ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹು ಸಾಧನಗಳ ಚಾರ್ಜಿಂಗ್‌ಗಾಗಿ AeroSync 65 All In One ಪವರ್ ಬ್ಯಾಂಕ್ ಬಿಡುಗಡೆ

Published : 16 ಸೆಪ್ಟೆಂಬರ್ 2024, 11:48 IST
Last Updated : 16 ಸೆಪ್ಟೆಂಬರ್ 2024, 11:48 IST
ಫಾಲೋ ಮಾಡಿ
Comments

ನವದೆಹಲಿ: ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಚಾರ್ಜಿಂಗ್ ಉತ್ಪನ್ನಗಳ ತಯಾರಿಕೆಯಲ್ಲಿ ಅಗ್ರ ಗಣ್ಯ ಸಂಸ್ಥೆಯಾಗಿರುವ Ambrane India(ಆ್ಯಂಬ್ರೇನ್ ಇಂಡಿಯಾ) ಬಹು ಸಾಧನಗಳನ್ನು ಚಾರ್ಜ್ ಮಾಡಬಲ್ಲ, ಟ್ರಾವೆಲ್ಲರ್‌ಗಳಿಗೆ ಅತ್ಯಂತ ಅನುಕೂಲಕರವಾದ AeroSync 65 ಆಲ್‌ ಇನ್ ಒನ್ ಪವರ್ ಬ್ಯಾಂಕ್ ಅನ್ನು ಬಿಡುಗಡೆ ಮಾಡಿದೆ.

ಈ ನವೀನ 4 ಇನ್ 1 ಸಾಧನವು ವಾಲ್ ಚಾರ್ಜರ್, ವೈರ್ ಪವರ್ ಬ್ಯಾಂಕ್, ಅಂತರ್ಗತ ಟೈಪ್ ಸಿ ಕೇಬಲ್ ಮತ್ತು ಮ್ಯಾಗ್‌ಸೇಫ್ ಪವರ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ತ್ವರಿತ ಚಾರ್ಜಿಂಗ್‌ಗಾಗಿ 65W ಔಟ್‌ಪುಟ್ ಅನ್ನು ನೀಡುತ್ತದೆ. ಯುಎಸ್‌ಬಿ-ಎ, ಟೈಪ್-ಸಿ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪೋರ್ಟ್‌ಗಳೂ ಇವೆ. ಕಾಂಪ್ಯಾಕ್ಟ್ ಏರೋಸಿಂಕ್ 65 ಪವರ್ ಬ್ಯಾಂಕ್ ಪ್ರಯಾಣದಲ್ಲಿರುವಾಗ ತಡೆರಹಿತ ಚಾರ್ಜಿಂಗ್ ಅನ್ನು ಖಾತ್ರಿಗೊಳಿಸುತ್ತದೆ.

ಈ ಪವರ್ ಬ್ಯಾಂಕ್ ಅನ್ನು ಆ್ಯಂಬ್ರೇನ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮತ್ತು ಪ್ರಮುಖ ಇ ಕಾಮರ್ಸ್ ವೇದಿಕೆಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಬಿಡುಗಡೆ ಅವಧಿಯಲ್ಲಿ ₹4,799ಗೆ ಲಭ್ಯವಿರುವ ಈ ಪವರ್ ಬ್ಯಾಂಕ್‌ ಬೆಲೆ ನಂತರ ₹9,999 ಆಗಲಿದೆ. ಇದರ ಜೊತೆಗೆ 180 ದಿನಗಳ ಉತ್ಪಾದನಾ ವಾರೆಂಟಿ ಸಿಗಲಿದೆ.

AeroSync 65 ಆಲ್‌ ಇನ್ ಒನ್ ಪವರ್ ಬ್ಯಾಂಕ್ ವೈಶಿಷ್ಟ್ಯಗಳು

* ಕಾಂಪ್ಯಾಕ್ಟ್ ವಿನ್ಯಾಸ

* ಹ್ಯಾಂಗಿಂಗ್ ಲೂಪ್ ಜೊತೆಗೆ ಲಭ್ಯ

* ಔಟ್‌ಪುಟ್: 65W Max

* ಬ್ಯಾಟರಿ ಸಾಮರ್ಥ್ಯ 15000mAh

* ಚಾರ್ಜರ್‌ ಇನ್‌ಪುಟ್(AC):100-240V-50/60Hz, 0.5A

* ಪವರ್ ಬ್ಯಾಂಕ್ ಇನ್‌ಪುಟ್ (ಟೈಪ್-ಸಿ): 65W Max

* ಔಟ್‌ಪುಟ್ ಪೋರಟ್ಸ್: ಟೈಪ್-ಸಿ (Output 1): 65W Max; Wired Type-C (Output 2): 65W Max; USB-A (Output 3): 18W Max; Wireless (Output 4): 15W Max; Internal AC Adapter (Output 5): 30W Max

* ಒಟ್ಟು ಔಟ್‌ಪುಟ್: 65W Max

* ಸೆಲ್ಫ್ ಚಾರ್ಜಿಂಗ್ ಅವಧಿ: ಎಸಿ ಪೋರ್ಟ್ ಮೂಲಕ 2 ಗಂಟೆ, 65W PD ಚಾರ್ಜರ್ ಮೂಲಕ 1 ಗಂಟೆ

ಪೋರ್ಟ್‌ಗಳ ಸಂಖ್ಯೆ: 3 (1 ಟೈಪ್-ಸಿ, 1 ಯುಎಸ್‌ಬಿ-ಎ, 1 ವೈರ್ಡ್ ಟೈಪ್–ಸಿ)

* ಮಲ್ಟಿಪಲ್ ಲೇಯರ್‌ನ ಚಿಪ್‌ಸೆಟ್ ಪ್ರೊಟೆಕ್ಷನ್

* ಬ್ಯಾಟರಿ ಲೆವೆಲ್ ಕುರಿತು ಡಿಜಿಟಲ್ ಡಿಸ್‌ಪ್ಲೆ

* ಕಂಪ್ಯಾಟಿಬಿಲಿಟಿ : ಟೈಪ್-ಸಿ ಮತ್ತು ಯುಎಸ್‌ಬಿ-ಎ ಇರುವ ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಟೈಪ್-ಸಿ ಪೋರ್ಟ್ ಮೂಲಕ ಲ್ಯಾಪ್‌ಟಾಪ್ ಚಾರ್ಜಿಂಗ್ ಮಾಡಬಹುದು.

* ಬಿಐಎಸ್ ಪ್ರಮಾಣಿಕೃತ

* ಮೇಡ್ ಇನ್ ಇಂಡಿಯಾ

*180 ದಿನಗಳ ತಯಾರಿಕಾ ವಾರೆಂಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT