ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಧ್ವನಿ ಗ್ರಹಿಸಿ ಕಾರ್ಯನಿರ್ವಹಿಸುವ ಸ್ಪೀಕರ್‌ಗಳಿಗಿಂತ ಸ್ವಲ್ಪ ಭಿನ್ನವಾದ ಸ್ಮಾರ್ಟ್ ಸ್ಪೀಕರ್‌ವೊಂದು ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ. ಭಾರತದಲ್ಲಿ 'ಇಕೊ ಫ್ಲೆಕ್ಸ್' ಬಿಡುಗಡೆ ಮಾಡುವುದಾಗಿ ಅಮೆಜಾನ್ ಬುಧವಾರ ಪ್ರಕಟಿಸಿದೆ.

'ಅಲೆಕ್ಸಾ...ಹಾಡು ಕೇಳಿಸು', 'ಅಲೆಕ್ಸಾ, ಲೈಟ್ ಹಾಕು', 'ಅಲೆಕ್ಸಾ, ಇವತ್ತಿನ ವಾತಾವರಣ ಹೇಗಿದೆ', 'ಅಲೆಕ್ಸಾ, ಏನು ಇವತ್ತಿನ ಪ್ರಮುಖ ಸುದ್ದಿ..' ಹೀಗೆ ಕೇಳುವ ಪ್ರಶ್ನೆಗಳಿಗೆ ಉತ್ತರ ಹಾಗೂ ನೀಡುವ ಆದೇಶಗಳನ್ನು ಸ್ಮಾರ್ಟ್ ಸ್ಪೀಕರ್ ಪಾಲಿಸುತ್ತದೆ. ಈಗಾಗಲೇ ಬಳಕೆಯಲ್ಲಿರುವ ಅಮೆಜಾನ್'ಇಕೊ' ಸರಣಿಯ ಸ್ಮಾರ್ಟ್ ಸ್ಪೀಕರ್‌ಗಳ ರೀತಿಯೇ ಫ್ಲೆಕ್ಸ್ ಸಹ ಕಾರ್ಯನಿರ್ವಹಿಸುತ್ತದೆ. ಆದರೆ, ಯಾವುದೇ ಎಲೆಕ್ಟ್ರಿಕ್ ಬೋರ್ಡ್‌ಗೆ ಪ್ಲಗ್ ಮಾಡಬಹುದಾದ ಸ್ಮಾರ್ಟ್ ಸ್ಪೀಕರ್ ಇದಾಗಿದೆ. ಎರಡು ಪಿನ್ ಹೊಂದಿರುವ ಮೊಬೈಲ್ ಚಾರ್ಜರ್‌ನಂತೆ ಇಕೊ ಫ್ಲೆಕ್ಸ್ ಸ್ಪೀಕರನ್ನು ಅಗತ್ಯವಿರುವ ಎಲ್ಲಿ ಬೇಕಾದರೂ ಅಳವಡಿಸಿಕೊಳ್ಳಬಹುದು.

ಫಿಲಿಪ್ಸ್, ಸಿಸ್ಕಾ ಎಲ್‌ಇಡಿ ಸೇರಿದಂತೆ ಲಭ್ಯವಿರುವ ಸ್ಮಾರ್ಟ್ ಲೈಟ್‌ಗಳೊಂದಿಗೆ ಇಕೊ ಫ್ಲೆಕ್ಸ್ ಸಂಪರ್ಕ ಕಲ್ಪಿಸಿ ಮನೆಯ ಬೆಳಕಿನನಿರ್ವಹಣೆ ಮಾಡಬಹುದು. ಭಾರತದಲ್ಲಿ ಈ ಸ್ಪೀಕರ್‌ಗೆ ₹2,999 ನಿಗದಿಯಾಗಿದ್ದು, ಮುಂದಿನ ತಿಂಗಳಿನಿಂದ ಗ್ರಾಹಕರ ಬಳಕೆಗೆ ಸಿಗಲಿದೆ.

ಎಕೊ ಫ್ಲೆಕ್ಸ್‌ನೊಂದಿಗೆ ಬ್ಲೂಟೂತ್ ಮೂಲಕ ಮತ್ತೊಂದು ಸ್ಪೀಕರ್ ಸಂಪರ್ಕಿಸಬಹುದು ಅಥವಾ 3.5 ಎಂಎಂ ಹೆಡ್‌ಫೋನ್ ಕೇಬಲ್ ಸಹ ಬಳಸಬಹುದು. ಇದು ಯುಎಸ್‌ಬಿ–ಎ ಪೋರ್ಟ್ ಸಹ ಹೊಂದಿದ್ದು, ಮೊಬೈಲ್ ಫೋನ್‌ಚಾರ್ಜ್ ಮಾಡಲು ಬಳಸಬಹುದು.

ಈ ಸ್ಪೀಕರ್ ಅಂಗೈ ಅಗಲವಿದ್ದು(72*67*52 ಮಿ.ಮೀ), ಕೇವಲ 150 ಗ್ರಾಂ ತೂಕವಿದೆ. 2.4 ಗಿಗಾ ಹರ್ಟ್ಸ್ ಮತ್ತು 5 ಗಿಗಾ ಹರ್ಟ್ಸ್ ಬ್ಯಾಂಡ್ ವೈ–ಫೈ ಜತೆಗೆ ಸಂಪರ್ಕ ಹೊಂದುತ್ತದೆ. ಬಿಲ್ಟ್ ಇನ್ ಸ್ಪೀಕರ್, ಯುಎಸ್‌ಬಿ–ಎ ಪೋರ್ಟ್(7.5 ವ್ಯಾಟ್ಸ್) ಒಳಗೊಂಡಿದೆ. ಆ್ಯಂಡ್ರಾಯ್ಡ್, ಐಒಎಸ್ ಹಾಗೂ ಫೈರ್ ಒಎಸ್‌ನಲ್ಲಿ ಲಭ್ಯವಿರುವ ಅಲೆಕ್ಸಾ ಅಪ್ಲಿಕೇಷನ್ ಮೂಲಕ ಇಕೊ ಫ್ಲೆಕ್ಸ್ ಸ್ಪೀಕರ್ ನಿಯಂತ್ರಿಸಲು ಸಾಧ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.