ಸಿಧು ರಾಜೀನಾಮೆ, ಕ್ಯಾಪ್ಟನ್ ದೆಹಲಿಗೆ; ಪಂಜಾಬ್ ಕಾಂಗ್ರೆಸ್ ಮತ್ತೆ ಪ್ರಕ್ಷುಬ್ಧ
ನವದೆಹಲಿ: ಪಂಜಾಬ್ ಕಾಂಗ್ರೆಸ್ ಮತ್ತೆ ರಾಜಕೀಯ ಪ್ರಕ್ಷುಬ್ದತೆಗೆ ಸಾಕ್ಷಿಯಾಗಿದೆ. ರಾಜ್ಯ ಘಟಕದ ಅಧ್ಯಕ್ಷನಾಗಿ ಅಧಿಕಾರಿ ವಹಿಸಿ 71 ದಿನಗಳಲ್ಲೇ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ. ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಗೆ ಜುಲೈ 18ರಂದು ಮಾಜಿ ಕ್ರಿಕೆಟಿಗ ಸಿಧು ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಆಗಿನ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ವಿರುದ್ಧ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು ಹಾಗೂ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸಿಧುಗೆ ಬೆಂಬಲ ಸೂಚಿಸಿದ್ದರು.Last Updated 28 ಸೆಪ್ಟೆಂಬರ್ 2021, 13:45 IST