ಬೆಂಗಳೂರು: ಆ್ಯಪಲ್ ಮುಂದಿನ ವರ್ಷ ಬಿಡುಗಡೆ ಮಾಡಲಿರುವ ಐಫೋನ್ನಲ್ಲಿ ಟೈಪ್–ಸಿ ಚಾರ್ಜಿಂಗ್ ಪೋರ್ಟ್ ಅಳವಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

2018ರಲ್ಲಿ ಆ್ಯಪಲ್ ಮೊದಲ ಬಾರಿಗೆ ಐಪ್ಯಾಡ್ ಪ್ರೊ ಮಾದರಿಯಲ್ಲಿ ಆ್ಯಪಲ್, ಟೈಪ್–ಸಿ ಪೋರ್ಟ್ ಪರಿಚಯಿಸಿತ್ತು.

ಅದಾದ ಬಳಿಕ, ಪ್ರೊ ಮಾದರಿಯ ಐಪ್ಯಾಡ್ಗಳಲ್ಲಿ ಟೈಪ್–ಸಿ ಚಾರ್ಜರ್ ಅನ್ನೇ ಮುಂದುವರಿಸಲಾಗಿದೆ. ಐಪ್ಯಾಡ್ ಬೇಸಿಕ್ ಮತ್ತು ಏರ್ ಮಾದರಿಗಳಲ್ಲಿ ಲೈಟನಿಂಗ್ ಪೋರ್ಟ್ ಇದೆ.

ಜತೆಗೆ, ಎಲ್ಲ ಹೊಸ ಐಫೋನ್ಗಳಲ್ಲೂ ಲೈಟನಿಂಗ್ ಟು ಟೈಪ್–ಸಿ ಪೋರ್ಟ್, ಕೇಬಲ್ ನೀಡಲಾಗುತ್ತಿದೆ.

ಮಾರುಕಟ್ಟೆ ವಿಶ್ಲೇಷಕ ಮಿಂಗ್–ಚಿ ಕುವೊ ಪ್ರಕಾರ, ಆ್ಯಪಲ್, ಐಫೋನ್ಗಳಲ್ಲಿ ಟೈಪ್–ಸಿ ಪೋರ್ಟ್ ಬಳಕೆ ಕುರಿತು ಈಗಾಗಲೇ ಪರಿಶೀಲನೆ ನಡೆಸುತ್ತಿದೆ.

ಅಲ್ಲದೆ, ಯುರೋಪಿಯನ್ ಒಕ್ಕೂಟದಿಂದ ಟೈಪ್–ಸಿ ಪೋರ್ಟ್ ಅನ್ನೇ ಎಲ್ಲ ಫೋನ್ಗಳಲ್ಲೂ ಬಳಸಲು ಒತ್ತಾಯಿಸಲಾಗುತ್ತಿದೆ. ಹೀಗಾಗಿ, ಆ್ಯಪಲ್ ಕೂಡ ಅದಕ್ಕೆ ಪೂರಕವಾಗಿ, ಮುಂದೆ ಲೈಟನಿಂಗ್ ಪೋರ್ಟ್ ಬದಲು, ಟೈಪ್–ಸಿ ಪೋರ್ಟ್ ನೀಡುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ.

ಎಲೆಕ್ಟ್ರಾನಿಕ್ ಸಾಮಗ್ರಿಗಳ 'ರಿಪೇರಿಗೂ' ಇದೆ ಹಕ್ಕು!

ಈಗಾಗಲೇ, ಶಓಮಿ, ಒಪ್ಪೋ, ವಿವೊ, ಒನ್ಪ್ಲಸ್, ಸ್ಯಾಮ್ಸಂಗ್ ಮತ್ತು ಇತರ ಬ್ರ್ಯಾಂಡ್ಗಳು ಟೈಪ್–ಸಿ ಫಾಸ್ಟ್ ಚಾರ್ಜಿಂಗ್ ಕೇಬಲ್ ಬಳಸುತ್ತಿವೆ.

ದೇಶದ ಮಾರುಕಟ್ಟೆಗೆ ಹೊಸ ಒನ್ಪ್ಲಸ್ 10R ಸ್ಮಾರ್ಟ್ಫೋನ್ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.