ಉತ್ತರಾಖಂಡದಲ್ಲಿ ಹಿಮಪಾತ: ಉತ್ತರಾಖಂಡವನ್ನು ಕಾಡಿದ್ದ ಪ್ರಮುಖ ನೈಸರ್ಗಿಕ ವಿಕೋಪಗಳು
ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಿಮಪರ್ವತಗಳಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಇಲ್ಲಿನ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಧೌಲಿಗಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸ್ಥಳದಲ್ಲಿನ ಋಷಿಗಂಗಾ ವಿದ್ಯುತ್ ಯೋಜನೆಗೂ ಹಾನಿಯುಂಟಾಗಿದೆ. ವಿದ್ಯುತ್ ಸ್ಥಾವರದಲ್ಲಿ 50 ರಿಂದ 100 ಮಂದಿ ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, 150ಕ್ಕೂ ಅಧಿಕ ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. 1991 ಉತ್ತರಕಾಶಿ ಭೂಕಂಪ: ಅಕ್ಟೋಬರ್, 1991ರಲ್ಲಿ 6.8 ತೀವ್ರತೆಯ ಭೂಕಂಪನವು ಅವಿಭಜಿತ ರಾಜ್ಯವಾದ ಉತ್ತರ ಪ್ರದೇಶಕ್ಕೆ ಅಪ್ಪಳಿಸಿತು, ಇದರಲ್ಲಿ ಕನಿಷ್ಠ 768 ಜನರು ಮೃತಪಟ್ಟರು ಮತ್ತು ಸಾವಿರಾರು ಮನೆಗಳು ನಾಶವಾದವು.Last Updated 7 ಫೆಬ್ರುವರಿ 2021, 11:46 IST