ಬೆಂಗಳೂರು: ಚಂದ್ರಯಾನ–2 ನೌಕೆಯು ನಿರೀಕ್ಷೆಯಂತೆ ಚಂದ್ರನತ್ತ ಸಾಗುತ್ತಿದ್ದರೆ, ಬಾಹ್ಯಾಕಾಶ ನೌಕೆ ‘ಬಾಹುಬಲಿ’ ಸೆರೆ ಹಿಡಿದ ಚಿತ್ರಗಳೆಂದು, ಕೆಲವು ವ್ಯಕ್ತಿಗಳು ನಕಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಚಿತ್ರಗಳು ವೈರಲ್ ಆಗಿವೆ. ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಗಳು ನಮ್ಮ ನೌಕೆ ಸೆರೆ ಹಿಡಿದದ್ದು ಅಲ್ಲ. ಈವರೆಗೂ ಯಾವುದೇ ಚಿತ್ರಗಳನ್ನು ಬಿಡುಗಡೆ ಮಾಡಿಲ್ಲ’ ಎಂದು ಇಸ್ರೊ ವಿಜ್ಞಾನಿಗಳು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಾಹ್ಯಾಕಾಶದಿಂದ ಚಿತ್ರೀಕರಿಸಿರುವ ಭೂಮಿಯ ಚಿತ್ರಗಳನ್ನು ಹರಿ ಬಿಟ್ಟು, ಇಸ್ರೊ ನೌಕೆ ಸೆರೆ ಹಿಡಿದ ಚಿತ್ರಗಳೆಂದು ಮಾಹಿತಿಯಲ್ಲಿ ಸೇರಿಸಲಾಗಿದೆ.ಸಾಮಾನ್ಯವಾಗಿ ಯಾವುದೇ ನೌಕೆ ಉಡಾವಣೆಗೊಂಡು ಕಕ್ಷೆಗೆ ಸೇರುವ ವಿಡಿಯೊವನ್ನು ಇಸ್ರೊ ಬಿಡುಗಡೆ ಮಾಡುತ್ತದೆ. ಈವರೆಗೂ ಇಸ್ರೊ ಅಧಿಕೃತವಾಗಿ ವಿಡಿಯೊ ಬಿಡುಗಡೆ ಮಾಡಿಲ್ಲ. ಆದರೆ, ನಕಲಿ ಚಿತ್ರಗಳು ಸಾರ್ವಜನಿಕರಲ್ಲಿ ಸಾಕಷ್ಟು ಸಂಚಲನ ಮೂಡಿಸಿವೆ. ಬಾಹ್ಯಾಕಾಶ ನೌಕೆ ಎಷ್ಟು ಅದ್ಭುತವಾಗಿ ಚಿತ್ರಗಳನ್ನು ಸೆರೆ ಹಿಡಿದಿದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ. ‘ನಮ್ಮದಲ್ಲದ ಚಿತ್ರಗಳನ್ನು ಇಸ್ರೊ ಹೆಸರಿನಲ್ಲಿ ಹಂಚುವುದು ತಪ್ಪು’ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಚಂದ್ರಯಾನ–2 ನೌಕೆ ಭೂ ಕಕ್ಷೆಯಲ್ಲಿದ್ದು, ಅದರ(ಕಕ್ಷೆ) ಎತ್ತರವನ್ನು ಹಂತ ಹಂತವಾಗಿ ಮೇಲೇರಿಸುವ ಕಾರ್ಯ ಯಶಸ್ವಿಯಾಗಿ ನಡೆದಿದೆ. ಈಗ ಬಾಹ್ಯಾಕಾಶ ನೌಕೆ ಭೂಮಿಯಿಂದ 54,689 ಕಿ.ಮೀ ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.