ಬೆಂಗಳೂರು: ‘ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ದೇವರಿಗೆ ಪೂಜೆ ಸಲ್ಲಿಸಿದ್ದು, ಬಲಭಾಗದಲ್ಲಿ ಹೂ ಕೊಟ್ಟಿದ್ದಾನೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಪೂಜೆ ಸಲ್ಲಿಸಿದ್ದು, ದೇವರು ಅವರಿಗೂ ಬಲಭಾಗದಲ್ಲಿ ಹೂ ಕೊಟ್ಟಿದ್ದಾನೆ’.

‘ಒಬ್ಬರು ಮುಖ್ಯಮಂತ್ರಿ ಆಗುತ್ತೇನೆಂದು ಪರೀಕ್ಷಿಸಲು ಹೂ ಕೇಳಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿಯಾಗಿಯೇ ಇರಲು ಹೂ ಕೇಳಿದ್ದಾರೆ. ಇಬ್ಬರಿಗೂ ಬಲಭಾಗದಲ್ಲೇ ಹೂ ಕೊಟ್ಟಿದ್ದು, ಇಬ್ಬರನ್ನೂ ಮುಖ್ಯಮಂತ್ರಿ ಮಾಡಬಹುದು’ ಎಂದು ಸೋಮವಾರ ವಿಧಾನಸಭೆಯಲ್ಲಿ ಎ.ಟಿ.ರಾಮಸ್ವಾಮಿ ಹೇಳಿದರು. ಮಧ್ಯೆ ಪ್ರವೇಶಿಸಿದ ರಮೇಶ್ ಕುಮಾರ್, ‘ನಾನು ದೇವಸ್ಥಾನಕ್ಕೆ ಹೋಗಿದ್ದೆ ಸೆಂಟ್ರಲ್ನಲ್ಲಿ ಬಿತ್ತು’ ಎಂದರು. ಆಗ ಸದನನಗೆಗಡಲಲ್ಲಿ ತೇಲಿಸಿತು.

‘ದೇವರ ಮೂರ್ತಿಯಿಂದ ಯಾವ ಕಡೆಯೂ ಹೂ ಬೀಳದಿದ್ದರೆ, ಬಲ ಭಾಗಕ್ಕೆ ಹೆಚ್ಚು ಹೂವಿಟ್ಟು, ಭಾರವಾಗುವಂತೆಮಾಡಿ ಅದೇ ಕಡೆ ಬೀಳುವಂತೆ ಮಾಡುತ್ತಾರೆ’ ಎಂದು ಪೂಜಾರಿಗಳ ಗುಟ್ಟು ರಟ್ಟುಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.