ಮೇಕ್ ಇನ್ ಇಂಡಿಯಾ ಡ್ರೋನ್: ಜಾಗೃತಿ, ಸುರಕ್ಷತೆಯ ನಿರೀಕ್ಷೆಯಲ್ಲಿ
ಡ್ರೋನ್‌ಗಳ ಸ್ಥಳೀಯ ಉತ್ಪಾದನೆಯನ್ನು ಸರ್ಕಾರ ಬೆಂಬಲಿಸಿದರೆ, ಸಾಕಷ್ಟು ಸಂಖ್ಯೆಯ ಉದ್ಯಮಿಗಳು ಈ ವಲಯದಲ್ಲಿ ಕೈಯಾಡಿಸಲು ಪ್ರಯತ್ನಿಸುತ್ತಾರೆ. ಮುಂದಿನ ಮೂರು ವರ್ಷಗಳಲ್ಲಿ ಡ್ರೋನ್ ಮತ್ತು ಅದರ ಘಟಕಗಳ ತಯಾರಿಕೆಯಲ್ಲಿ 5000 ಕೋಟಿ ರೂಪಾಯಿ ಹೂಡಿಕೆಯನ್ನು ಸರ್ಕಾರ ನಿರೀಕ್ಷಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರಾಟ ವಹಿವಾಟು 900 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆಯು 10,000 ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದು ಸಾಧ್ಯವಾದರೆ, ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆಯಿರುವ ಭಾರತದಂತಹ ದೇಶದಲ್ಲಿ ಇದು ಸ್ವಾಗತಾರ್ಹ ಬೆಳವಣಿಗೆಯಾಗುತ್ತದೆ.Last Updated 14 ಫೆಬ್ರುವರಿ 2022, 14:20 IST