ಕಲಬುರ್ಗಿ: ‘ಕಾಂಗ್ರೆಸ್ 40 ಸೀಟುಗಳನ್ನು ಗೆಲ್ಲುತ್ತದೆ ಎಂದು ನರೇಂದ್ರ ಮೋದಿ ಟೀಕಿಸುತ್ತಾನೆ. 40ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಮೋದಿ ನೇಣು ಹಾಕಿಕೊಳ್ಳುತ್ತಾನಾ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಏಕವಚನದಲ್ಲಿ ಪ್ರಶ್ನಿಸಿದರು.

ಚಿಂಚೋಳಿ ಮತಕ್ಷೇತ್ರ ವ್ಯಾಪ್ತಿಯ ಕೊಡದೂರಿನಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷವನ್ನು ಮೋದಿ ಟೀಕಿಸುತ್ತಿದ್ದಾನೆ. ಸ್ವಾತಂತ್ರ್ಯ ಬಂದಾಗ ಅವನು ಇನ್ನೂ ಹುಟ್ಟೇ ಇರಲಿಲ್ಲ. ಅಬ್ ಏಕ್ ಬಾರ್ ಮೋದಿ ಸರ್ಕಾರ್ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ. ಕಾಂಗ್ರೆಸ್ 40ಕ್ಕಿಂತ ಸೀಟುಗಳನ್ನು ಗೆದ್ದರೆ ನವದೆಹಲಿಯ ವಿಜಯ್ ಚೌಕ್‌ನಲ್ಲಿ ನೇಣು ಹಾಕಿಕೊಳ್ಳುತ್ತಾನಾ?’ ಎಂದು ಪುನಃ ಪ್ರಶ್ನಿಸಿದರು.

‘ರಾಜೀವ್ ಗಾಂಧಿ ಸತ್ತು 30 ವರ್ಷಗಳಾಗಿವೆ. ಅವರ ಬೂದಿ ಎಲ್ಲ ಕಡೆ ಚೆಲ್ಲಿಯಾಗಿದೆ. ಈಗ ಆ ಬೂದಿಯಲ್ಲಿ ಮೋದಿ ಹುಳು ಹುಡುಕುತ್ತಿದ್ದಾನೆ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.