ಬೆಂಗಳೂರು: ಟೆಕ್‌ಲೋಕದ ಪ್ರೀಮಿಯಂ ಬ್ರ್ಯಾಂಡ್ ಎಂದೇ ಹೆಸರು ಗಳಿಸಿರುವ ಆ್ಯಪಲ್, ಮ್ಯಾಕ್‌ಬುಕ್ ಪ್ರೊ ಮತ್ತು ಮ್ಯಾಕ್ ಮಿನಿ ಸರಣಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಿದೆ.

ಮ್ಯಾಕ್‌ಬುಕ್ ಪ್ರೊ 14
ಆ್ಯಪಲ್ ಮ್ಯಾಕ್‌ಬುಕ್ ಪ್ರೊ ಆವೃತ್ತಿಯಲ್ಲಿ ಹೊಸ 14 ಇಂಚು ಮತ್ತು 16 ಇಂಚಿನ ಡಿಸ್‌ಪ್ಲೇ ಹೊಂದಿರುವ ಮಾದರಿಗಳು ಬಿಡುಗಡೆಯಾಗಿವೆ. 14 ಇಂಚಿನ ಮ್ಯಾಕ್‌ಬುಕ್ ಪ್ರೊ, ಆ್ಯಪಲ್ ಎಂ2 ಪ್ರೊ ಮತ್ತು ಎಂ2 ಮ್ಯಾಕ್ಸ್ ಪ್ರೊಸೆಸರ್ ಸಹಿತ ಲಭ್ಯವಿದೆ.

ಹೊಸ ಮಾದರಿಯ ದರ ದೇಶದಲ್ಲಿ ₹1,99,900 ರಿಂದ ಆರಂಭವಾಗಿ ₹3,09,900ರವರೆಗೆ ಇರಲಿದೆ. 16 GB RAM ನಿಂದ ಆರಂಭವಾಗಿ, 96 GB ವರೆಗೆ RAM ಆವೃತ್ತಿಯಲ್ಲಿ ದೊರೆಯಲಿದೆ ಎಂದು ಆ್ಯಪಲ್ ಹೇಳಿದೆ. ಜತೆಗೆ 512GB SSD ಸ್ಟೋರೇಜ್‌ನಿಂದ ಆರಂಭವಾಗಿ, 8TB ವರೆಗಿನ ಸ್ಟೋರೇಜ್ ಮಾದರಿಯಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಸಿಲ್ವರ್ ಮತ್ತು ಸ್ಪೇಸ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಹೊಸ ಮ್ಯಾಕ್ ದೊರೆಯಲಿದೆ.

ಆ್ಯಪಲ್ ಮ್ಯಾಕ್‌ಬುಕ್ ಪ್ರೊ 16
ಮ್ಯಾಕ್‌ಬುಕ್ ಪ್ರೊ 16 ಆವೃತ್ತಿಯಲ್ಲಿ 16 GB RAM ನಿಂದ ಆರಂಭವಾಗಿ, 96 GB ವರೆಗೆ RAM ಆಯ್ಕೆ, 512GB SSD ಸ್ಟೋರೇಜ್‌ನಿಂದ ಆರಂಭವಾಗಿ, 8TB ವರೆಗಿನ ಸ್ಟೋರೇಜ್ ದೊರೆಯಲಿದೆ. ದರ ₹2,49,900 ರಿಂದ ಆರಂಭವಾಗಿ, ₹3,49,900ರವರೆಗೆ ಇರಲಿದೆ. ಆದರೆ, ನಿಗದಿತ RAM, SSD ಸ್ಟೋರೇಜ್‌ಗಿಂತ ಹೆಚ್ಚಿನ ಆಯ್ಕೆ ಬಯಸಿದಲ್ಲಿ, ಹೆಚ್ಚುವರಿ ಬೆಲೆ ಇರಲಿದೆ ಎಂದು ಕಂಪನಿ ಹೇಳಿದೆ.

Apple Watch | ಮ್ಯಾರಥಾನ್ ಸಂದರ್ಭ ಫಿಟ್ನೆಸ್ ಕಾಪಾಡುವಲ್ಲಿ ಆ್ಯಪಲ್ ವಾಚ್ ನೆರವು

ಮ್ಯಾಕ್ ಮಿನಿ
ಅ್ಯಪಲ್ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾದ ಮ್ಯಾಕ್ ಮಿನಿ, ಹೊಸ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಆ್ಯಪಲ್ ಎಂ2 ಚಿಪ್ ಮತ್ತು ಎಂ2 ಪ್ರೊ ಚಿಪ್ ಜತೆಗೆ ಹೊಸ ಮ್ಯಾಕ್ ಮಿನಿ ಲಭ್ಯವಾಗಲಿದ್ದು, 8 GB RAM ನಿಂದ ಆರಂಭವಾಗಿ, 32 GB ವರೆಗೆ RAM ಆಯ್ಕೆ ಮತ್ತು 256GB SSD ಸ್ಟೋರೇಜ್‌ನಿಂದ ಆರಂಭವಾಗಿ, 8TB ವರೆಗಿನ ಸ್ಟೋರೇಜ್ ದೊರೆಯಲಿದೆ ಎಂದು ಆ್ಯಪಲ್ ಹೇಳಿದೆ.

ಹೊಸ ಮ್ಯಾಕ್ ಮಿನಿ ಎಂ2 ಆವೃತ್ತಿ ದರ ದೇಶದಲ್ಲಿ ₹59,900 ರಿಂದ ಆರಂಭವಾಗಿ, ₹1,29,900ರವರೆಗೆ ಇರಲಿದೆ. ನಿಗದಿತ ಮಾದರಿಗಿಂದ, ಹೆಚ್ಚಿನ ಹಾರ್ಡ್‌ವೇರ್ ವೈಶಿಷ್ಟ್ಯ ಬಯಸಿದಲ್ಲಿ ಬೆಲೆ ವ್ಯತ್ಯಾಸವಾಗಲಿದೆ. ಜತೆಗೆ, ಎಲ್ಲ ಮಾದರಿಯ ಮ್ಯಾಕ್ ಮಿನಿ ಮತ್ತು ಮ್ಯಾಕ್‌ಬುಕ್ ಖರೀದಿದಾರರಿಗೆ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆಗೆ ₹6,000 ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಪ್ರಯೋಜನ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.

ಚೀನಾದಿಂದ ಉತ್ಪಾದನಾ ಘಟಕ ಸ್ಥಳಾಂತರ: ಭಾರತ, ವಿಯೆಟ್ನಾಂನತ್ತ ಮುಖ ಮಾಡಿದ ಆ್ಯಪಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.