ಕ್ಯಾಲಿಪೋರ್ನಿಯಾ: ಅಮೆರಿಕ ಮೂಲದ ಆ್ಯಪಲ್ ಮೊಬೈಲ್ ಕಂಪನಿಯು ತನ್ನ ಬಹುನಿರೀಕ್ಷಿತ ಹಾಗೂ ಹೊಚ್ಚ ಹೊಸ ಐಫೋನ್ 14 ಸರಣಿಯ ಸ್ಮಾರ್ಟ್ಫೋನ್ಗಳನ್ನು ಅನಾವರಣಗೊಳಿಸಿದೆ. ಇದರ ಜೊತೆಗೆ ಹೊಸ ಮಾದರಿಯ ಆ್ಯಪಲ್ ವಾಚ್ ಹಾಗೂಏರ್ಪಾಡ್ಸ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಬುಧವಾರ ರಾತ್ರಿ(ಭಾರತೀಯ ಕಾಲಮಾನದ ಪ್ರಕಾರ)ಕ್ಯಾಲಿಪೋರ್ನಿಯಾದಲ್ಲಿ ಆಯೋಜಿಸಿದ್ದ'ಫಾರ್ ಔಟ್' (Far Out) ಹೆಸರಿನ ಆನ್ಲೈನ್ ಕಾರ್ಯಕ್ರಮದ ಮೂಲಕ ಐಫೋನ್ 14 ಸರಣಿಯ 4 ಹೊಸ ಮಾದರಿಯ ಮೊಬೈಲ್ಗಳನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಸಿಇಒ ಟಿಮ್ ಕುಕ್ ಕಾರ್ಯಕ್ರಮದ ಕೀ ನೋಟ್ ಭಾಷಣ ಮಾಡಿದರು.

ಆಪಲ್ ಐಫೋನ್ 14 ಸರಣಿಯು ಹೊಸ ಸ್ಮಾರ್ಟ್ಫೋನ್ಗಳು

ಐಫೋನ್ 14

ಐಫೋನ್ 14 ಪ್ಲಸ್

ಐಫೋನ್ 14 ಪ್ರೊ

ಐಫೋನ್ 14 ಪ್ರೊ ಮ್ಯಾಕ್ಸ್

ಆ್ಯಪಲ್ 14 ಸರಣಿಯು A16 ಬಯೋನಿಕ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ನೂತನ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಹಿಂಭಾಗದ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ನಲ್ಲಿದೆ. ಅನೇಕ ಹೊಚ್ಚ ಹೊಸ ಫೀಚರ್ಗಳು ಇವೆ.

ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್ಡಿಆರ್ ಡಿಸ್ಪ್ಲೇ ಹೊಂದಿದ್ದು, ಅದೇ ರೀತಿ ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ರೆಟಿನಾ ಎಕ್ಸ್ಡಿಆರ್ ಡಿಸ್ಪ್ಲೇ ಹೊಂದಿದೆ.ಈ ಫೋನ್ಗಳು ಸ್ಪೇಸ್ ಬ್ಲ್ಯಾಕ್, ಗೋಲ್ಡ್, ಸಿಲ್ವರ್ ಬಣ್ಣಗಳಲ್ಲಿ ಲಭ್ಯವಾಗಲಿವೆ.

ಆರಂಭಿಕ ಬೆಲೆ ಎಷ್ಟು?

ಹೊಸ ಐಫೋನ್ 14 ಫೋನ್ ಬೆಲೆಯು ಭಾರತದಲ್ಲಿ₹79,900 ಆರಂಭವಾಗಲಿದೆ.

ಐಫೋನ್ 14 ಪ್ಲಸ್ ಬೆಲೆ ಭಾರತದಲ್ಲಿ ₹89,900 ಆರಂಭವಾಗಲಿದೆ.

ಐಫೋನ್ 14 ಪ್ರೊ ಬೆಲೆ ₹1,29,900 ರಿಂದಆರಂಭವಾಗಲಿದೆ

ಐಫೋನ್ 14 ಪ್ರೊ ಮ್ಯಾಕ್ಸ್ ಬೆಲೆ ₹1,39,900 ರಿಂದ ಆರಂಭವಾಗಲಿದೆ

ಯಾವಾಗ ಸಿಗುತ್ತದೆ?

ಭಾರತ ಸೇರಿದಂತೆ 36 ದೇಶಗಳಲ್ಲಿ ಐಫೋನ್ 14 ಸರಣಿಯ ಮುಂಗಡ ಬುಕಿಂಗ್ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುತ್ತದೆ. ಆದರೆ, ಫೋನ್ಗಳು ಸೆಪ್ಟೆಂಬರ್ 16 ರಿಂದ ಡೆಲಿವರಿ ಸಿಗಲಿವೆ.

ಹೊಸ ಸಿರೀಸ್ ವಾಚ್ಗಳು

ಇದರ ಜೊತೆ ಐಫೋನ್ ತನ್ನ ಅತ್ಯಾಧುನಿಕ 3 ಸ್ಮಾರ್ಟ್ವಾಚ್ಗಳನ್ನು ಅನಾವರಣ ಮಾಡಿದೆ. 8 ನೇ ಸರಣಿ ವಾಚ್,ವಾಚ್ ಎಸ್ಇ ಹಾಗೂ ವಾಚ್ ಅಲ್ಟ್ರಾ ಎಂಬ ಎರಡು ಸ್ಮಾರ್ಟ್ವಾಚ್ಗಳನ್ನು ಆ್ಯಪಲ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಬೆಲೆ ₹26,900– ₹45,900 ಇರಲಿದೆ.

ಏರ್ಪಾಡ್ಸ್ ಪ್ರೊ

ಆ್ಯಪಲ್ ತನ್ನ ಎರಡನೇ ಸರಣಿಯ ಅತ್ಯಾಧುನಿಕ ಏರ್ಪಾಡ್ಸ್ ಪ್ರೊವನ್ನು ಕೂಡ ಇದೇ ಕಾರ್ಯಕ್ರಮದಲ್ಲಿ ಅನಾವರಣ ಮಾಡಿದೆ. ಬೆಲೆ ಭಾರತದಲ್ಲಿ ₹26,900 ಇರಲಿದೆ ಎಂದು ಕಂಪನಿ ತಿಳಿಸಿದೆ. ಆದರೆ., ಈ ಕಾರ್ಯಕ್ರಮದಲ್ಲಿ ಆ್ಯಪಲ್ ಕಂಪನಿ ಎಆರ್/ವಿಆರ್ ಹೆಡ್ಸೆಟ್ ಬಿಡುಗಡೆ ಯಾವಾಗ ಎಂಬುದನ್ನು ಬಾಯಿಬಿಟ್ಟಿಲ್ಲ.

ಜಾಹೀರಾತಿನಲ್ಲಿ ಪರೋಕ್ಷವಾಗಿ ಆ್ಯಪಲ್ ಅನ್ನು ಟೀಕಿಸಿದ ಸ್ಯಾಮ್ಸಂಗ್ ಮೊಬೈಲ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.