ಬೆಂಗಳೂರು: ‘ರಾಜೀನಾಮೆ ಕೊಡಲು ಹೋಗಲು ಹೇಳ್ರಿ’ ಎಂದು ಕಾಂಗ್ರೆಸ್ ಸಭಾನಾಯಕ ಸಿದ್ದರಾಮಯ್ಯ ತಮ್ಮ ಬಳಿ ಬಂದ ನಾಯಕರಿಗೆ ಸಿಟ್ಟಿನಿಂದ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ರಾತ್ರಿ 11.30ರ ಸುಮಾರಿಗೆ ಹೇಳಿದ್ದು ಮೈಕ್ರೋ ಫೋನ್‌ನಲ್ಲಿ ಕೇಳಿಸಿತು.

‘ಕಲಾಪ ಇಂದೇ ಮುಗಿಸಬೇಕೇ ನಾಳೆಗೆ ಮುಂದೂಡಲೇ,ನಿರ್ಣಯ ತಿಳಿಸಿ’ ಎಂದು ಸಭಾಧ್ಯಕ್ಷರು ಹೇಳಿದಾಗ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ ಆಸನದಲ್ಲಿ ಇರಲಿಲ್ಲ. ಈ ಬಗ್ಗೆ ಸಭಾಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲಿವರೆಗೂ ಸಿದ್ದರಾಮಯ್ಯ ಮೌನವಾಗಿಯೇ ಇದ್ದರು.

ಆಗ ಸಿದ್ದರಾಮಯ್ಯ ಬಳಿ ಕೆಲವರು ಹೋದಾಗ ತಮ್ಮ ಸಿಟ್ಟು ಹೊರಹಾಕಿದರು.

ರಾಜೀನಾಮೆ ಕೊಟ್ಟು ಹೋಗಿ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಸಿಡಿ ಮಿಡಿ ಗೊಂಡಿದ್ದು ಕುಮಾರಸ್ವಾಮಿ ವಿರುದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.