ಅಯೋಧ್ಯೆ ರಾಮ ಮಂದಿರ: ಮ್ಯೂಸಿಯಂ, ಗುರುಕುಲ ನಿರ್ಮಾಣಕ್ಕೆ ಜನರಿಂದ ಸಲಹೆ ಆಹ್ವಾನ
ರಾಮ ಮಂದಿರ ನಿರ್ಮಾಣದ ಕಾರ್ಯ ನಡೆಯುತ್ತಿದ್ದು, ಮಂದಿರದ ಸುತ್ತಲಿನ 70 ಎಕರೆ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ, ಗುರುಕುಲ ಸೇರಿದಂತೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿರುವ ಕೇಂದ್ರಗಳ ವಿನ್ಯಾಸದ ಬಗ್ಗೆ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಮಂದಿರದ ವಿನ್ಯಾಸ, ಮುಖ್ಯ ಕಟ್ಟಡವನ್ನು ಸಾಂಪ್ರದಾಯಿಕ ನಾಗರಾ ಶೈಲಿಯಲ್ಲಿ ತಜ್ಞರು ವಿನ್ಯಾಸಗೊಳಿಸಿದ್ದಾರೆ. ಮಂದಿರದ ಸುತ್ತಲಿನ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಪುಷ್ಕರಣಿ, ಯಜ್ಞ ಮಂಟಪ, ಅನುಷ್ಠಾನ ಮಂಟಪ, ಕಲ್ಯಾಣ ಮಂಟಪ ಕಟ್ಟಡಗಳ ವಿನ್ಯಾಸ ಹಾಗೂ ರಾಮಜನ್ಮೋತ್ಸವ, ಹನುಮ ಜಯಂತಿ, ರಾಮಚರ್ಚಾ, ಸೀತಾ ವಿವಾಹದಂತಹ ಆಚರಣೆಗಳಿಗೆ ಸಂಬಂಧಿಸಿದಂತೆ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ.Last Updated 4 ನವೆಂಬರ್ 2020, 12:20 IST