ಸಂಜೆ ತನಕ ದುಡಿದು ಹೈರಾಣಾಗುವ ಆ ದಂಪತಿಗೆ ಮನೆಗೆ ಬಂದಾಕ್ಷಣ ಮಗುವಿನೊಂದಿಗೆ ಕಾಲ ಕಳೆಯುವುದೇ ಸಂಭ್ರಮ. ಆದರೆ, ಆ ಸಮಯವನ್ನು ಮಗುವಿನೊಂದಿಗೆ ಹೇಗೆ ಕಳೆಯಬೇಕೆಂಬ ಗೊಂದಲದಲ್ಲೇ ಆ ದಿನ ಮುಗಿದುಹೋಗಿರುತ್ತೆ. ಮಗು ಜತೆಗೆ ಆಟ ಆಡಬೇಕೆ ಅಥವಾ ಮಗುವಿಗೆ ಪಾಠ ಹೇಳಿಕೊಡಬೇಕೆ ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದ ಪೋಷಕರಿಗೆ ಮಗು ನಿಧಾನವಾಗಿ ಮೊಬೈಲ್ ಎತ್ತಿಕೊಂಡು ಅದರಲ್ಲಿಯೇ ತನ್ಮಯವಾಗಿದ್ದು ಅರಿವಿಗೇ ಬರುವುದಿಲ್ಲ.

ಇದು ಬಹುತೇಕ ಪೋಷಕರ ವ್ಯಥೆ. ಮಕ್ಕಳಿಗಾಗಿ ಸಮಯ ಮೀಸಲಿಟ್ಟರೂ ಆ ಸಮಯವನ್ನು ಹೇಗೆ ಕಳೆಯಬೇಕು ಎನ್ನುವುದರ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳುವುದಿಲ್ಲ. ತಾವು ಮಾಡುವ ಕೆಲಸಗಳ ಜತೆಗೆ ಮಕ್ಕಳನ್ನು ಜತೆಗಿರಿಸಿಕೊಳ್ಳುವುದೇ ಮಕ್ಕಳಿಗೆ ನೀಡುವ ಸಮಯ ಎಂದು ಹಲವರು ಭಾವಿಸಿರುತ್ತಾರೆ. ಆದರೆ, ಮಕ್ಕಳ ಜತೆ ಸುಮ್ಮನೆ ಸಮಯ ಕಳೆಯುವುದಕ್ಕೂ, ಆ ಸಮಯದಲ್ಲಿ ಗುಣಾತ್ಮಕವಾಗಿ ಕಾಲ ಕಳೆಯುವುದಕ್ಕೂ ವ್ಯತ್ಯಾಸವಿದೆ ಎನ್ನುತ್ತಾರೆ ಮಕ್ಕಳ ತಜ್ಞರು.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಅಂಬಿಕಾ ನವೀನ್ ಈ ಸಮಸ್ಯೆಗೆ ತಮ್ಮದೇ ಆದ ರೀತಿಯಲ್ಲಿ ಉತ್ತರ ಕಂಡುಕೊಂಡಿದ್ದಾರೆ.

‘ನನ್ನ ಮಗ ಸಚಿನ್‌ಗೆ ಈಗ ಆರು ವರ್ಷ. ನಾನು ಡ್ಯೂಟಿ ಮುಗಿಸಿ ತುಸು ವಿಶ್ರಾಂತಿ ಪಡೆಯುವ ವೇಳೆಗೆ ಅವನೂ ಬರುತ್ತಾನೆ. ಶಾಲೆಯಿಂದ ಬಂದ ತಕ್ಷಣ ಹೋಂವರ್ಕ್ ಇತ್ಯಾದಿ ಅಂತ ಅವನ ಮೇಲೆ ಒತ್ತಡ ಹೇರದೆ, ಶಾಲೆಯಲ್ಲಿ ಏನಾಯ್ತು ಅಂತ ಕೇಳ್ತೀನಿ. ಅವನಿಗಿಷ್ಟವಾದ ಆಟಗಳನ್ನು ಆಡಲು ಬಿಡ್ತೀನಿ. ಅವನ ಜೊತೆಗೆ ನಾನೂ ಪೇಂಟಿಂಗ್ ಮಾಡ್ತೀನಿ. ಅವನ ಮೂಡ್ ಅರಿತು ಸಮಯ ಹೇಗೆ ಕಳೆಯಬೇಕು ಅಂತ ಪ್ಲಾನ್ ಮಾಡ್ತೀನಿ. ಇದರಿಂದ ಇಬ್ಬರಿಗೂ ಖುಷಿಯಾಗುತ್ತೆ’ ಎನ್ನುತ್ತಾರೆ ಅವರು.

ಅಂಬಿಕಾ ಅವರ ಕ್ರಮ ಸರಿ ಎಂದು ಮಕ್ಕಳ ಮನಃಶಾಸ್ತ್ರಜ್ಞರೂ ಅಭಿಪ್ರಾಯಪಡುತ್ತಾರೆ.

‘ನಗರದ ಒತ್ತಡದ ಬದುಕಿನಲ್ಲಿ ಪೋಷಕರು ದಿನದ 24 ಗಂಟೆಯೂ ಮಕ್ಕಳ ಜತೆ ಇರಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ಕಳೆಯಲು ಸಿಗುವ ಎರಡುಮೂರು ತಾಸುಗಳನ್ನು ಉಪಯುಕ್ತ ಎನಿಸುವಂತೆ, ಖುಷಿ ಆಗುವಂತೆ ಕಳೆಯುವುದು ಮುಖ್ಯ’ ಎನ್ನುತ್ತಾರೆ ನಿಮ್ಹಾನ್‌ನ ಮಗು ಮತ್ತು ಹದಿಹರೆಯದ ಮಾನಸಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕವಿತಾ ವಿ. ಜಂಗಮ್.

‘ಸಮಯ ಸಿಕ್ಕಾಗಲೆಲ್ಲಾ ಮಕ್ಕಳೊಂದಿಗೆ ಆಟ ಆಡುವುದು, ಕಾಮಿಕ್ಸ್ ಪುಸ್ತಕ ಓದುವುದು, ಡಾನ್ಸ್ ಮಾಡುವುದು, ಮನೆಯ ಸಣ್ಣಪುಟ್ಟ ಕೆಲಸಗಳನ್ನು ಹಂಚಿಕೊಂಡು ಮಾಡುವುದು ಒಳಿತು. ಇದರಿಂದ ಇಬ್ಬರಿಗೂ ಸಂತಸ ಆಗುತ್ತದೆ. ಮಕ್ಕಳನ್ನು ಮಾಲ್‌ಗೆ ಕರೆದೊಯ್ಯುವ ಬದಲು, ಮನೆಯಲ್ಲೇ ಸೃಜನಾತ್ಮಕವಾಗಿ ಕಾಲ ಕಳೆಯುವ ಬಗ್ಗೆ ಪೋಷಕರು ಪ್ಲಾನಿಂಗ್ ಮಾಡಬೇಕು’ ಎನ್ನುವುದು ಅವರು ನೀಡುವ ಸಲಹೆ.

ಮಗುವಿನೊಂದಿಗೆ ಹೇಗೆ ಸಮಯ ಕಳೆಯಬಹುದು ಎಂಬ ಅನುಭವಿಗಳು ನೀಡಿರುವ ಕೆಲ ಟಿಪ್ಸ್‌ಗಳು ಇಲ್ಲಿವೆ...

ಸಣ್ಣ ವಾಕ್: ಮಲಗುವ ಮುನ್ನ ಬ್ರಶ್ ಮಾಡಿಸಿ, ಸಣ್ಣ ವಾಕಿಂಗ್ ಮಾಡಿಸಿ. ಇದರಿಂದ ರಾತ್ರಿ ಹೊತ್ತು ಮಕ್ಕಳಿಗೆ ಚೆನ್ನಾಗಿ ನಿದ್ದೆ ಬರುತ್ತದೆ. ಅಷ್ಟೇ ಅಲ್ಲ ರಾತ್ರಿ ಹೊತ್ತು ಮಲಗುವ ಸಮಯದಲ್ಲಿ ಮೊಬೈಲ್ ನೋಡಿಕೊಂಡು ಮಲಗುವ ಗೀಳನ್ನು ತಪ್ಪಿಸಿದಂತಾಗುತ್ತದೆ.

ರಾತ್ರಿಯೂಟ ಒಟ್ಟಿಗೆ ಮಾಡಿ: ಪೋಷಕರು ತಮ್ಮ ಮಕ್ಕಳು ಮತ್ತು ಹಿರಿಯರ ಜತೆ ದಿನಕ್ಕೊಂದು ಬಾರಿಯಾದರೂ ಊಟ ಮಾಡುವುದು ಒಳಿತು. ಇದರಿಂದ ಕುಟುಂಬ ಸದಸ್ಯರ ನಡುವಿನ ಸಂಬಂಧದ ಬೆಸುಗೆ ಗಟ್ಟಿಯಾಗುತ್ತದೆ. ಹಿರಿಯರು ಊಟ ಮಾಡುವ ಕ್ರಮ ಗಮನಿಸುವ ಮಗು ಸ್ವತಂತ್ರವಾಗಿ ಊಟ ಮಾಡುವುದನ್ನು ಕಲಿಯುತ್ತದೆ.

ಚಿತ್ರ ಬಿಡಿಸಿ: ಬಣ್ಣಗಳ ಒಡನಾಟ ಮಕ್ಕಳಿಗೆ ಖುಷಿ ತರುತ್ತದೆ. ಪೋಷಕರು ಮಗುವಿನೊಂದಿಗೆ ಕುಳಿತು ಚಿತ್ರಕಲೆಯತ್ತ ಗಮನ ನೀಡಿದರೆ ಮಗುವಿನ ಸಂತಸ ದುಪ್ಪಟ್ಟಾಗುತ್ತದೆ. ಯಾವ ಚಿತ್ರಕ್ಕೆ ಯಾವ ಬಣ್ಣ ಹಾಕಬೇಕು ಎಂದು ಹೇಳಿಕೊಡಿ, ಪ್ರಕೃತಿಯ ಸರಳ ಪಾಠಗಳನ್ನು ತಿಳಿಹೇಳಿ.

