ಬೆಂಗಳೂರು: ಫಿಡ್ಲಿಂಗ್ ಮಾಂಕ್ ಎಂದೇ ಕರೆಯಲ್ಪಡುವ ಪಿಟೀಲು ವಾದಕಕುಮಾರೇಶ್ ಆರಂಭಿಸಿರುವ ಭಾರತೀಯ ಪಿಟೀಲು ಕಲಿಕೆಗಾಗಿ ಡಿಜಿಟಲ್ ಕಲಿಕಾ ವೇದಿಕೆಯನ್ನು ಭಾರತೀಯ ತಬಲಾ ಕಲಾವಿದ ಉಸ್ತಾದ್ ಝಾಕಿರ್ ಹುಸೇನ್ ಯೂಟ್ಯೂಬ್ ಪ್ರೀಮಿಯರ್ ಮೂಲಕ ಚಾಲನೆ ನೀಡಿದರು.

ಭಾರತದಲ್ಲಿ ಪಿಟೀಲು ಸಂವಾದಾತ್ಮಕ ಡಿಜಿಟಲ್ ಕಲಿಕೆಯ ಅನುಭವವನ್ನು ನೀಡುವಲ್ಲಿ ‘ಬೋವಿಂಗ್ ವಿಥ್ ಫಿಡ್ಲಿಂಗ್ ಮಾಂಕ್’ ಎಂಬ ಶೀರ್ಷಿಕೆಯ ವೇದಿಕೆ ಮೊದಲನೆಯದಾಗಿದ್ದು, ವಿಶೇಷವಾಗಿ ಸಂಯೋಜಿಸಲ್ಪಟ್ಟ ಮತ್ತು ಸಂಗ್ರಹಿಸಿದ ಮಧುರ ಸ್ವರಗಳೊಂದಿಗೆ ಪಿಟೀಲು ಕಲಿಯಲು ಸುಲಭ ಮಾರ್ಗಗಳನ್ನು ನೀಡುತ್ತದೆ.

ಈ ಕೋರ್ಸ್ನಲ್ಲಿ ಫಿಂಗರಿಂಗ್ ತಂತ್ರಗಳನ್ನು ಸೆರೆಹಿಡಿಯುವ ಮತ್ತು ಕೂರುವ ಭಂಗಿಗಳನ್ನು ಹೆಚ್ಚಿನ ವಿವರವಾಗಿ ಸೆರೆಹಿಡಿಯುವ ಅನೇಕ ಕ್ಯಾಮೆರಾ ಕೋನಗಳನ್ನು ಒಳಗೊಂಡ ವಿಡಿಯೊ ಪಾಠಗಳನ್ನು ಒಳಗೊಂಡಿದೆ. ಯಾವುದೇ ವಯಸ್ಸಿನ ವಿದ್ಯಾರ್ಥಿಗಳು ಕೂಡ ತಮ್ಮ ಖಾತೆಯೊಂದಿಗೆ ಸೈನ್ ಇನ್ ಆಗಿ ಈ ತರಗತಿಗಳಿಗೆ ದಾಖಲಾಗಬಹುದು.

ಈ ಕುರಿತು ಪ್ರತಿಕ್ರಿಯಿಸಿದ ಕುಮಾರೇಶ್, ಹೊಸ ಯುಗದ ಡಿಜಿಟಲ್ ಕಲಿಕೆಯು ಜೀವನದ ಪ್ರತಿಯೊಂದು ಹಂತದಲ್ಲೂ ಹರಡುತ್ತಿದ್ದು, ಸಂಗೀತವೂ ಇದಕ್ಕೆ ಹೊರತಾಗಿಲ್ಲ. ಭಾರತೀಯ ಪಿಟೀಲು ಕಲಿಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಇ-ಲರ್ನಿಂಗ್ ವೇದಿಕೆಯನ್ನು ಪ್ರಾರಂಭಿಸಲು ನನಗೆ ಸಂತೋಷವಾಗಿದೆ. ಡಿಜಿಟಲ್ ವೇದಿಕೆ ಮೂಲಕ ವಿದ್ಯಾರ್ಥಿಗಳಿಗೆ ತಮ್ಮಿಷ್ಟದ ಸ್ಥಳದಲ್ಲಿ ವೇಗವಾಗಿ ಕಲಿಯಲು ಸಹಾಯ ಮಾಡುತ್ತದೆ. ಸಂಗೀತ ಪಯಣವನ್ನು ಆರಂಭಿಸುವ ವಿದ್ಯಾರ್ಥಿ ಸಮುದಾಯಕ್ಕೆ ಸೇವೆ ಸಲ್ಲಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಕೋರ್ಸ್ ಅನ್ನು ಬಿಗಿನರ್ಸ್, ಇಂಟರ್ಮೀಡಿಯರಿಸ್ ಮತ್ತು ಅಡ್ವಾನ್ಸ್ಡ್ ಮೂರು ಭಾಗಗಳಾಗಿ ವಿಂಗಡಿಸಿದ್ದು, ಆ ಮೂಲಕವೇ ಕಲಿಸಿಕೊಡಲಾಗುತ್ತದೆ. ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚಿನ ಕೋರ್ಸ್ ಮಾದರಿಗಳನ್ನು ಮುಂದಿನ ದಿನಗಳಲ್ಲಿ ಸೇರಿಸಲಾಗುತ್ತದೆ.

ಪಿಟೀಲು ಮೆಸ್ಟ್ರೋ ಕುಮಾರೇಶ್ ಅವರು 48 ವರ್ಷಗಳ ಕಾಲ ಭಾರತೀಯ ಪಿಟೀಲು ವಾದಕರಾಗಿ ಅಪರಾ ಸಾಧನೆ ಮಾಡಿದ್ದು, ಜಗತ್ತು ತಮ್ಮತ್ತ ನೋಡುವಂತೆ ಮಾದರಿಯಾಗಿ ಬದಲಾವಣೆಯನ್ನು ಸೃಷ್ಟಿಸಿದ್ದಾರೆ. ತಮ್ಮ ಐದನೇ ವಯಸ್ಸಿಗೆ ಪಿಟೀಲು ವಾದನವನ್ನು ಆರಂಭಿಸಿದ ಅವರು ತಮ್ಮ 10ನೇ ವಯಸ್ಸಿಗೆ ಸುಮಾರು 100 ವೇದಿಕೆ ಕಾರ್ಯಕ್ರಮಗಳನ್ನು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.