ಹೆಣ್ಣು ಮಕ್ಕಳು ಋತುಮತಿಯಾಗುವ ವಯೋಮಾನದಲ್ಲಿ ಕುಸಿತ: ಕಾರಣವೇನು ಗೊತ್ತೇ?
ಋತುಮತಿಯಾದ ಮೊದಲ ಮಾಸಿಕ ದಿನವನ್ನು ರಜೋದರ್ಶಕ ಅಥವಾ ಮೆನಾರ್ಚೆ ಅಂದು ಕರೆಯಲಾಗುತ್ತದೆ. ಮೊದಲೆಲ್ಲಾ 13 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಸಹಜವಾಗಿ ಮುಟ್ಟಾಗುತ್ತಿದ್ದರು. ಇದೀಗ ಈ ಅವಧಿಯ ಪ್ರಮಾಣ ತೀರ ಕುಸಿದಿದೆ. ಇದಕ್ಕೆ ಕಾರಣ ಬದಲಾದ ನಮ್ಮ ಜೀವನ ಶೈಲಿ. ಹಿಂದೆಲ್ಲಾ ಮಕ್ಕಳು ಗುಣಮಟ್ಟದ ಆಹಾರ ಸೇವಿಸುತ್ತಿದ್ದರು. ಪ್ರತಿನಿತ್ಯ ದೈಹಿಕ ಚಟುವಟಿಕೆ ಸಾಮಾನ್ಯವಾಗಿತ್ತು. ಕೋವಿಡ್ ಆಗಮನದಿಂದ ವಿಶ್ವವ್ಯಾಪಿ ಲಾಕ್‌ಡೌನ್ ಘೋಷಣೆಯಾಗಿ, ಎಲ್ಲಾ ಶಾಲಾ ಕಾಲೇಜು ಮನೆಯಿಂದಲೇ ಶಿಕ್ಷಣ ಕಲಿಯುವ ವ್ಯವಸ್ಥೆ ಒಗ್ಗಿಕೊಂಡೆವು. ಈ ವ್ಯವಸ್ಥೆ ಮಕ್ಕಳನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಪ್ರತಿನಿತ್ಯ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮುಂದೆ ಕೂರುವ ಮಕ್ಕಳು ದೈಹಿಕ ಚಟುವಟಿಕೆಗೆ ಅವಕಾಶವೇ ಸಿಗಲಿಲ್ಲ. ಜೊತೆಗೆ ಮನೆಯಲ್ಲಿ ನಿಯಮಿತಕ್ಕಿಂತ ಹೆಚ್ಚು ಆಹಾರ, ಜಂಕ್‌ಫುಡ್ ಸೇವನೆ ಮಾಡುತ್ತಿದ್ದರಿಂದ ಹೆಣ್ಣು ಮಕ್ಕಳ ದೇಹವು ವಯಸ್ಸಿಗಿಂತ ಮೀರಿ ಬೆಳೆದಿದೆ. ಇದರ ಪರಿಣಾಮ 6-7ನೇ ತರಗತಿ ಮಕ್ಕಳೆಲ್ಲರೂ ಋತುಮತಿಯಾಗುತ್ತಿದ್ದಾರೆ,Last Updated 30 ಮಾರ್ಚ್ 2022, 14:00 IST