್ಲಿ ಕಂಪನ

ಯಡಿಯೂರಪ್ಪ –ಸಿದ್ದರಾಮಯ್ಯ ವಾಕ್ಸಮರ

ಜಗದೀಶ್ ಶೆಟ್ಟರ್ರಿಂದ ₹ 60 ಕೋಟಿ ಆಮಿಷ: ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪ

ಗೋವಾ, ಅಹಮದಾಬಾದ್ನಲ್ಲೂ ಅತೃಪ್ತ ಶಾಸಕರನ್ನು ಕೂಡಿಟ್ಟ ಬಿಜೆಪಿ?

ವಾಪಸ್ ಕರೆತಂದರು ಅನ್ನೋದಕ್ಕೆ ನಾವೇನು ಹಾಲು ಕುಡಿಯುವ ಮಕ್ಕಳಾ..?

ವಿಧಾನಸಭೆ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ

ಗುರುಗ್ರಾಮದ ರೆಸಾರ್ಟ್ನಲ್ಲಿ ಬಿಜೆಪಿಯ ನೂರಕ್ಕೂ ಹೆಚ್ಚು ಶಾಸಕರು

ಶುಭ ಸುದ್ದಿಯ ಭರವಸೆ ಕೊಟ್ಟ ಬಿಎಸ್ವೈ; ಐಷಾರಾಮಿ ಧಾಮದಲ್ಲಿ ಬಿಜೆಪಿ ಶಾಸಕರು

ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆದ ಪಕ್ಷೇತರ ಶಾಸಕರು

ಹೊಸ ಸರ್ಕಾರ ರಚನೆಗೆ ಸಿದ್ಧ: ಡಿ.ವಿ.ಸದಾನಂದ ಗೌಡ

ಚುರುಕಾಯ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟ್ವಿಟ್ ವಾರ್

ಅವಕಾಶ ಬಳಕೆಗೆ ಬಿಜೆಪಿ ಸನ್ನದ್ಧ: ಸಿ.ಟಿ.ರವಿ

ಶಾಸಕರು ನಾಟ್ ರೀಚಬಲ್ ಆಗಿದ್ದಾಗ ನೀವೇನು ಮಾಡುತ್ತಿದ್ದಿರಿ: ದಿನೇಶ್ ಗುಂಡೂರಾವ್ಗೆ ವೇಣುಗೋಪಾಲ್ ತರಾಟೆ

ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿರುವುದರಿಂದ ಸರ್ಕಾರ ಅಸ್ಥಿರವಾಗಲ್ಲ: ಪರಮೇಶ್ವರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.