ಭಾರತೀಯ ಪಿಟೀಲು ಕಲಿಕೆಗಾಗಿ ವಿದ್ವಾನ್ ಕುಮರೇಶ್ ಅವರಿಂದ ಇ-ಕಲಿಕೆ ವೇದಿಕೆ
ಫಿಡ್ಲಿಂಗ್ ಮಾಂಕ್ ಎಂದೇ ಕರೆಯಲ್ಪಡುವ ಪಿಟೀಲು ವಾದಕಕುಮಾರೇಶ್ ಆರಂಭಿಸಿರುವ ಭಾರತೀಯ ಪಿಟೀಲು ಕಲಿಕೆಗಾಗಿ ಡಿಜಿಟಲ್ ಕಲಿಕಾ ವೇದಿಕೆಯನ್ನು ಭಾರತೀಯ ತಬಲಾ ಕಲಾವಿದ ಉಸ್ತಾದ್ ಝಾಕಿರ್ ಹುಸೇನ್ ಯೂಟ್ಯೂಬ್ ಪ್ರೀಮಿಯರ್ ಮೂಲಕ ಚಾಲನೆ ನೀಡಿದರು.ಭಾರತದಲ್ಲಿ ಪಿಟೀಲು ಸಂವಾದಾತ್ಮಕ ಡಿಜಿಟಲ್ ಕಲಿಕೆಯ ಅನುಭವವನ್ನು ನೀಡುವಲ್ಲಿ ‘ಬೋವಿಂಗ್ ವಿಥ್ ಫಿಡ್ಲಿಂಗ್ ಮಾಂಕ್’ ಎಂಬ ಶೀರ್ಷಿಕೆಯ ವೇದಿಕೆ ಮೊದಲನೆಯದಾಗಿದ್ದು, ವಿಶೇಷವಾಗಿ ಸಂಯೋಜಿಸಲ್ಪಟ್ಟ ಮತ್ತು ಸಂಗ್ರಹಿಸಿದ ಮಧುರ ಸ್ವರಗಳೊಂದಿಗೆ ಪಿಟೀಲು ಕಲಿಯಲು ಸುಲಭ ಮಾರ್ಗಗಳನ್ನು ನೀಡುತ್ತದೆ.Last Updated 12 ಜನವರಿ 2021, 12:49 IST