ನವದೆಹಲಿ: ಮಾನವರಹಿತ ವೈಮಾನಿಕ ವ್ಯವಸ್ಥೆಯಾದ ‘ಡ್ರೋನ್’ ಬಳಕೆಯ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಸೋಮವಾರ ಹೊಸ ನೀತಿ ಬಿಡುಗಡೆ ಮಾಡಿದೆ.

ಹಾರಾಟ ನಿಷೇಧ ವಲಯ ಮತ್ತು ಭದ್ರತಾ ವಲಯಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನೀತಿ ರೂಪಿಸಲಾಗಿದ್ದು, ಇದೇ ಡಿಸೆಂಬರ್ 1ರಿಂದ ಜಾರಿಗೆ ಜಾರಿಗೆ ಬರಲಿದೆ. ಕಳೆದ ನವೆಂಬರ್ನಲ್ಲಿ ಈ ಸಂಬಂಧ ಕರಡು ನೀತಿ ಪ್ರಕಟಿಸಲಾಗಿತ್ತು.

ಸಿನಿಮಾ, ಮದುವೆ ಛಾಯಾಗ್ರಹಣಕ್ಕೆ ಸೀಮಿತವಾಗಿದ್ದ ಡ್ರೋನ್ಗಳನ್ನು ಕೃಷಿ, ನಗರಾಭಿವೃದ್ಧಿ, ಪೊಲೀಸ್, ಸೇನಾ ಕಾರ್ಯಾಚರಣೆಯಂತಹ ಜನಪರ ಕಾರ್ಯಗಳಿಗೂಇತ್ತೀಚೆಗೆ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನೀತಿ ಪ್ರಕಟಿಸಿದೆ.

ಹೊಸ ನಿಯಮಾವಳಿಗಳ ಅನ್ವಯ ಮನರಂಜನೆ, ಮದುವೆ ಮುಂತಾದ ಛಾಯಾಗ್ರಹಣಕ್ಕೆ ಬಳಸಲಾಗುವ ಪುಟ್ಟ ಡ್ರೋನ್ಗಳಿಗೂ ವಿಶೇಷ ಗುರುತಿನ ಸಂಖ್ಯೆ (ಯುಐಎನ್) ಪಡೆಯುವುದು ಕಡ್ಡಾಯವಾಗಿದೆ.

* ತೂಕದ ಆಧಾರದ ಮೇಲೆ ಐದು ಗುಂಪುಗಳಲ್ಲಿ ಡ್ರೋನ್ ವರ್ಗೀಕರಣ

* ನಿಷೇಧಿತವಲ್ಲದ ವಲಯದಲ್ಲಿ 50 ಅಡಿಗಿಂತ ಕಡಿಮೆ ಮಟ್ಟದಲ್ಲಿ ಹಾರಾಡುವ 250 ಗ್ರಾಂಗಳಿಗಿಂತ ಕಡಿಮೆ ತೂಕದ ಡ್ರೋನ್ಗಳಿಗೆ ಯುಐಎನ್ ಅಥವಾ ರಾಷ್ಟ್ರೀಯ ಮಾನವ ರಹಿತ ವೈಮಾನಿಕ ಹಾರಾಟ ನಿಯಂತ್ರಣ ವ್ಯವಸ್ಥೆಯ (ಯುಎಒಪಿ) ಅನುಮತಿ ಅಗತ್ಯವಿಲ್ಲ

* 250 ಗ್ರಾಂನಿಂದ 2 ಕೆ.ಜಿ. ತೂಕದ ಒಳಗಿನ ಡ್ರೋನ್ಗಳಿಗೆ ಗುರುತಿನ ಸಂಖ್ಯೆ ಮಾತ್ರ ಅಗತ್ಯ. ಯುಎಒಪಿ ಅನುಮತಿ ಬೇಕಿಲ್ಲ.

* ವಿಮಾನ ನಿಲ್ದಾಣ, ನಿಷೇಧಿತ ವಲಯಗಳ ಸುತ್ತ ಹಾರಾಡುವ ಪುಟ್ಟ ಡ್ರೋನ್ಗಳಿಗೆ ಯುಐಎನ್ ಮತ್ತು ಯುಎಒಪಿ ಅನುಮತಿ ಕಡ್ಡಾಯ

* ಡ್ರೋನ್ ಬಳಸುವ ಕನಿಷ್ಠ 24 ಗಂಟೆಗೂ ಮುನ್ನ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಕಡ್ಡಾಯ

* ಹಗಲು ಹೊತ್ತಿನಲ್ಲಿ ಅದೂ, ದೃಷ್ಟಿ ವ್ಯಾಪ್ತಿಯಲ್ಲಿ ಮಾತ್ರ ಹಾರಾಟಕ್ಕೆ ಅನುಮತಿ

* ಕೃಷಿ ಉದ್ದೇಶ ಬಳಕೆಗೆ ಅನುಮತಿ. ಆದರೆ, ಕೀಟನಾಶಕ ಸಿಂಪಡಣೆಗೆ ಬಳಸುವಂತಿಲ್ಲ

*ಸ್ಫೋಟಕ, ಪಶು, ಪಕ್ಷಿಗಳು ಮತ್ತು ಮಾನವ ಸಾಗಾಟ ಸಂಪೂರ್ಣ ನಿರ್ಬಂಧ

* ದೇಶದ ಅಂತರರಾಷ್ಟ್ರೀಯ ಗಡಿ ಭಾಗಗಳಿಂದ ಕನಿಷ್ಠ 25 ಕಿ.ಮೀ ಒಳ ಪ್ರದೇಶಗಳಲ್ಲಿ ಮಾತ್ರ ಹಾರಾಟಕ್ಕೆ ಅನುಮತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.