ಆಳ–ಅಗಲ| ಚಿತ್ರೋದ್ಯಮ: ಕೋವಿಡ್ ನೆರಳಲ್ಲಿ ನಿರೀಕ್ಷೆಯ ಚುಂಗು
‘ಸಲಗ’, ‘ಕೋಟಿಗೊಬ್ಬ3’ ತರಹದ ದೊಡ್ಡ ಕನ್ನಡ ಚಿತ್ರಗಳು ಆಯುಧಪೂಜೆಯ ಬೂದುಕುಂಬಳದ ಮೇಲಿನ ಕರ್ಪೂರ ಉರಿಯುವ ಹೊತ್ತಿಗೆ ಕೋವಿಡ್‌ನ ಸಂಕಷ್ಟಗಳ ಸುಟ್ಟುಹಾಕಬಹುದೇನೋ ಎಂಬ ನಿರೀಕ್ಷೆಯ ಮಿಂಚು ಒಂದು ಕಡೆ. ಎಪ್ಪತ್ತೆರಡು ವರ್ಷ ಮೈಸೂರಿನ ಚಿತ್ರರಸಿಕರಿಗೆ ಸಿನಿಮಾಗಳ ದರ್ಶನ ಮಾಡಿಸಿಯೂ ಒಂದೂವರೆ ವರ್ಷದ ಸಾಂಕ್ರಾಮಿಕ ರೋಗದ ಹೊಡೆತಕ್ಕೆ ನಲುಗಿ ‘ಸ್ಕ್ರೀನ್ ಡೌನ್’ ಮಾಡಿದ ಲಕ್ಷ್ಮಿ ಚಿತ್ರಮಂದಿರದ ಮಾಲೀಕರು ಇನ್ನೊಂದು ಕಡೆ. ಕನ್ನಡ ಚಿತ್ರರಂಗ ಒಂದು ಕೈಯಲ್ಲಿ ನಿರೀಕ್ಷೆಯ ಚುಂಗು ಹಿಡಿದು, ಇನ್ನೊಂದು ಕೈಯನ್ನು ಆತಂಕ ಮತ್ತೆ ಅಪ್ಪಳಿಸೀತೇ ಎಂಬ ಆತಂಕದಲ್ಲಿ ನಡುಗಿಸುತ್ತಾ ಇರುವಂತಿದೆ ಎನ್ನುವುದರ ಪ್ರತೀಕವಿದು.Last Updated 30 ಸೆಪ್ಟೆಂಬರ್ 2021, 7:21 IST