ಒಂದಷ್ಟು ನಿರೀಕ್ಷೆಗಳ ಒಡ್ಡೋಲಗದ ನಡುವೆ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ‘ಹೋಪ್’. ಟ್ರೇಲರ್ ಮೂಲಕವೇ ನಾನಾ ದೆಸೆಯಲ್ಲಿ ಕುತೂಹಲ ಹುಟ್ಟಿಸಿರುವ ಈ ಚಿತ್ರ ಇದೇ ಜುಲೈ 8ಕ್ಕೆ ತೆರೆಗೆ ಬರಲಿದೆ. ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ, ಅದರ ಸುತ್ತ ನಡೆಯುವ ರಾಜಕೀಯ ಆಟ, ಕಾನೂನು ಹೋರಾಟದ ಕಥಾಹಂದರವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ನಟನೆಯಿಂದ ಒಂದಷ್ಟು ಅಂತರ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾಸ್ತವ್ ‘ಹೋಪ್’ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಕೆಎಎಸ್ ಅಧಿಕಾರಿ ವರ್ಗಾವಣೆ ಜನ ಸಾಮಾನ್ಯರ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಥಾವಸ್ತುವನ್ನು ಇಟ್ಕೊಂಡು ಸಿನಿಮಾ ಮಾಡಲಾಗಿದೆ. ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ‘ಹೋಪ್’ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ‘ಜ್ವಲಂತಂ’ ಸಿನಿಮಾ ನಿರ್ದೇಶಿಸಿದ ಅಂಬರೀಶ್ ಬಿ.ಎಂ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಎಸ್.ಹಾಲೇಶ್ ಛಾಯಾಗ್ರಹಣ ಮಾಡಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.