ಹಳೆ ಚಮಚ, ಕತ್ತರಿಯಿಂದ ಕಲಾಕೃತಿ
ಹಳೆ ವಸ್ತುಗಳನ್ನು ಮರುಬಳಕೆ ಮಾಡಿ, ನಾನಾ ಬಗೆಯ ಕಲಾಕೃತಿಗಳನ್ನು ರಚಿಸುವವರು ನೂರಾರು ಮಂದಿಯಿದ್ದಾರೆ. ಕೀನ್ಯಾದ ಕಲಾವಿದರೊಬ್ಬರು ಇದೇ ಸಾಲಿಗೆ ಸೇರುತ್ತಾರೆ. ಹಾಳಾದ ಕತ್ತರಿ ಹಾಗೂ ಮರದ ಚಮಚ, ಹಳೆ ಚೂರಿ ಹೀಗೆ ನಾನಾ ವಸ್ತುಗಳನ್ನು ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿ ತಂದು ಮನೆಸೆಳೆಯುವ ಕಲಾಕೃತಿಗಳನ್ನು ರಚಿಸುತ್ತಾರೆ. ಪರಿಸರ ಸಂರಕ್ಷಣೆ ಬಗ್ಗೆಯೂ ಕಾಳಜಿಯುಳ್ಳ ಅವರು, ತಮ್ಮ ಕಲಾಕೃತಿ ಪ್ರದರ್ಶನದ ಮೂಲಕ ವನ್ಯಜೀವಿಗಳ ರಕ್ಷಣೆ ಬಗ್ಗೆಯೂ ಧ್ವನಿಯೆತ್ತಿದ್ದಾರೆ.Last Updated 4 ಸೆಪ್ಟೆಂಬರ್ 2018, 19:30 IST