ಆಳ–ಅಗಲ: ಇ.ಡಿ, ಐ.ಟಿ, ಸಿಬಿಐ ಸದಾ ‘ಸಕ್ರಿಯ’
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಯಲ್ಲಿ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಬಿಬಿಸಿಯ ದೆಹಲಿ ಮತ್ತು ಮುಂಬೈನ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯು ‘ಪರಿಶೀಲನೆ’ ನಡೆಸಿದೆ. ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿವಿರೋಧಿ ಪಕ್ಷಗಳ ಮುಖಂಡರು ಹಲವು ಬಾರಿ ಆರೋಪಿಸಿದ್ದಾರೆ. ಈ ಪಕ್ಷಗಳ ಹಲವು ಮುಖಂಡರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐಯಿಂದ ಶೋಧನೆ ನಡೆದ ಹಲವು ಉದಾಹರಣೆಗಳು ಇವೆ. ಸಚಿವ ಸ್ಥಾನದಲ್ಲಿದ್ದವರೂ ಸೇರಿದಂತೆ ಹಲವರ ಬಂಧನವೂ ಆಗಿದೆ. ಮಾಧ್ಯಮ ಸಂಸ್ಥೆಗಳೂ ಈ ಶೋಧನೆಯಿಂದ ಹೊರತಾಗಿಲ್ಲ. ಅಂತಹ ಇತ್ತೀಚಿನ ಕೆಲವು ಪ್ರಕರಣಗಳು ಇಲ್ಲಿವೆ:Last Updated 14 ಫೆಬ್ರುವರಿ 2023, 20:00 IST