ನಡೆದಾಡಿ: ಬಹಳಷ್ಟು ಪೋಷಕರು ಮನೆ ಸಮೀಪದ ಅಂಗಡಿ ಅಥವಾ ಮಾರುಕಟ್ಟೆಗೆ ಹೋಗುವುದಕ್ಕೆ ವಾಹನ ಬಳಸುತ್ತಾರೆ. ಮಕ್ಕಳು ತುಸು ದೂರ ನಡೆದರೆ ಸುಸ್ತಾಗಬಹುದು ಅನ್ನುವ ಭಾವನೆ ಅನೇಕರಲ್ಲಿದೆ. ಇದು ತಪ್ಪು. ಸಮೀಪದ ಅಂಗಡಿ, ಮಾರುಕಟ್ಟೆ ಅಥವಾ ಇನ್ನಿತರ ಸ್ಥಳಗಳಿಗೆ ಮಕ್ಕಳನ್ನು ನಡೆಸಿಕೊಂಡೇ ಕರೆದೊಯ್ಯಿರಿ. ಇದರಿಂದ ಮಕ್ಕಳ ಜತೆ ಹೆಚ್ಚು ಬೆರೆಯಲು ಸಮಯ ಸಿಗುತ್ತದೆ ಮಾತ್ರವಲ್ಲ. ಸುತ್ತಮುತ್ತಲಿನ ಪರಿಸರ, ವಿದ್ಯಮಾನಗಳನ್ನು ಮಕ್ಕಳಿಗೆ ವಿವರಿಸುವ ಅವಕಾಶವೂ ಸಿಗುತ್ತದೆ.

ಆಟ ಆಡಿ: ಮೊಬೈಲ್ ಬದಿಗಿಡಿ, ದೈಹಿಕ ಶ್ರಮ ಬೇಡುವ ಆಟಗಳನ್ನು ಮಕ್ಕಳೊಡನೆ ಆಡಿ. ನಿಮ್ಮ ಆರೋಗ್ಯವೂ ಸುಧಾರಿಸುತ್ತೆ, ಮಗುವಿಗೂ ಹೆತ್ತವರ ಜೊತೆಗೆ ನಲಿದ ಖುಷಿ ಸಿಗುತ್ತೆ.

ಅಡುಗೆಗೆ ಸಹಾಯ ಪಡೆಯಿರಿ: ನೀವು ಅಡುಗೆ ಕೆಲಸ ಮಾಡುವಾಗ ನೆರವಾಗಲು ಮಕ್ಕಳಿಗೂ ಅವಕಾಶ ಕಲ್ಪಿಸಿಕೊಡಿ. ಬೆಳ್ಳುಳ್ಳಿ ಸುಲಿಯಲು, ಈರುಳ್ಳಿ ಸಿಪ್ಪೆ ತೆಗೆಯಲು, ಬಟಾಣಿ, ಅವರೆಕಾಳು ಬಿಡಿಸಲು... ಹೀಗೆ ಅಡುಗೆಮನೆಗೆ ಸಂಬಂಧಿಸಿದ ಸಣ್ಣಪುಟ್ಟ ಕೆಲಸಗಳನ್ನು ಮಕ್ಕಳಿಂದ ಮಾಡಿಸಿ. ಅಡುಗೆ ಕೆಲಸ ಮಾಡುತ್ತಲೇ ಮಕ್ಕಳೊಂದಿಗೆ ಸಮಯ ಕಳೆಯುವುದು ಪೋಷಕರು ಮತ್ತು ಮಕ್ಕಳು ಇಬ್ಬರಿಗೂ ಖುಷಿ ತರುತ್ತದೆ.

ಓದುವ ಆಟ, ಕಥೆ ಹೇಳುವ ಸುಖ: ಸಾಮಾನ್ಯವಾಗಿ ಮೂರು ವರ್ಷದ ನಂತರ ಮಕ್ಕಳಿಗೆ ಓದಲು, ಬರೆಯಲು ಆಸಕ್ತಿ ಹೆಚ್ಚುತ್ತದೆ. ಹಣ್ಣು–ತರಕಾರಿ, ಅಕ್ಷರಮಾಲೆ, ದೇಹದ ಅವಯವಗಳು, ದೈನಂದಿನ ಚಟುವಟಿಕೆಗಳನ್ನು ಪರಿಚಯಿಸುವ ಕಾರ್ಡ್‌ಬೋರ್ಡ್ ಪುಸ್ತಕಗಳನ್ನು ತಂದುಕೊಡಿ. ಅವರ ಜೊತೆ ನೀವೂ ಮಗುವಾಗಿ ಬೆರೆತು ಓದನ್ನು, ಚಿತ್ರಗಳನ್ನು ನೋಡುವುದನ್ನು ಆನಂದಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.